ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Goa| Nightclub ದುರಂತ ಹೇಗಾಯ್ತು| ಎಷ್ಟು ಜನರ ಬಂಧನ ವಿಡಿಯೋ ನೋಡಿ

Goa’s Arpora nightclub fire tragedy, which killed 25 people, has led to the arrest of the club’s general manager, while an arrest warrant has been issued for the owner
03:20 PM Dec 07, 2025 IST | ಶುಭಸಾಗರ್
Goa’s Arpora nightclub fire tragedy, which killed 25 people, has led to the arrest of the club’s general manager, while an arrest warrant has been issued for the owner

Goa| Nightclub ದುರಂತ ಹೇಗಾಯ್ತು| ಎಷ್ಟು ಜನರ ಬಂಧನ ವಿಡಿಯೋ ನೋಡಿ.

Advertisement

Goa/ಪಣಜಿ:- ಪಣಜಿ: ಉತ್ತರ ಗೋವಾದ(goa) ಅರ್ಪೋರಾ ನೈಟ್‌ಕ್ಲಬ್‌ ಅಗ್ನಿ ದುರಂತದಲ್ಲಿ (Goa Nightclub Fire) 25 ಮಂದಿ ಸಜೀವ ದಹನ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಲಬ್‌ನ ಮ್ಯಾನೇಜರ್‌ನನ್ನ (Nightclub Manager) ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಕ್ಲಬ್‌ ಮಾಲೀಕನ ವಿರುದ್ಧವೂ ಅರೆಸ್ಟ್‌ ವಾರಂಟ್‌ ಜಾರಿಗೊಳಿಸಿದ್ದಾರೆ ಎಂದು ವರದಿಯಾಗಿದೆ.

Goa |ಗೋವಾ ಕ್ಲಬ್ ನಲ್ಲಿ ಬೆಂಕಿ ಅವಘಡ 23 ಜನ  ಸಜೀವ ದಹನ 

ಪ್ರಕರಣ ಸಂಬಂಧ ಅರ್ಪೋರಾ ಠಾಣೆಯಲ್ಲಿ (Arpora Police Station) ಎಫ್‌ಐಆರ್‌ ದಾಖಲಾಗಿದ್ದು, ಅಗ್ನಿ ಸುರಕ್ಷತಾ ನಿಯಮ ಪಾಲಿಸದೇ ನಿರ್ಲಕ್ಷ್ಯ ವಹಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಹೀಗಾಗಿ ಪ್ರಧಾನ ವ್ಯವಸ್ಥಾಪಕನನ್ನ ಬಂಧಿಸಲಾಗಿದ್ದು, ಮಾಲೀಕನ ವಿರುದ್ಧವೂ ವಾರಂಟ್‌ ಜಾರಿಗೊಳಿಸಲಾಗಿದೆ.

Advertisement

ಮ್ಯಾಜಿಸ್ಟ್ರೇಟ್‌ ತನಿಖೆಗೆ ಗೋವಾ ಸಿಎಂ ಆದೇಶ.

ಕ್ಲಬ್ ನ ಒಳಭಾಗದ ದೃಶ್ಯ

ಅರ್ಪೋರಾದ ನೈಟ್‌ ಕ್ಲಬ್‌ ಅಗ್ನಿ ಅವಘಡ ಕುರಿತು ಮ್ಯಾಜಿಸ್ಟ್ರೇಟ್‌ ತನಿಖೆಗೆ ಸಿಎಂ ಡಾ. ಪ್ರಮೋದ್‌ ಸಾವಂತ್‌ (Pramod Sawant) ಆದೇಶಿಸಿದ್ದಾರೆ. ಈಗಾಗಲೇ ಜನರಲ್‌ ಮ್ಯಾನೇಜರ್‌ನನ್ನ ಬಂಧಿಸಿದ್ದು, ಮಾಲೀಕನ ವಿರುದ್ಧ ಎಫ್‌ಐಆರ್‌ ದಾಖಲಿಸಿ ವಾರಂಟ್‌ ಜಾರಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೇ ಕ್ಲಬ್‌ ಅಗ್ನಿ ಸುರಕ್ಷತಾ ಮಾನದಂಡಗಳನ್ನ ಪಾಲಿಸಿದೆಯೇ ಎಂಬುದನ್ನೂ ಕೂಡ ಪತ್ತೆ ಮಾಡಬೇಕಿದೆ. ಕ್ಲಬ್‌ ಯಾವ್ಯಾವ ಅನುಮತಿಗಳನ್ನ ಪಡೆದುಕೊಂಡಿದೆ, ಯಾರು ಅನುಮತಿ ಕೊಟ್ಟಿದ್ದಾರೆ ಎಲ್ಲವನ್ನೂ ಬಯಲಿಗೆಳೆಯಬೇಕು ಎಂದು ಸೂಚಿಸಿದ್ದಾರೆ.

ಏನಿದು ದುರಂತ?

ಕ್ಲಬ್ ನ ಒಳಭಾಗದಲ್ಲಿ ಎಲ್ಲವೂ ನಾಶವಾಗಿರುವ ಚಿತ್ರ. ಸ್ಥಳ-ಗೋವಾ.

ಉತ್ತರ ಗೋವಾದ ಅರ್ಪೋರಾದ ರೋಮಿಯೋ ಲೇನ್‌ನಲ್ಲಿರುವ ಫೇಮಸ್ ನೈಟ್ ಕ್ಲಬ್‌ನಲ್ಲಿ ತಡರಾತ್ರಿ 1 ಗಂಟೆ ಸುಮಾರಿಗೆ ಅಗ್ನಿ ಅವಘಡ ಸಂಭವಿಸಿದೆ. ಕ್ಲಬ್ ಮುಚ್ಚಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾಗ ಅಡುಗೆ ಮನೆಯ ಬಳಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಅವಘಡ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಕೆಲವೇ ಸೆಕೆಂಡುಗಳಲ್ಲಿ ಇಡೀ ಕಟ್ಟಡಕ್ಕೆ ಬೆಂಕಿ ವ್ಯಾಪಿಸಿದೆ. ಕ್ಲಬ್ ನ ಒಳಗೆ ಲೈಂಟಿಂಗ್ ಗೆ ಸಹಿತ ಷಾರ್ಟ ಸೆರ್ಕ್ಯೂಟ್ ನಿಂದ ಬೆಂಕಿ ತಗುಲಿದೆ .ಘಟನೆಯಲ್ಲಿ ನಾಲ್ವರು ಪ್ರವಾಸಿಗರು, 14 ಮಂದಿ ಕ್ಲಬ್‌ ಸಿಬ್ಬಂದಿ ಮೃತಪಟ್ಟಿದ್ದಾರೆ. ಇನ್ನೂ 7 ಮಂದಿ ಗುರುತು ಪತ್ತೆಗಾಗಿ ತನಿಖೆ ನಡೆಯುತ್ತಿದೆ.

ಸದ್ಯ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಮುಂದಿನ ಕ್ರಮ ಕೈಗೊಂಡಿದೆ.

ಘಟನೆಯಾದ ವಿಡಿಯೋ ನೋಡಿ:-

 

Advertisement
Tags :
Arpora Fire AccidentArpora Police StationBirch Nightclub TragedyFire Explosion GoaGoa Breaking NewsGoa Disaster UpdateGoa FIR NewsGoa Fire InvestigationGoa Nightclub FireGoa Police UpdateIndia Breaking NewsNightclub Manager ArrestNightclub Owner Arrest WarrantPanaji NewsPramod Sawant Order
Advertisement
Next Article
Advertisement