Karnataka| ಘನ ತ್ಯಾಜ್ಯ ನಿರ್ವಹಣೆ -ಮಂಗಳೂರಿನಿಂದ ಬೆಂಗಳೂರಿಗೆ ಹುಳ ತರಲು ಸರ್ಕಾರದ ಚಿಂತನೆ .
Karnataka| ಘನ ತ್ಯಾಜ್ಯ ನಿರ್ವಹಣೆ -ಮಂಗಳೂರಿನಿಂದ ಬೆಂಗಳೂರಿಗೆ ಹುಳ ತರಲು ಸರ್ಕಾರದ ಚಿಂತನೆ.
ಬೆಳಗಾವಿ: ಘನತ್ಯಾಜ್ಯ ನಿರ್ವಹಣೆಗೆ ಮಂಗಳೂರಿನಿಂದ (Mangaluru) ಬೆಂಗಳೂರಿಗೆ (Bengaluru) ಹುಳ ತರಲು ಸರ್ಕಾರ ಚಿಂತನೆ ನಡೆಸಿದೆ.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ಜಿಬಿಎ (GBA) ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಕಸವನ್ನು (Garbage) ಸಂಸ್ಕರಿಸುವ ವಿಚಾರವಾಗಿ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು (Dheeraj Muniraj) ಪ್ರಶ್ನೆ ಕೇಳಿದ್ದರು.
ಇದಕ್ಕೆ ಉತ್ತರ ಕೊಟ್ಟ ಡಿಸಿಎಂ ಡಿಕೆ ಶಿವಕುಮಾರ್, ಮಂಗಳೂರಿನಲ್ಲಿ ಕಸ ಸಂಸ್ಕರಣೆ ಪ್ರಯೋಗದ ಬಗ್ಗೆ ಪ್ರಧಾನಿ ಮೋದಿ (Narendra Modi) ಮನ್ ಕೀ ಬಾತ್ ನಲ್ಲಿ ಉಲ್ಲೇಖಿಸಿದ ಬಗ್ಗೆ ಸದನದಲ್ಲಿ ಹೇಳಿದರು.
Karnataka| ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹೋಟ್ ಅವರ ಮೊಮ್ಮಗನಮೇಲೆ ಪತ್ನಿಯಿಂದ ಪೊಲೀಸರಿಗೆ ದೂರು
ಈ ವೇಳೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ತಮ್ಮ ತೋಟದಲ್ಲಿ ಮಾಡಿರುವ ಹುಳ ಪ್ರಯೋಗದ ಬಗ್ಗೆ ಶಾಸಕ ಸುನೀಲ್ ಕುಮಾರ್ ಪ್ರಸ್ತಾಪಿಸಿದ್ರು. ರಾಜೇಶ್ ನಾಯ್ಕ್ ಪ್ರಯೋಗದ ಬಗ್ಗೆ ವೀಕ್ಷಣೆ ಮಾಡಿ ಎಂದು ಸುನೀಲ್ ಕುಮಾರ್ ಸಲಹೆ ನೀಡಿದರು. ಅಲ್ಲದೆ ವೀಕ್ಷಣೆಗೆ ಬರುವಂತೆ ಶಾಸಕ ರಾಜೇಶ್ ನಾಯ್ಕ್ ಅವರು ಡಿಸಿಎಂ ಅವರನ್ನು ಆಹ್ವಾನಿಸಿದರು.
ಆಗ ವೀಕ್ಷಣೆಗೆ ಬರುವುದಾಗಿ ಹೇಳಿದ ಡಿ.ಕೆ. ಶಿವಕುಮಾರ್ (DK Shivakumar) ಮಂಗಳೂರಿನಲ್ಲಿ ಹುಳದ ಮೂಲಕ ಘನ ತ್ಯಾಜ್ಯ ನಿರ್ವಹಣೆ ಬಗ್ಗೆ ವೀಕ್ಷಿಸಿ ಬೆಂಗಳೂರಿನಲ್ಲಿ ಅದನ್ನು ಅಳವಡಿಸುವ ಬಗ್ಗೆಯೂ ಪರಿಶೀಲಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.