Karwar | ಕನ್ನಡ ವಾಣಿ ವರದಿ ಫಲಶೃತಿ ಬಾಕಿ ಹಣ ಸಂದಾಯ ಮಾಡಿದ ಸುವಾನ್ ಹೋಟಲ್ ಮ್ಯಾನೇಜ್ಮೆಂಟ್ | ಮಾಜಿ ಸಚಿವರ ಕ್ಷಮೆ ಕೇಳಿದ ಸಂತೋಷ್ ತಂಬದ್
Karwar | ಕನ್ನಡ ವಾಣಿ ವರದಿ ಫಲಶೃತಿ ಬಾಕಿ ಹಣ ಸಂದಾಯ ಮಾಡಿದ ಸುವಾನ್ ಹೋಟಲ್ ಮ್ಯಾನೇಜ್ಮೆಂಟ್ | ಮಾಜಿ ಸಚಿವರ ಕ್ಷಮೆ ಕೇಳಿದ ಸಂತೋಷ್ ತಂಬದ್
ಕಾರವಾರ :- ಕನ್ನಡವಾಣಿ ವರದಿ ಬೆನ್ನಲ್ಲೇ ಕಾರವಾರದ(Karwar) ಸದಾಶಿವ ಗಡದಲ್ಲಿ ಇರುವ ಸುವಾನ್ ಲಾಜಿಸ್ಟಿಕ್ & ಹೋಟಲ್ ಸುವಾನ್ ಇಂಟ್ರನ್ಯಾಷನಲ್ ಮ್ಯಾನೇಜ್ಮೆಂಟ್ singenext digital India Private Limited ನ ಬಾಕಿ ಇರುವ ಹಣವನ್ನು ಸಟ್ಲಮೆಂಟ್ ಮೂಲಕ 1 ಲಕ್ಷ ಚಕ್ ನೀಡಿ ಬಗೆಹರಿಸಿದೆ.
ಇನ್ನು ಈ ಹಣದ ಚಕ್ ನನ್ನು ವಿವೇಕ್ ಬಾಂದೇಕರ್ ರವರು ಕಂಪನಿ ಮೂಲಕ ನೀಡಿದ್ದಾರೆ.ಇದಾದ ನಂತರ singenext digital India Private Limited ನ ಮಾಲೀಕ ಸಂತೋಷ್ ತಂಬದ್ ಮಾಜಿ ಸಚಿವ ಆನಂದ್ ಆಸ್ನೋಟಿಕರ್ ಗೆ ಕ್ಷಮೆ ಕೇಳಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಪತ್ರಿಕಾ ಹೇಳಿಕೆ ಏನಿದೆ.?
ಹುಬ್ಬಳ್ಳಿಯ (Hubballi) ಸೈನ್‌ನೆಕ್ಸ್ಟ್ ಡಿಜಿಟಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರಾದ ಸಂತೋಷ್ ಪಿ. ತಾಂಬಡ ಆದ ನಾನು ತಪ್ಪುಗ್ರಹಿಕೆಯಿಂದ ಮಾಜಿ ಸಚಿವ ಆನಂದ ಅಸ್ನೋಟಿಕರ್ ಅವರ ವಿರುದ್ಧ ನನ್ನ ಇನ್ವಾಯ್ಸ್ ಪಾವತಿ ಮಾಡದ ಬಗ್ಗೆ ಆರೋಪ ಮಾಡಿದ್ದೆನು. ಆದರೆ ಅದು ವಾಸ್ತವದಲ್ಲಿ ಹೋಟೆಲ್ ಸುವನ್ ಇಂಟರ್‌ನ್ಯಾಶನಲ್ ಮ್ಯಾನೇಜ್ಮೆಂಟ್‌ನಿಂದ ಎಂದಾಗಬೇಕಾಗಿತ್ತು, ಆ ಹೋಟೆಲ್ ಅನ್ನು ಸುವನ್ ಇಂಟರ್‌ನ್ಯಾಶನಲ್ ತಂಡವೇ ನಿರ್ವಹಿಸುತ್ತದೆ.
ಈಗ ಮ್ಯಾನೇಜ್ಮೆಂಟ್ ಮತ್ತು ನಾನು ಎಲ್ಲಾ ಬಾಕಿಗಳನ್ನು ಪರಿಹರಿಸಿಕೊಂಡಿದ್ದೇವೆ ಮತ್ತು ಈ ವಿಷಯವಾಗಿ ಪರಸ್ಪರ ಒಪ್ಪಿಗೆಯೊಂದಿಗೆ ಬಗೆಹರಿಸಿಕೊಂಡಿದ್ದೇವೆ ಎಂದು ಹೇಳಿದ್ದಾರೆ.
ಇದಲ್ಲದೇ ವಿಡಿಯೋ ವನ್ನು ಸಹ ಮಾಡಿ ಮಾಜಿ ಸಚಿವರಿಗೆ ಕಂಪನಿ ನಿರ್ದೇಶಕ ಸಂತೋಷ್ ರವರು ಕ್ಷಮೆ ಕೋರಿದ್ದಾರೆ.
ಇನ್ನು ಸುವಾನ್ ಲಾಜಿಸ್ಟಿಕ್ & ಹೋಟಲ್ ಸುವಾನ್ ಇಂಟ್ರನ್ಯಾಷನಲ್ ಎಂಬ ಹೆಸರಿನಲ್ಲಿ ಒಂದು ಲಕ್ಷ ಚಕ್ ಅನ್ನು ನೀಡಲಾಗಿದ್ದು ಇದೀಗ ಈ ಪ್ರಕರಣದ ವಿವಾದ ಸಚಿವರಿಗೆ ಕ್ಷಮೆ ಕೇಳುವ ಮೂಲಕ ತೆರೆ ಕಂಡಿದೆ.