Kumta| ನಿಯಮ ಮೀರಿ ಸಾಲ ವಸೂಲಿಗೆ ಇಳಿದ ಬ್ಯಾಂಕ್ ಗೆ ಪಾಠ ಕಲಿಸಿದ ಖ್ಯಾತ ವಕೀಲ ಪ್ರಶಾಂತ್ ನಾಯ್ಕ ಬೆಟಕುಳಿ.
Kumta| ನಿಯಮ ಮೀರಿ ಸಾಲ ವಸೂಲಿಗೆ ಇಳಿದ ಬ್ಯಾಂಕ್ ಗೆ ಪಾಠ ಕಲಿಸಿದ ಖ್ಯಾತ ವಕೀಲ ಪ್ರಶಾಂತ್ ನಾಯ್ಕ ಬೆಟಕುಳಿ.

ಕಾರವಾರ :- ಬ್ಯಾಂಕ್ (bank) ಗಳಲ್ಲಿ ಕೊಟ್ಟ ಸಾಲ ಹಿಂಪಡೆಯಲು ನಿಯಮ ಮೀರಿ ವರ್ತಿಸುವ ವರದಿಗಳು ಆಗಾಗ ಸುದ್ದಿಯಾಗುತ್ತವೆ. ಇತ್ತೀಚೆಗೆ ರಾಜ್ಯ ಸರ್ಕಾರ ಕೂಡ ಬ್ಯಾಂಕ್ ಗಳು ಬೇಕಾ ಬಿಟ್ಟಿ ವಸೂಲಿ ಕ್ರಮ ಜರುಗಿಸದಂತೆ ಕಠಿಣ ನಿಯಮ ಜಾರಿಗೆ ಮಾಡಿದೆ. ಇತ್ತೀಚೆಗೆ ಬ್ಯಾಂಕ್ ಮತ್ತು ಪೈನಾನ್ಸ್ ಗಳು ಅಧಿಕ ಬಡ್ಡಿ, ನಿಯಮ ಬಾಹಿರ ವಸೂಲಿ ಸಂಬಂಧ ಈ ವರ್ಷದಲ್ಲಿ 25 ಕ್ಕೂ ಹೆಚ್ಚು ಪ್ರಕರಣಗಳು ಬ್ಯಾಂಕ್ ,ಮೈಕ್ರೋ ಫೈನಾನ್ಸ್ ವಿರುದ್ಧ ಉತ್ತರ ಕನ್ನಡ ಜಿಲ್ಲೆಯ ಪೊಲೀಸರು ದಾಖಲಿಸಿದ್ದಾರೆ.
Kumta | ಪೊಲೀಸ್ ಚಕ್ ಪೋಸ್ಟ್ ಮೇಲೆ ಹರಿದ ಲಾರಿ , ಬಚಾವ್ ಆದ ಪೊಲೀಸರು.
ಹೀಗಿದ್ದರೂ ಕೆಲವು ಸಹಕಾರಿ/ಮೈಕ್ರೂ ಫೈನಾನ್ಸ್ ಗಳು ನಿಯಮ ಬಾಹಿರವಾಗಿ ಸಾಲಗಾರರನ್ನು ಕಟಕಟೆ ಮೇಲಿರಿಸಿ ಹಿಂಸಿಸುತ್ತಿದೆ.ಇದೀಗ ಇದರ ಬೆನ್ನಲ್ಲೇ ಚಕ್ ಬೌನ್ಸ್ ಪ್ರಕರಣವೊಂದರಲ್ಲಿ ನಿಯಮ ಮೀರಿ ವಸೂಲಿಗೆ ಇಳಿದ ಕುಮಟಾದ ಕೆನರಾ ಕ್ರಡಿಟ್ ಸೌಹಾರ್ದ ಬ್ಯಾಂಕ್ ಗೆ ಕೋರ್ಟ ಶಾಕ್ ನೀಡಿದೆ. ಹೌದು ಹೊನ್ನಾವರದ ಅಲ್ತಾಫ್ ಅಬ್ದುಲ್ ಬೇಗ್ ಎಂಬುವವರು ಬಿಸಿನೆಸ್ ಗಾಗಿ ಕುಮಟಾದ ಕೆನರಾ ಕ್ರಡಿಟ್ ಸೌಹಾರ್ದ ನಿಯಮಿತ ಬ್ಯಾಂಕ್ ನಲ್ಲಿ 2018 ರಲ್ಲಿ 50 ಸಾವಿರ ಸಾಲ ಪಡೆದಿದ್ದರು.
ಆದರೇ ಈ ಸಾಲವನ್ನು ಬಡ್ಡಿ ಸಮೇತ ತೀರಿಸಲು ಅಬ್ದುಲ್ ಬೇಗ್ ವಿಫಲರಾಗುದ್ದರು ಈ ಹಿನ್ನಲೆಯಲ್ಲಿ ಬ್ಯಾಂಕ್ ನಿಂದ ನೋಟಿಸ್ ನೀಡಿದ್ದು 13.01.2022 ರಂದು ₹37,572/- ಮೊತ್ತದ ಕೆನರಾ ಬ್ಯಾಂಕ್ ಕುಮಟಾ ದ ಚಕ್ ನೀಡಿದ್ದರು. ಆದರೇ ಈ ಚಕ್ ಬೌನ್ಸ್ ಆಗಿದೆ.
ಈ ಹಿನ್ನಲೆಯಲ್ಲಿ ಕುಮಟಾ ನ್ಯಾಯಾಲಯದಲ್ಲಿ ಕೆನರಾ ಕ್ರಡಿಟ್ ಸೌಹಾರ್ಧ ಬ್ಯಾಂಕ್ ನಿಂದ ಕೋರ್ಟ ನಲ್ಲಿ ಬ್ಯಾಂಕ್ ನ ನಿರ್ದೇಶಕರೇ ಕುದ್ದು ಪ್ರಕರಣ ದಾಖಲಿಸಿದರು. ಇನ್ನು ಆರೋಪಿ ಪರವಾಗಿ ಕುಮಟಾದ ಖ್ಯಾತ ವಕೀಲರಾದ ಪ್ರಶಾಂತ್ ನಾಯ್ಕ ಬೆಟಕುಳಿ ರವರು ವಾದಿಸಿದ್ದು ,ಬ್ಯಾಂಕ್ ನವರು ನಿಯಮ ಬಾಹಿರವಾಗಿ ಪ್ರಕರಣ ದಾಖಲಿಸಿದ್ದು ಬ್ಯಾಂಕ್ ಗೆ ಸಂಬಂಧಿಸಿದ ಮ್ಯಾನೇಜರ್ ಅಥವಾ ಇವರ ತಸ್ತಮ ಹುದ್ದೆಯಲ್ಲಿ ಇರುವವರು ಪ್ರಕರಣ ದಾಖಲಿಸಬೇಕಿದ್ದು ,ಬ್ಯಾಂಕ್ ನ ನಿರ್ದೇಶಕರು ಭಾಗಿಯಾಗುವಂತಿಲ್ಲ . ಹೀಗಿದ್ದರೂ ನಿಯಮ ಬಾಹಿರವಾಗಿ ಬ್ಯಾಂಕ್ ನ ನಿರ್ದಶಕ ರಂಗನಾಥ್ ದೇವಿದಾಸ್ ಪ್ರಭು ರವರು ತಮ್ಮ ಕರ್ತವ್ಯದ ಪರಿದಿ ಮೀರಿ ,ನಿಯಮ ಬಾಹಿರವಾಗಿ ಪ್ರಕರಣ ದಾಖಲಿಸಿರುವ ಕುರಿತು ವಾದಿಸಿದ್ದರು.
ಇನ್ನು ಕೋರ್ಟಗೆ (court) ಬ್ಯಾಂಕ್ ನಿಂದ ಹಾಜುರಾಗಬೇಕಿದ್ದ ವ್ಯಕ್ತಿಯನ್ನು ಆಯ್ಕೆ ಮಾಡುವ ನಿರ್ದೇಶಕರೇ ಕುದ್ದು ಕೋರ್ಟ ಗೆ ಹಾಜುರಾಗಿದ್ದಾರೆ. ಬ್ಯಾಂಕ್ ನ ಹಣ ರಿಕವರಿಯಲ್ಲಿ ನಿರ್ದೇಶಕರು ಹಸ್ತಕ್ಷೇಪ ಮಾಡುವಂತಿಲ್ಲ. ಇನ್ನು ಕೋರ್ಟ ಗೆ ಹಾಜುರಾಗಲು ಅಥರೈಜೇಷನ್ ಲೆಟರ್ ಸಹ ಇಲ್ಲ. ಈ ಎಲ್ಲಾ ಕಾರಣಗಳನ್ನು ಕೋರ್ಟ ನಲ್ಲಿ ಮನದಟ್ಟು ಮಾಡಿದ್ದು , ನಿಯಮ ಬಾಹಿರವಾಗಿ ದಾಖಲಿಸಿ ಈ ಪ್ರಕರಣವನ್ನು ಆಲಿಸಿದ ಕುಮಟಾದ (kumta)ನ್ಯಾಯಾಲಯದ ನ್ಯಾಯಾಧೀಶರಾದ ಭಾರತಿ ರಾಯಣ್ಣ ರವರು ಆರೋಪಿಯನ್ನು ಆರೋಪದಿಂದ ಕುಲಾಫೆ ಗೊಳಿಸಿ ಆದೇಶ ನೀಡಿದೆ.
Kumta | ವೈದ್ಯಕೀಯ ಪರೀಕ್ಷೆ ವೇಳೆ ಪರಾರಿಯಾಗಿ ಹುಡುಗಿ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲು ಹೋಗಿದ್ದ ಆರೋಪಿ ಸೆರೆ!
ಈ ಮೂಲಕ ಬ್ಯಾಂಕ್ ಗಳ ಬೇಕಾ ಬಿಟ್ಟಿ ವರ್ತನೆ ಹಾಗೂ ನಿಯಮ ಬಾಹಿರ ಚಟುವಟಿಕೆಗಳಿಗೆ ಬ್ರೇಕ್ ಬಿದ್ದಂತಾಗಿದೆ.
