ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Ramnagar | ಹೋಮ್ ಸ್ಟೇ ನಲ್ಲಿ ರೇವ್ ಪಾರ್ಟಿ | ಮಾದಕ ವಸ್ತುಗಳ ಪತ್ತೆ ಮಾಡಿ 150 ಯುವಕ ,ಯುವತಿಯರ ಬಂಧನ

Ramnagar police raided a rave party at Ayyan Retreat Home Stay, arresting over 100 youths for drug use and organizing an illegal event near Bengaluru.
12:58 PM Nov 01, 2025 IST | ಶುಭಸಾಗರ್
Ramnagar police raided a rave party at Ayyan Retreat Home Stay, arresting over 100 youths for drug use and organizing an illegal event near Bengaluru.
Ramnagar police raided a rave party at Ayyan Retreat Home Stay, arresting over 100 youths for drug use and organizing an illegal event near Bengaluru.

Ramnagar | ಹೋಮ್ ಸ್ಟೇ ನಲ್ಲಿ ರೇವ್ ಪಾರ್ಟಿ | ಮಾದಕ ವಸ್ತುಗಳ ಪತ್ತೆ ಮಾಡಿ 150 ಯುವಕ ,ಯುವತಿಯರ ಬಂಧನ.

ರಾಮನಗರ(01 nuvember2025) :- ರಾಮನಗರ (ramnagar) ಖಾಸಗಿ ಹೋಮ್ ಸ್ಟೇ ನಲ್ಲಿ ರೇವ್ ಪಾರ್ಟಿ ಆಯೋಜನೆ ಮಾಡಿ ನೂರಾರು ಯುವಕ-ಯುವತಿಯರಿಗೆ ಮಾದಕವಸ್ತುಗಳನ್ನ ನೀಡಿ ಮೋಜು ಮಸ್ತಿಯಲ್ಲಿ ತೊಡಗಿದ್ದ ತಂಡದ ಮೇಲೆ ಪೊಲೀಸರು ದಾಳಿ ಮಾಡಿ 100ಕ್ಕೂ ಹೆಚ್ಚು ಜನರನ್ನ ವಶಕ್ಕೆ ಪಡೆದಿದ್ದಾರೆ.

Advertisement

 ಇತ್ತೀಚಿಗೆ ಪಾರ್ಟಿ ಹೆಸರಿನಲ್ಲಿ ಮಾದಕ ವಸ್ತುಗಳ ಬಳಕೆ ಮಾಡುವ ಪ್ರಕರಣ ಹೆಚ್ಚಾಗ್ತಿದ್ದು, ಅಂತಹದ್ದೇ ಒಂದು ಪ್ರಕರಣ ರಾಮನಗರದ ಕಗ್ಗಲೀಪುರ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ರೆಸಾರ್ಟ್ ‌ನಲ್ಲಿ ನಡೆದಿದೆ.

Karwar | ಹಣ ಕೊಡದೇ ಪೀಡಿಸಿದ ಮಾಜಿ ಸಚಿವ ಆನಂದ್ ಅಸ್ನೋಟಿಕರ್ | ಹೋಟಲ್ ನ ಬೋರ್ಡ ಕಿತ್ತಿಟ್ಟುಕೊಂಡು ಬಂದ್ರೂ ಸಿಗುತ್ತಿಲ್ಲ ಮಾಡಿದ ಕೆಲಸಕ್ಕೆ ಹಣ!

ಬೆಂಗಳೂರು ದಕ್ಷಿಣ ತಾಲೂಕಿನ ತಗಚಗೆರೆ  ರಸ್ತೆಯಲ್ಲಿರುವ ಅಯ್ಯಾನ್ ರಿಟ್ರೀಟ್ ಹೋಮ್ ಸ್ಟೇ ನಲ್ಲಿ ರೇವ್ ಪಾರ್ಟಿ ನಡೆಯುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ‌ನಡೆಸಿರೋ ಕಗ್ಗಲೀಪುರ ಪೊಲೀಸರು 100ಕ್ಕೂ ಹೆಚ್ಚು ಯುವಕ, ಯುವತಿಯರನ್ನ ಬಂಧಿಸಿದ್ದಾರೆ.

Advertisement

ಪಾರ್ಟಿಯಲ್ಲಿ ಭಾಗಿಯಾಗಿದ್ದ ಯುವಕ, ಯುವತಿಯರು ಬೆಂಗಳೂರು ಮೂಲದವರೆಂದು ತಿಳಿದುಬಂದಿದ್ದು, ವಾಟ್ಸ್ ಆಪ್  ನಲ್ಲಿ ಗ್ರೂಪ್‌ ಮಾಡಿಕೊಂಡು ಪಾರ್ಟಿ ಆಯೋಜನೆ ಮಾಡಲಾಗಿದ್ದು, 19-23 ವರ್ಷದ ವರೆಗಿನ ಯುವಕ-ಯುವತಿಯರು ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ. ಜೆನ್ ಜೀ ಎಂಬ ಹೆಸರಿನ ವಾಟ್ಸಪ್ ಗ್ರೂಪ್ ಮಾಡಿಕೊಂಡು ಪಾರ್ಟಿ ಎಂಟ್ರಿಗೆ ದರ ನಿಗಧಿ ಮಾಡಲಾಗಿತ್ತು ಎನ್ನಲಾಗಿದೆ. ಸದ್ಯ ವಶಕ್ಕೆ ಪಡೆದ ಯುವಕ, ಯುವತಿಯರಿಗೆ ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ಮಾಡಲಾಗಿದೆ.

Karnataka | ಉತ್ತರ ಕನ್ನಡ ಜಿಲ್ಲೆಯ ಯಕ್ಷಗಾನದ ದ್ರೋಣಾಚಾರ್ಯ ಕೆ.ಪಿ ಹೆಗಡೆಗೆ  ರಾಜ್ಯೋತ್ಸವ ಪ್ರಶಸ್ತಿ 

ಇನ್ನೂ ಪ್ರಕರಣ ಕುರಿತು ರಾಮನಗರ ಎಸ್ಪಿ ಶ್ರೀನಿವಾಸ್ ಗೌಡ ಮಾಹಿತಿ ನೀಡಿದ್ದು, ಕಗ್ಗಲೀಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಹೋಮ್ ಸ್ಟೇ ತೆರೆಯಲಾಗಿದೆ. ಯಾವುದೇ ಅನುಮತಿ ಪಡೆಯದೇ ಪಾರ್ಟಿ ಆಯೋಜನೆ ಮಾಡಿದ್ದಾರೆ. ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆ ಕೊಡ್ತಿದ್ದಾರೆ ಅಂತ ಮಾಹಿತಿ ಬಂತು. ಈ ಹಿನ್ನೆಲೆ ಕಗ್ಗಲೀಪುರ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ದಾಳಿ‌ ಮಾಡಲಾಗಿದೆ. ಪಾರ್ಟಿಯಲ್ಲಿ ಸುಮಾರು 100ಕ್ಕೂ ಹೆಚ್ಚು ಜನ ಇದ್ದು, 35 ಯುವತಿಯರು, ಮೂವರು ಅಪ್ರಾಪ್ತರು, ಸೇರಿ 70ಕ್ಕೂ ಹೆಚ್ಚು ಯುವಕರು ಇದ್ದಾರೆ. ಅದರಲ್ಲಿ ಕೆಲವರು ಮಾದಕ ವ್ಯಸನಿಗಳೂ ಇದ್ದಾರೆ. ಸ್ಥಳದಲ್ಲಿ ಕೆಲ ಇಂಜಕ್ಷನ್ ರೀತಿಯ ಮಾದಕ ವಸ್ತುಗಳು ಪತ್ತೆಯಾಗಿದೆ. ವಶಕ್ಕೆ ತೆಗೆದುಕೊಂಡು ಟೆಸ್ಟ್ ಗೆ ಕಳುಹಿಸಿದ್ದೇವೆ. 4ಜನ ಕಾರ್ಯಕ್ರಮ ಆಯೋಕರ ಮೇಲೆ ಪ್ರಕರಣ ದಾಖಲಿಸಿದ್ದೇವೆ. ಎಲ್ಲಾ ವಿದ್ಯಾರ್ಥಿಗಳನ್ನ ಮೆಡಿಕಲ್ ಟೆಸ್ಟ್ ಮಾಡಿಸಿ ಅಡ್ರೆಸ್ ಪಡೆದು ಕಳುಹಿಸಿದ್ದೇವೆ ಎಂದು ಎಸ್ಪಿ ತಿಳಿಸಿದ್ದಾರೆ.

 

Advertisement
Tags :
Ayyan Retreat Home StayBengaluru rave partydrug use BengaluruGen Z WhatsApp group partyKaggalipura police raidKarnataka police newsRamnagar drug caseRamnagar home stay raidramnagar newsRamnagar rave partyrave party 2025rave party arrestrave party Karnataka
Advertisement
Next Article
Advertisement