Sirsi|ರಸ್ತೆಯಲ್ಲಿ ಕಳೆದುಹೋಯ್ತು ಮಧುಮಗಳ ರವಿಕೆ | ವೈರಲ್ ಆಯ್ತು ರಾಜಣ್ಣನ ಬಿಗ್ ಬ್ರೇಕಿಂಗ್ ಸುದ್ದಿ! ಏನಿದು ಗೊತ್ತಾ ?
Sirsi|ರಸ್ತೆಯಲ್ಲಿ ಕಳೆದುಹೋಯ್ತು ಮಧುಮಗಳ ರವಿಕೆ | ವೈರಲ್ ಆಯ್ತು ರಾಜಣ್ಣನ ಬಿಗ್ ಬ್ರೇಕಿಂಗ್ ಸುದ್ದಿ! ಏನಿದು ಗೊತ್ತಾ
Sirsi viral news:- ಕೆಲವೊಮ್ಮೆ ಕೆಲವು ಸುದ್ದಿಗಳು ಬರೆಯುವ ಹಾಗೂ ಗ್ರಹಿಸುವುದು ತಪ್ಪಾದರೇ ಹೇಗೆಲ್ಲಾ ವೈರಲ್ ಆಗಿ ಹಾಸ್ಯಾಸ್ಪದವಾಗುತ್ತದೆ ಎಂದರೇ ಇದಕ್ಕೆ ಶಿರಸಿಯಲ್ಲಿ ವೈರಲ್ ಆದ ಸುದ್ದಿಯೊಂದು ಸಾಕ್ಷಿ.
ಹೌದು ಶಿರಸಿಯಲ್ಲಿ ಮಧುಮಗಳ ರವಿಕೆ (ಬ್ಲೌಸ್ ) ಕಳೆದುಹೋದ ಸುದ್ದಿಯೊಂದು ಸಖತ್ ವೈರಲ್ ಆಗಿದೆ.
ಹೌದು ಶಿರಸಿಯಲ್ಲಿ (sirsi)ವಾಟ್ಸ್ ಆಪ್ ನಲ್ಲಿ ಸುದ್ದಿ ಪ್ರಸಾರ ಮಾಡುವ ವ್ಯಕ್ತಿಯೊಬ್ಬರು ಪ್ರತಿ ದಿನ ಶಿರಸಿ ಭಾಗದ ಘಟನಾವಳಿಗಳನ್ನ ಸುದ್ದಿರೂಪದಲ್ಲಿ ವಾಟ್ಸ್ ಆಪ್ ಮೂಲಕ ನೀಡುತ್ತಾರೆ.
ಅವರು ಶಿರಸಿಯಲ್ಲಿ ಏನೇ ಘಟನೆ ಆದರೂ ಅದನ್ನು ವಾಟ್ಸ್ ಆಪ್ (whatsapp) ಮೂಲಕ ಹಂಚುವುದು ಅವರ ಪ್ರವೃತ್ತಿ.ಹೀಗೆ ಹಂಚುತಿದ್ದ ಸುದ್ದಿಯೊಂದು ಇದೀಗ ವೈರಲ್ ಆಗಿದೆ.
ನಿನ್ನೆ ಸಂಜೆ 6ರಿಂದ6.30ರ ಸಮಯಕ್ಕೆ khb 5ನೇ ಕ್ರಾಸ್ ದಿಂದ ದೊಡ್ನಳ್ಳಿಗೆ ಹೋಗುವ ಮಾರ್ಗದಲ್ಲಿ ಮಧುಮಗಳ ಬ್ಲೌಸ್ ಕಳೆದಿರುತ್ತದೆ.ದಯಮಾಡಿ ಸಿಕ್ಕಿದವರು********ನಂಬರ್ ಗೆ ಕಾಲ್ ಮಾಡಿ ಎಂದು ರಾ***ಬಿಗ್ ಬ್ರೇಕಿಂಗ್ ಎಂದು ಹಾಕಲಾಗಿದೆ.
Sirsi|ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ರೈಲು ಯೋಜನೆ: ಸಚಿವ ಸೋಮಣ್ಣರಿoದ ಭರವಸೆ
ಮಧುಮಗಳ ಬೌಸ್ ಕಳೆದಿರುವುದು ಬಿಗ್ ಬ್ರೇಕಿಂಗ್ ?? ಎಂದು ಜನ ಆಡಿಕೊಂಡರೇ , ಪತ್ರಿಕೋದ್ಯಮ ಮೊಬೈಲ್ ಯುಗದಲ್ಲಿ ಎತ್ತ ಸಾಗಿದೆ ಎಂದು ಜನ ಆಡಿಕೊಳ್ಳುವಂತೆ ಮಾಡಿದ್ದು ,ಕೆಲವರು ಈ ಸುದ್ದಿಯನ್ನ screenshot ಮಾಡಿ ವೈರಲ್ ಮಾಡುತಿದ್ದಾರೆ.
ದಾರಿಯಲ್ಲಿ ಹೋಗುವಾಗ ಮಧುಮಗಳ ಬ್ಲೌಸ್ ಕಳೆಯಿತು ಎಂದರೇ ಏನು ಅರ್ಥ ? ಬ್ಯಾಗಿನಲ್ಲಿ ಇಟ್ಟುಕೊಂಡಿದ್ದಾ? ಅಥವಾ ಹಾಕಿಕೊಂಡಿದ್ದಾ? ಹೀಗೆಲ್ಲಾ ಅರ್ಥ ಅನರ್ಥಕ್ಕೆ ಕಾರಣವಾದರೇ ,ಈ ಸುದ್ದಿ ಸಂಸದ ಮಾಧ್ಯಮ ಪ್ರಕಟಣೆ ಗ್ರೂಪ್ ನಿಂದ ಹಿಡಿದು ಜಿಲ್ಲೆಯ ಶಾಸಕರು,ಪೊಲೀಸ್ ಅಧಿಕಾರಿಗಳ ವಾಟ್ಸ್ ಅಪ್ ಗ್ರೂಪ್ ಗಳಿಗೆ ಶೇರ್ ಆಗಿವೆ.
ಹೀಗೂ ನಡೆದಿತ್ತು.!
ಬಹಳಾ ವರ್ಷಗಳ ಹಿಂದೆ ತನ್ನ ಕೋಳಿ ಕಳೆದುಹೋಗಿದ್ದಕ್ಕೆ ಠಾಣೆಯ ಮೆಟ್ಟಿಲೇರಿದ್ದ ಯುವಕ ನ ಕತೆ ನೆನಪಾದರೇ , ಅಂಕೋಲದ ಠಾಣೆಯಲ್ಲಿ ಪೊಲೀಸರು ಕೋಳಿಗಳನ್ನ ಜಪ್ತು ಮಾಡಿ ತಂದ ಘಟನೆ ನೆನಪಿಗೆ ತರುತ್ತದೆ. ಇನ್ನು ಇದರ ನೆನಪು ಮಾಡಿಕೊಂಡ ಕೆಲವು ಪೊಲೀಸರು ತಮ್ಮ ಠಾಣೆಗೆ ಬ್ಲೌಸ್ ಕಳೆದಿದೆ ಎಂದು ದೂರು ಬರದಿದ್ದರೆ ಸಾಕು ಎಂದು ಏದುಸಿರು ಬಿಟ್ಟಿದ್ದಾರೆ.
Sirsi|ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ:ಲೈಸೆನ್ಸ್ ರದ್ದು!
ಇಂದಿನ ದಿನಗಳಲ್ಲಿ ಸುದ್ದಿಯ ಪ್ರಾಮುಖ್ಯತೆ ಯಾವುದು ,ಸುದ್ದಿ ಬರವಣಿಗೆ ಹೇಗಿರಬೇಕು ಎಂದು ಅರಿಯದೇ ಪ್ರಮಾದ ಎಸಗುತಿದ್ದಾರೆ.
ಮಾಧ್ಯಮದ ಮೇಲಿನ ಆಸಕ್ತಿಯಿಂದ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಮಾಡುವ ಕಾಯಕದಲ್ಲಿ ಇದ್ದಾರೆ.ಅದು ತಪ್ಪಲ್ಲ.
ಪತ್ರಕರ್ತನಾಗಬೇಕಾದರೇ ಗ್ರಹಿಸುವ ಶಕ್ತಿ ಇರಬೇಕಾಗುತ್ತದೆ. ಆದರೇ ಕೆಲವೊಮ್ಮೆ ಹೀಗೆ ತಕ್ಷಣ ಹಾಕುವ ಅವಸರ ಸುದ್ದಿಗಳು ಅಪಾರ್ಥಕ್ಕೆ ಎಡೆಮಾಡಿಕೊಡುತ್ತದೆ. ಇದರಿಂದ ಓದುಗರಿಗೆ ಮಾಧ್ಯಮದ ಮೇಲೆ ಇರುವ ನಂಬಿಕೆ ಕೆಟ್ಟು ,ಅಪಹಾಸ್ಯಕ್ಕೆ ಒಳಗಾಗುತ್ತದೆ.
ಹಾಗಂತ ಸುದ್ದಿ ಮಾಡಿದ ವ್ಯಕ್ತಿಯನ್ನು ಟೀಕಿಸಲು ಈ ಸುದ್ದಿ ಪ್ರಕಟಿಸಿಲ್ಲ. ಬದಲಾಗಿ ನಮ್ಮನ್ನು ನಾವು ಆತ್ಮ ವಿಮರ್ಷೆ ಮಾಡಿಕೊಳ್ಳುವ ಹಾಗೂ ತಿದ್ದಿಕೊಳ್ಳುವ ದೃಷ್ಟಿ ಯಿಂದ ಬರೆಯಲಾಗಿದೆ.
ಘಟನೆ ಏನಾಗಿತ್ತು?
ವಿವಾಹ ಕಾರ್ಯಕ್ಕೆ ಹೊರಟಿದ್ದ ಮಧುಮಗಳು ಮಾರ್ಗ ಮಧ್ಯದಲ್ಲಿ ತನ್ನ ಬ್ಯಾಗ್ ನಲ್ಲಿ ಇದ್ದ ದುಬಾರಿ ಬೆಲೆಯ ಬ್ಲೌಸ್ ಅನ್ನು ಕಳೆದುಕೊಂಡಿದ್ದಾರೆ. ದಾರಿ ಮಧ್ಯದಲ್ಲೂ ಅಥವಾ ಬೇರೆಡೆ ಬಿದ್ದಿರುವ ಸಾಧ್ಯತೆ ಹಿನ್ನಲೆಯಲ್ಲಿ ತುರ್ತಾಗಿ ವಿವಾಹ ಕಾರ್ಯಕ್ರಮಕ್ಕೆ ಉಡಲು ಬ್ಲೌಸ್ ಅವಷ್ಯಕತೆ ಇತ್ತು. ಹೀಗಾಗಿ ಆಕೆಯ ಕುಟುಂಬದವರು ದಾರಿಯಲ್ಲಿ ಹೋಗುವವರು ಯಾರಾದರೂ ಬಿದ್ದಿರುವುದನ್ನು ಗಮನಿಸಿ ನೀಡಬಹುದು ಎಂಬ ಉದ್ದೇಶವಾಗಿತ್ತು.