For the best experience, open
https://m.kannadavani.news
on your mobile browser.
Advertisement

Cyber crime| ಅಮೆಜಾನ್ ,ಫ್ಲಿಪ್ ಕಾರ್ಟ ಹೆಸರಿನಲ್ಲಿ ವೆಬ್ ಸೈಟ್ ಮೂಲಕ ಗ್ರಾಹಕರಿಗೆ ವಂಚನೆ| ಪತ್ತೆ ಮಾಡೋದು ಹೇಗೆ?

Stay alert against Amazon Flipkart online fraud in India! Learn how cybercriminals use fake websites, phishing links, and WhatsApp messages to scam customers, and how to protect yourself.
03:34 PM Sep 20, 2025 IST | ಶುಭಸಾಗರ್
Stay alert against Amazon Flipkart online fraud in India! Learn how cybercriminals use fake websites, phishing links, and WhatsApp messages to scam customers, and how to protect yourself.
cyber crime  ಅಮೆಜಾನ್  ಫ್ಲಿಪ್ ಕಾರ್ಟ ಹೆಸರಿನಲ್ಲಿ ವೆಬ್ ಸೈಟ್ ಮೂಲಕ ಗ್ರಾಹಕರಿಗೆ ವಂಚನೆ  ಪತ್ತೆ ಮಾಡೋದು ಹೇಗೆ

Cyber crime| ಅಮೆಜಾನ್ ,ಫ್ಲಿಪ್ ಕಾರ್ಟ ಹೆಸರಿನಲ್ಲಿ ವೆಬ್ ಸೈಟ್ ಮೂಲಕ ಗ್ರಾಹಕರಿಗೆ ವಂಚನೆ| ಪತ್ತೆ ಮಾಡೋದು ಹೇಗೆ?

Advertisement

Amazon ,Flipkart Online Fraud 20 September2025 :- ಸಾಲು ಸಾಲು ಹಬ್ಬಗಳು ಬರುತ್ತಿವೆ .ಇದರ ಬೆನ್ನಲ್ಲೇ ಗ್ರಾಹಕರನ್ನು ಸೆಳೆಯಲು ಹಲವು ಆನ್ ಲೈನ್ ಕಂಪನಿಗಳು ಆಫರ್ ಗಳನ್ನು ನೀಡುತ್ತವೆ.

ಇ-ಕಾಮರ್ಸ ಮಾರುಕಟ್ಟೆಯಲ್ಲಿ ಅಮೇಜಾನ್ ,ಪ್ಲಿಪ್ ಕಾರ್ಟ ನಂತಹ ಸಂಸ್ಥೆಗಳು ದೊಡ್ಡ ಹೆಸರು ಮಾಡಿದೆ. ಅಮೇಜಾನ್ ಭಾರತದಲ್ಲಿ 100 ಮಿಲಿಯನ್ ಹೂ ಹೆಚ್ಚು ಗ್ರಾಹಕರನ್ನು ಹೊಂದಿದೆ. ಪ್ಲಿಪ್ ಕಾರ್ಟ 450 ಮಿಲಿಯನ್ ಗೂ ಹೆಚ್ಚು ಗ್ರಾಹಕರನ್ನು ಹೊಂದಿದೆ.ಈ ವರ್ಷ 4995 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ.

ಹೀಗಾಗಿ ಸೈಬರ್ ವಂಚಕರು ಇದನ್ನೇ ಬಂಡವಾಳ ಮಾಡಿಕೊಂಡು ಈ ಸಂಸ್ಥೆಗಳು ಆಫರ್ ನನ್ನು ನೀಡಿದಾಗ ಇದೇ ಸಂಸ್ಥೆಗಳ ಹೆಸರಿನಲ್ಲಿ ಲಿಂಕ್ ಗಳನ್ನು ನೀಡಿ ನೀವು ಕ್ಲಿಕ್ ಮಾಡಿ ನೋಡಿದಾಗ ಅಥವಾ ಪರ್ಚೇಸ್ ಮಾಡಿದಾಗ ನೀವು ವಂಚನೆಗೆ ಒಳಗಾಗುತ್ತೀರ.

ಹೀಗೆ ಸೈಬರ್ ವಂಚನೆಯಲ್ಲಿ ಭಾರತದಲ್ಲಿ 2024 ರ ವರದಿ ಪ್ರಕಾರ ₹11,000 ಕೋಟಿ ಹಣ ವಂಚನೆಯಾಗಿದ್ದು , 6,000 ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ.

ಹೇಗೆ ವಂಚನೆ ಮಾಡಲಾಗುತ್ತದೆ?

*ಆಫರ್ ಲಿಂಕ್ ಗಳನ್ನು ಕಳುಹಿಸಲಾಗುತ್ತದೆ.

*ಲಿಂಕ್ ಕ್ಲಿಕ್ ಮಾಡಿದಾಗ ನಿಮ್ಮ ಮೊಬೈಲ್ ಹ್ಯಾಕ್ ಮಾಡುತ್ತಾರೆ

*ಲೋಕಲ್ ವೆಬ್ ಸೈಟ್, ಯೂಟ್ಯೂಬ್ ಮೂಲಕ ಆಫರ್ ಮಾಡಿ ವಂಚಿಸಲಾಗುತ್ತದೆ.

*ಮೆಸೇಜ್ ಲಿಂಕ್,ವಾಟ್ಸ್ ಅಪ್ ,ಫೇಸ್ ಬುಕ್ ಮೂಲಕ ಕೂಡ ವಂಚನೆ ಮಾಡಲಾಗುತ್ತದೆ.

Flipkart ಕ್ಲೋನ್ ಸೈಟ್‌ಗಳು & ಫಿರಿಂಗ್ ಲಿಂಕ್‌ಗಳು: ಬೃಹತ್ ಮಾರಾಟದ ಸಮಯದಲ್ಲಿ (ಉದಾ. Big Billion Days / GOAT sale) ಫ್ರಾಡ್‌ಗಳು Flipkart ನ ನಕಲಿ ವೆಬ್‌ಸೈಟ್‌ಗಳು ಮತ್ತು ಫೋನ್-ಸ್ಪೂಫಿಂಗ್ ಮೂಲಕ ಆಫರ್‌ಗಳ ಲಿಂಕ್ ಹರಡುವ ಮೂಲಕ ಜನರನ್ನು ವಂಚಿಸಲಾಗುತ್ತಿದೆ. ಕೆಲವು ವೆಬ್ ಸೈಟ್ ಪೇಜ್ ನಲ್ಲಿ ಸಹ ಆಫರ್ ನೀಡಿ ವಂಚಿಸಲಾಗುತ್ತದೆ.

ವಾಟ್ಸಪ್/ಎಸ್ಎಂಎಸ್ ಮೂಲಕ ಫಿಷಿಂಗ್ ಮತ್ತು ಮ್ಯಾಲ್ವೇರ್

Karnataka| ಪುಟ್ಟ ಮಗುವನ್ನ ಮಹಡಿ ಮೇಲಿಂದ ತಳ್ಳಿ ಹ*** ಮಾಡಿದ ಮಲತಾಯಿ ಮೂರು ದಿನದ ನಂತರ ಸತ್ಯ ಬಯಲು.

ಇ-ಚಾಲನ್/ಟ್ರಾಫಿಕ್-ಫೈನ್ಸ್ ಎಂಬ ಹೆಸರಿನಲ್ಲಿ ನಕಲಿ SMS/WhatsApp ಸಂದೇಶಗಳಿಂದ ಲಿಂಕ್‌ಗಳನ್ನು ಹರಡಲಾಗುವ, ಮತ್ತು ಕೂಡಿನಿಂದಲೇ APK/ಮ್ಯಾಲ್ವೇರ್ ಡೌನ್‌ಲೋಡ್ ಮಾಡಲು ಲಿಂಕ್ ಸಂದೇಶ ಕಳುಹಿಸಲಾಗುತ್ತದೆ.

ಎಚ್ಚರಿಕೆ ವಹಿಸೋದು ಹೇಗೆ?

ನಿಮ್ಮ ವಾಟ್ಸ್ ಅಪ್ ,ಮೆಸೇಜ್ ಬಾಕ್ಸ್ ಗೆ ಆಫರ್ ಹೆಸರಿನಲ್ಲಿ ಲಿಂಕ್ ಕಳುಹಿಸಿದರೇ ಯಾವುದೇ ಕಾರಣಕ್ಕೂ ಕ್ಲಿಕ್ ಮಾಡಿ ನೋಡಬೇಡಿ.

ನಕಲಿ ಡೊಮೇನ್/ಕ್ಲೋನ್ ಸೈಟ್ (ಹೊಲಿಕೆಯ ಉದ್ದೇಶದಿಂದ ಅಕ್ಷರ ಬದಲಾಗಿಸಿರುವ ಡೊಮೇನ್).

SMS / WhatsApp ಮೂಲಕ “ತತ್ಕ್ಷಣ ಖಾತೆ ಪರಿಶೀಲನೆ” / “Order issue” / “Free voucher” ಲಿಂಕ್‌ಗಳು.

ನಕಲಿ ಕಾಲ್ ಸೆಂಟರ್ ಅಥವಾ ಇಮೇಲ್ ಮೂಲಕ OTP, ಬ್ಯಾಂಕ್ ವಿವರಗಳನ್ನು ಕೇಳುವುದು.

ತಕ್ಷಣ ತೆಗೆದುಕೊಳ್ಳುವುದು ಹೇಗೆ?

1. ಸಂದೇಶ/ಲಿಂಕ್ ಬಂದಾಗ ಅದನ್ನು ಕ್ಲಿಕ್ ಮಾಡಬೇಡಿ — ಬದಲಾಗಿ ಅಧಿಕೃತ ಆಪ್/ವೆಬ್‌ಸೈಟ್‌ನ್ನು ಸ್ವತಃ ತೆರೆಯಿರಿ (amazon.in / flipkart.com).

2. ಯಾರಾದರೂ OTP/UPI PIN/ಬ್ಯಾಂಕ್ ಡೀಟೆಲ್ಸ್ ಕೇಳಿದರೆ ಕೊಡುವುದಿಲ್ಲ.

3. ಸಂದೇಶವನ್ನು Amazon ಗೆ ಫಾರ್ವರ್ಡ್ ಮಾಡಿ (ಅಧಿಕೃತ ರಿಪೋರ್ಟ್‌ ಇಮೇಲ್‌ಗಳು- stop-spoofing@amazon.com, reportascam@amazon.com — Amazon ನ ಮಾರ್ಗದರ್ಶಿಯಲ್ಲಿ ಉಲ್ಲೇಖಿಸಲಾಗಿದೆ). Flipkart ಕೂಡ ತನ್ನ ಫ್ರಾಡ್‌ ರಿಪೋರ್ಟ್ ಪೇಜ್/ಸ್ಟೋರೀಸ್ ನಲ್ಲಿ ಸೂಚನೆಗಳನ್ನು ನೀಡುತ್ತದೆ.

4. ಗಂಭೀರ ಹಣ ಕಳೆದುಕೊಂಡಿದ್ದರೆ ಅಥವಾ ನಿಮ್ಮ ಬ್ಯಾಂಕ್ ಮಾಹಿತಿ ಲಿಕ್ ಆಗಿದ್ದರೆ ತಕ್ಷಣವೇ ಬ್ಯಾಂಕಿಗೆ ಸಂಪರ್ಕಿಸಿ ಮತ್ತು ಪೊಲೀಸರಿಗೆ/ಸೈಬರ್‌ಕ್ರೈಮ್ ಪೋರ್ಟಲ್ ಗೆ ದೂರು ನೀಡಿ

(https://cybercrime.gov.in).

5. ಡೊಮೇನ್ (ವೆಬ್ ವಿಳಾಸ) ನೋಡಿ

ನಿಜವಾದ ಲಿಂಕ್ ಗಳು ಹೀಗಿವೆ:- 

Amazonamazon.in / amazon.com

Flipkartflipkart.com

ನಕಲಿ ಲಿಂಕ್ ಗಳು ಹೀಗಿರಲಿದೆ:-

amaz0n-offer.com (O ಬದಲು 0)

flipkarrt-sale.in (spelling ತಪ್ಪಿದೆ)

.xyz, .top, .club ಹೋಲಿಕೆಯಾಗುವ ಡೊಮೈನ್ ಇರಲಿದೆ.

ಚಿಕ್ಕ spelling ಬದಲಾವಣೆ ಮಾಡಿರುವ ನಕಲಿ ಡೊಮೇನ್‌ಗಳನ್ನು ಬಳಸಿ ಗ್ರಾಹಕರನ್ನು ವಂಚಿಸಲಾಗುತ್ತದೆ.

ಆಫರ್‌ಗಳ ಆಮಿಷ

“₹99ಗೆ iPhone” ಅಥವಾ “Free Gift Voucher” →ಸುಳ್ಳು ಜಾಹಿರಾತು ನೀಡಲಾಗುತ್ತದೆ. ಈರೀತಿಯ ಆಫರ್ ನಿಜವಾಗಿಯೂ ಇಲ್ಲ.

ನಿಜವಾದ ಆಫರ್‌ಗಳು ಯಾವಾಗಲೂ ಅಧಿಕೃತ ಆಪ್ / ವೆಬ್‌ಸೈಟ್ / ಇಮೇಲ್ ಮೂಲಕ ಮಾತ್ರ ಬರುತ್ತವೆ.

6.ಪೇಮೆಂಟ್ / OTP ಕೇಳುವುದು

ನಕಲಿ ವೆಬ್‌ಸೈಟ್‌ಗಳು UPI, Debit Card, OTP, NetBanking ವಿವರಗಳನ್ನು ಕೇಳುತ್ತವೆ.

Amazon / Flipkart OTP ಅನ್ನು ಖಾತೆ ಲಾಗಿನ್ ಅಥವಾ Cash-on-Delivery ದೃಢೀಕರಣಕ್ಕೆ ಮಾತ್ರ ಬಳಸುತ್ತದೆ.

7. ಭಾಷಾ / ವಿನ್ಯಾಸ ದೋಷಗಳು

ನಕಲಿ ಸೈಟ್‌ಗಳಲ್ಲಿ ವ್ಯಾಕರಣ ದೋಷ, ವಿಚಿತ್ರ ಲೋಗೋ, ತೊಂದರೆ ಕೊಡುವ ಇಮೇಜ್‌ಗಳು ಇರುತ್ತವೆ.

ನಿಜವಾದ ಸೈಟ್ ಸದಾ ಪ್ರೊಫೆಶನಲ್ ಆಗಿರುತ್ತದೆ.

8. Whois / Registration ಮಾಹಿತಿ

ನಕಲಿ ಸೈಟ್‌ಗಳು ಕೆಲ ದಿನ/ವಾರಗಳ ಹಿಂದೆ ರಿಜಿಸ್ಟರ್ ಆಗಿರುತ್ತವೆ.

Amazon/Flipkart ಮೂಲ ಡೊಮೇನ್‌ಗಳು ವರ್ಷಗಳ ಹಿಂದೆ (2007/2010 ಮುಂತಾದ) ರಿಜಿಸ್ಟರ್ ಆಗಿವೆ.

ಓದುಗರೇ ಎಚ್ಚರ ಇಂತಹ ನಕಲಿ ಲಿಂಕ್ ಗಳು ನಿಮಗೂ ಬಂದಿರಬಹುದು. ಹೀಗಾಗಿ ಯಾವುದೇ ಲಿಂಕ್ ಕ್ಲಿಕ್ ಮಾಡುವಾಗ ಯೋಚಿಸಿ ,ಜಾಗೃತೆ ವಹಿಸಿ ವ್ಯವಹರಿಸಿ.

ಕಾರವಾರದ ಗಿಲಾನಿ ಸೂಪರ್ ಮಾರ್ಕೆಟ್ ನಲ್ಲಿ ಭರ್ಜರಿ ಆಫರ್ ,ಗ್ರೂಸರಿ ಕರೀದಿ ದಾರರಿಗೆ ಸಿಗಲಿದೆ ಬಂಪರ್ ಬಹುಮಾನ
ಪ್ರಕೃತಿ ಮೆಡಿಕಲ್ ,ಕಾರವಾರ.
Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ