Ankola| ಉಪನ್ಯಾಸಕನ ಲೈಂಕಿಕ ಕಿರುಕುಳ-ವಿದ್ಯಾರ್ಥಿಗಳು,ಪೋಷಕರಿಂದ ಕಾಲೇಜಿಗೆ ಮುತ್ತಿಗೆ.
Ankola| ಉಪನ್ಯಾಸಕನ ಲೈಂಕಿಕ ಕಿರುಕುಳ-ವಿದ್ಯಾರ್ಥಿಗಳು,ಪೋಷಕರಿಂದ ಕಾಲೇಜಿಗೆ ಮುತ್ತಿಗೆ
ಕಾರವಾರ (28 October 2025) :- ಕಾಲೇಜು ಉಪನ್ಯಾಸಕನಿಂದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡುತ್ತಿರುವುದನ್ನು ಖಂಡಿಸಿ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿ ಪೋಷಕರಿಂದ ಕಾಲೇಜಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲದ(ankola) ಪೂಜಗೇರಿ ಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿದೆ.
ಕಾಲೇಜಿನಲ್ಲಿ ಪಾಠ ಮಾಡುವಾಗ ವಿದ್ಯಾರ್ಥಿನಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡುವುದು ಮೊಬೈಲ್ ಗೆ ಅಶ್ಲೀಲ ಮೆಸೇಜ್ ಮಾಡುವುದು ಮಾಡುತಿದ್ದ ಉಪನ್ಯಾಸಕ ರಾಮಚಂದ್ರ ಅಂಕೋಲೆಕರ್ ರ ವಿರುದ್ಧ ಅಂಕೋಲ(ankola) ಠಾಣೆಯಲ್ಲಿ ವಿದ್ಯಾರ್ಥಿನಿ ದೂರು ನೀಡಿದ್ದಾಳೆ.
Ankola| ಪುರಸಭೆ 19 ಸದಸ್ಯರಿಂದ ದಿಢೀರ್ ರಾಜೀನಾಮೆ !? ಅಧ್ಯಕ್ಷರು ಹೇಳಿದ್ದು ಏನು?
ದೂರು ನೀಡಿದರೂ ಯಾವುದೇ ಕ್ರಮ ಜರುಗದ ಹಿನ್ನೆಲೆಯಲ್ಲಿ ಪ್ರತಿಭಟನೆಗಿಳಿದ ಪೋಷಕರು ಹಾಗೂ ವಿದ್ಯಾರ್ಥಿಗಳು ಉಪನ್ಯಾಸಕ ನನ್ನು ಅಮಾನತು ಮಾಡಬೇಕು ಹಾಗೂ ಅವರಿಗೆ ಬೆಂಬಲವಾಗಿ ನಿಂತಿರುವ ಕಾಲೇಜು ಪ್ರಾಂಶುಪಾಲೆ ಯನ್ನು ತನಿಖೆ ಮುಗಿಯುವ ವರೆಗೆ ಬೇರೆಡೆ ವರ್ಗಾಯಿಸಬೇಕು ಎಂದು ಪ್ರತಿಭಟನಾ ನಿರತರು ಆಗ್ರಹಿಸಿದ್ದಾರೆ.