Ankola|ಅಂಕೋಲದ ಬಳಿ ಗ್ಯಾಸ್ ಟ್ಯಾಂಕರ್ ಪಲ್ಟಿ | ಗ್ಯಾಸ್ ಸೋರಿಕೆ ರಾಷ್ಟ್ರೀಯ ಹೆದ್ದಾರಿ 52 ಸಂಚಾರ ಬಂಧ್
Ankola|ಅಂಕೋಲದ ಬಳಿ ಗ್ಯಾಸ್ ಟ್ಯಾಂಕರ್ ಪಲ್ಟಿ | ಗ್ಯಾಸ್ ಸೋರಿಕೆ ರಾಷ್ಟ್ರೀಯ ಹೆದ್ದಾರಿ 52 ಸಂಚಾರ ಬಂಧ್
ಕಾರವಾರ :- ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಗ್ಯಾಸ್ ಸೋರಿಕೆಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ (ankola) ತಾಲೂಕಿನ ರಾಷ್ಟ್ರೀಯ ಹೆದ್ದಾರಿ 52 ರ ಕಂಚಿನ ಬಾಗಿಲು ಬಳಿ ನಡೆದಿದೆ.
Ankola| ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಉಪನ್ಯಾಸಕ ಗೋವಾಕ್ಕೆ ಪರಾರಿ!ಸಹಕರಿಸಿದ ಇಬ್ಬರು ವಶಕ್ಕೆ
ಅಪಘಾತದಲ್ಲಿ ಚಾಲಕನಿಗೆ ಗಂಭೀರ ಗಾಯವಾಗಿದೆ. ಗುಜರಾತ್ ನಿಂದ ಉಡುಪಿ ಕಡೆ ಹೋಗುತಿದ್ದ ಗ್ಯಾಸ್ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಟ್ಯಾಂಕರ್ ನಲ್ಲಿ ಇದ್ದ ಗ್ಯಾಸ್ ಲೀಕ್ ಆಗಿದೆ. ಗಂಭೀರ ಗಾಯಗೊಂಡ ಗ್ಯಾಸ್ ಟ್ಯಾಂಕರ್ ಚಾಲಕ ಅರುಣ್ ಶೇಖ್ (57) ನನ್ನು ಉಡುಪಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
Ankola| ಪುರಸಭೆ 19 ಸದಸ್ಯರಿಂದ ದಿಢೀರ್ ರಾಜೀನಾಮೆ !? ಅಧ್ಯಕ್ಷರು ಹೇಳಿದ್ದು ಏನು?
ಇದಲ್ಲದೇ ಗ್ಯಾಸ್ ಟ್ಯಾಂಕರ್ ನಲ್ಲಿ ಎಥೆನಾಲ್ ಸೋರಿಕೆಯಾದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 52 ರ ಸಂಚಾರ ಬಂದ್ ಮಾಡಿದ್ದು , ಅಂಕೋಲ ದಿಂದ ಮಾದನಗೇರಿ ಹೆದ್ದಾರಿ ಮೂಲಕ ಮಾರ್ಗ ಬದಲು ಮಾಡಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ NDRF ತಂಡ ರವಾನೆ ಮಾಡಲಾಗಿದ್ದು , ಗ್ಯಾಸ್ ಸೋರಿಕೆಯನ್ನು ತಡೆಯಲು ಕ್ರಮ ಕೈಗೊಳ್ಳಲಾಗಿದೆ. ಘಟನೆ ಸಂಭಂಧ ಅಂಕೋಲ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.