Ankola| ಕೇಣಿ ಬಂದರು ವಿರೋಧ ಹೋರಾಟ- ಪಕ್ಷಾತೀತವಾಗಿ ಹೋರಾಟಕ್ಕೆ ವೇದಿಕೆ ಸಿದ್ದ! ಸಭೆ ನಿರ್ಣಯ ಏನು?
ಕೇಣಿ ಬಂದರು ವಿರೋಧ ಹೋರಾಟ- ಪಕ್ಷಾತೀತವಾಗಿ ಹೋರಾಟಕ್ಕೆ ವೇದಿಕೆ ಸಿದ್ದ! ಸಭೆ ನಿರ್ಣಯ ಏನು?
ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಕೇಣಿಯಲ್ಲಿ ಜೆ.ಎಸ್.ಡಬ್ಲು ಕಂಪನಿಯ ಖಾಸಗಿ ಬಂದರು ನಿರ್ಮಾಣಕ್ಕಾಗಿ ನಡೆಯುತಿದ್ದ ಸರ್ವೆ ಕಾರ್ಯಕ್ಕೆ ಸ್ಥಳೀಯ ಮೀನುಗಾರರು ವಿರೋಧ ಪಡಿಸಿ ಪ್ರತಿಭಟಿಸಿದ್ದರು.
ಇದರ ಬೆನ್ನಲ್ಲೇ ಅಂಕೋಲದ ತಹಶಿಲ್ದಾರ್ ಕಚೇರಿಯಲ್ಲಿ ಜಿಲ್ಲಾಧಿಕಾರಿ,ಶಾಸಕರೊಂದಿಗೆ ನಡೆದ ಸಭೆಯು ಸಹ ವಿಫಲವಾಗಿತ್ತು.
ಇದೀಗ ಸರ್ವ ಜನಾಂಗದ ಮುಖಂಡರ ಸಭೆಯನ್ನು ಭಾನುವಾರ ಕೇಣಿ ಬಂದರು ವಿರೋಧಿ ಹೋರಾಟ ಸಮಿತಿ ಆಶ್ರಯದಡಿ ಸಭೆ ನಡೆಸಿ ನಿರ್ಣಯ ಕೈಗೊಳ್ಳಲಾಯಿತು.
ಯಾವುದೇ ಕಾರಣಕ್ಕೂ ಕೇಣಿಯಲ್ಲಿ ಖಾಸಗಿ ಬಂದರು ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಲ್ಲಾ ಜನಾಂಗದವರು ಪ್ರತಿಭಟನೆಯಲ್ಲಿ ಭಾಗಿಯಾಗಬೇಕು. ಸರ್ವೆಕಾರ್ಯ ನಿಲ್ಲಿಸಬೇಕು, ಇದಕ್ಕಾಗಿ ಸರ್ವ ಜನಾಂಗದ ನಾಯಕರು ಪಕ್ಷಾತೀತವಾಗಿ ಪ್ರತಿಭಟನೆ ನಡೆಸಬೇಕು ಎಂಬ ನಿರ್ಣಯ ಕೈಗೊಳ್ಳಲಾಯಿತು.
ವಿಧಾನ ಪರಿಷತ್ ಸದಸದ್ಯ ಗಣಪತಿ ಉಳ್ವೇಕರ್ ಹೇಳಿದ್ದೇನು?
ಕೇಣಿ ಬಂದರು ವಿಚಾರವಾಗಿ ಸರ್ವೆ ನಡೆಯ ಬಾರದೆಂಬುವುದು ನಮ್ಮ ಸ್ಪಷ್ಟ ನಿರ್ಧಾರ ಆಗಿದೆ.ಆದಷ್ಟು ಬೇಗ ಸರ್ವೇ ಕೈ ಬಿಡಬೇಕು ಎಂಬುವುದು ನಮ್ಮ ಆಗ್ರಹ.ಒಂದು ವೇಳೆ ನಮ್ಮ ಮನವಿಗೆ ಸ್ಪಂದಿಸದೆ ಇದ್ರೆ ಉಗ್ರ ಹೋರಾಟ ಮಾಡಲಾಗುವುದು. ಪ್ರತಿಭಟನೆಯಲ್ಲಿ ಏನಾದ್ರೂ ಸಮಸ್ಯೆ ಸಂಭವಿಸಿದ್ರೆ ಅದಕ್ಕೆ ನೇರ ಕಾರಣ ಜಿಲ್ಲಾಡಳಿತ ಆಗುತ್ತೆ.ನಾವು ಕಳೆದ ಒಂದು ವಾರದಿಂದ ಹೋರಾಟ ಮಾಡುತ್ತಿದ್ದೇವೆ ,ನಮ್ಮ ಸಮಾಜದವರೆ ಆಗಿರುವ ಜಿಲ್ಲಾ ಮಂತ್ರಿಗಳು ಒಮ್ಮೆಯೂ ಬಂದು ನಮ್ಮ ಮಾತು ಕೇಳಲಿಲ್ಲ.ಜಿಲ್ಲಾ ಮಂತ್ರಿ ನಮ್ಮ ಸಮಾಜದವರೆ ಅಂತಾ ಹೇಳೊಕೆ ನಾಚಿಕೆ ಆಗುತ್ತೆ.ಆದಷ್ಟು ಬೇಗ ಜಿಲ್ಲಾ ಮಂತ್ರಿ ಸ್ಥಳಕ್ಕೆ ಬಂದು ನಮ್ಮ ಮನವಿ ಕೇಳಬೇಕು ಎಂದರು.
ಕಾರವಾರದ ಶಾಸಕ ಸತೀಶ್ ಸೈಲ್ ಹೇಳಿದ್ದೇನು?
ಕೇಣಿ ಬಂದರು ನಿರ್ಮಾಣದ ವಿಚಾರದಲ್ಲಿ ಸ್ಥಳೀಯರಲ್ಲಿ ಗೊಂದಲ ಇದೆ.ನಾನು ಸ್ಥಳೀಯರ ಜೊತೆ ಇದ್ದೇನೆ, ಖಾಸಗಿ ಕಂಪನಿ ಜೊತೆ ಅಲ್ಲ,ಯಾವ ರೀತಿ ಹೋರಾಟ ಮಾಡಬೇಕು, ಏನ್ ಬೇಡಿಕೆ ಇಡಬೇಕು ಎಂಬುವುದರ ಬಗ್ಗೆ ಸ್ಪಷ್ಟತೆ ಇರಲಿ, ನಿಮ್ಮ ಪರವಾದ ಹೋರಾಟಕ್ಕೆ ನಾನು ಐದು ಪಟ್ಟು ಧನ ಸಹಾಯ ಮಾಡುವುದಕ್ಕೆ ಸಿದ್ದನಿದ್ದೇನೆ.18 ಜನ ಖಾಸಗಿ ಕಂಪನಿಯಿಂದ ಹಣ ಪಡೆದಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ನಿಮ್ಮಲ್ಲಿಯೇ ಇರುವವರು ಕಂಪನಿ ಕಡೆಯಿಂದ ಹಣ ಪಡೆದಿದ್ದಾರೆ,ಯಾವ ವ್ಯಕ್ತಿ ಎಷ್ಟು ಹಣ ಪಡೆದಿದ್ದಾನೆ ಎಂಬುವುದನ್ನ ಗುರುತಿಸಿ ಎಂದರು.