Ankola|ಅಂಕೋಲದಲ್ಲಿ ಪ್ರತಿಬಂಧಕಾಜ್ಞೆ ಮುಂದುವರಿಗೆ| ಹೆದ್ದಾರಿ ಸಂಚಾರಕ್ಕೆಮುಕ್ತ
Ankola|ಅಂಕೋಲದಲ್ಲಿ ಪ್ರತಿಬಂಧಕಾಜ್ಞೆ ಮುಂದುವರಿಗೆ| ಹೆದ್ದಾರಿ ಸಂಚಾರಕ್ಕೆಮುಕ್ತ
ಕಾರವಾರ :- ನಿನ್ನೆದಿನ ಅಂಕೋಲ(ankola) ಭಾಗದ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ಬಿದ್ದ ಟ್ಯಾಂಕರ್ ನನ್ನು ರಾತ್ರಿ ವೇಳೆ ಸುರಕ್ಷಿತವಾಗಿ ಮೇಲೆತ್ತಿ ಹೆದ್ದಾರಿಗೆ ಹಾಕಿದ್ದ ಪ್ರತಿಬಂಧಕಾಜ್ಞೆ ಯನ್ನು ಹಿಂಪಡೆದು ವಾಹನಗಳು ತೆರಳಲು ಅವಕಾಶ ಕಲ್ಪಿಸಿಕೊಡಲಾಗಿದೆ.
ಇನ್ನು ಟ್ಯಾಂಕರ್ ನನ್ನು ಬಾಳೆಗುಳಿ ಕ್ರಾಸ್ ನಲ್ಲಿ ಇರುವ IRB ಕಂಪನಿ ಜಾಗದಲ್ಲಿ ಇರಿಸಲಾಗಿದೆ.
Ankola|ಅಂಕೋಲದ ಬಳಿ ಗ್ಯಾಸ್ ಟ್ಯಾಂಕರ್ ಪಲ್ಟಿ | ಗ್ಯಾಸ್ ಸೋರಿಕೆ ರಾಷ್ಟ್ರೀಯ ಹೆದ್ದಾರಿ 52 ಸಂಚಾರ ಬಂಧ್
ಟ್ಯಾಂಕರ್ ಇಟ್ಟ ಜಾಗದಲ್ಲಿ ಪ್ರತಿಬಂಧಕಾಜ್ಞೆ ಜಾರಿ.
ದಿನಾಂಕ 18-11-2025 ರಂದು ಯಲ್ಲಾಪುರದಿಂದ ಅಂಕೋಲಾ ರಾಷ್ಟ್ರೀಯ ಹೆದ್ದಾರಿ ಅಂಕೋಲಾ ತಾಲೂಕಿನ ಬೊಗ್ರಿಬೈಲ್ ನವಗದ್ದೆ ಹತ್ತಿರ ಮಿಥೇನ್ ಗ್ಯಾಸ್ ಟ್ಯಾಂಕರ ಉರುಳಿ ಟ್ಯಾಂಕನಲ್ಲಿರುವ ಗ್ಯಾಸ್ ಸೊರಿಕೆಯಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆ ಹಿತದೃಷ್ಟಿಯಿಂದ ಅವಘಡಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸದರಿ ಟ್ಯಾಂಕರನ್ನು ಅಂಕೋಲಾ ತಾಲೂಕಿನ ಅಲಗೇರಿ ಗ್ರಾಮದ ಬಾಳೆಗುಳಿ ಕ್ರಾಸ ಹತ್ತಿರ ಇರುವ ಸ.ನಂ 484 ರಲ್ಲಿ ಸ್ಥಳಾಂತರಿಸಲಾಗಿದೆ.
Ankola| ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಉಪನ್ಯಾಸಕ ಗೋವಾಕ್ಕೆ ಪರಾರಿ!ಸಹಕರಿಸಿದ ಇಬ್ಬರು ವಶಕ್ಕೆ
ಸುರಕ್ಷತಾ ಕ್ರಮ ಕೈಗೊಂಡು ಟ್ಯಾಂಕರ ತೆರವುಗೊಳಿಸುವ ಕಾರ್ಯಾಚರಣೆ ಪೂರ್ಣಗೊಳ್ಳುವವರೆಗೆ ಅಥವಾ ಮುಂದಿನ ಆದೇಶದವರೆಗೆ ಸದ್ರಿ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಸಿಬ್ಬಂದಿ/ಅಧಿಕಾರಿಗಳನ್ನು ಹೊರತುಪಡಿಸಿ ಸಾರ್ವಜನಿಕರ ಒಡಾಟ/ವಾಹನಗಳ ಒಡಾಟ/ ವಾಹನಗಳ ನಿಲುಗಡೆ ನಿರ್ಬಂಧಿಸಿ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯ ಪ್ರತಿಬಂಧಕಾಜ್ಞೆ ಹೊರಡಿಸಿದ್ದಾರೆ.