For the best experience, open
https://m.kannadavani.news
on your mobile browser.
Advertisement

Bank ನಿಂದ ಸಾಲಕ್ಕೆ ಲಾರಿ ಜಪ್ತಿ ಟೈರನ್ನೇ ಕದ್ದ ಅಧಿಕಾರಿಗಳು!

ಕಾರವಾರ :- ಪೊಲೀಸ್ ಇಲಾಖೆ ಮತ್ತು ಅಬಕಾರಿ ಇಲಾಖೆಗಳಲ್ಲಿ ಜಪ್ತಿ ಪಡಿಸಿಕೊಂಡ ವಾಹನಗಳ (vehicle loan )ಪಾರ್ಟಗಳೇ ಮಾಯವಾಗುತ್ತೆ ಎಂಬ ಸುದ್ದಿಗಳನ್ನು ಕೇಳಿದ್ದೇವೆ. ಆದ್ರೆ ಯಲ್ಲಾಪುರದ ಬ್ಯಾಂಕ್ ನ ಸಿಬ್ಬಂದಿಗಳು ಜಪ್ತಿ ಪಡಿಸಿದ
09:55 PM Jan 08, 2025 IST | ಶುಭಸಾಗರ್
bank ನಿಂದ ಸಾಲಕ್ಕೆ ಲಾರಿ ಜಪ್ತಿ ಟೈರನ್ನೇ ಕದ್ದ ಅಧಿಕಾರಿಗಳು
Bank Officials seized a truck for a loan default from the bank and ended up stealing its tires.

ಕಾರವಾರ :- ಪೊಲೀಸ್ ಇಲಾಖೆ ಮತ್ತು ಅಬಕಾರಿ ಇಲಾಖೆಗಳಲ್ಲಿ ಜಪ್ತಿ ಪಡಿಸಿಕೊಂಡ ವಾಹನಗಳ (vehicle loan )ಪಾರ್ಟಗಳೇ ಮಾಯವಾಗುತ್ತೆ ಎಂಬ ಸುದ್ದಿಗಳನ್ನು ಕೇಳಿದ್ದೇವೆ. ಆದ್ರೆ ಯಲ್ಲಾಪುರದ ಬ್ಯಾಂಕ್ ನ(Bank) ಸಿಬ್ಬಂದಿಗಳು ಜಪ್ತಿ ಪಡಿಸಿದ ಲಾರಿಯ ಟೈಯರ್ ಕದ್ದು ಲಾರಿಗೆ ಹಳೆ ಟಯರ್ ಹಾಕಿ ತಗಲುಹಾಕಿಕೊಂಡ ಘಟನೆ ನಡೆದಿದೆ.

Advertisement

ಏನಿದು ಘಟನೆ?

ಗ್ಯಾರೇಜಿನಲ್ಲಿ ರಿಪೇರಿಗಾಗಿ ಬಿಟ್ಟಿದ್ದ ಲಾರಿಯನ್ನು ಬ್ಯಾಂಕ್‌ ಸಿಬ್ಬಂದಿ ಏಕಾಏಕಿ ಬಂದು ಜಪ್ತಿ ಮಾಡುವ ಜೊತೆಗೆ ಲಾರಿಯ ಟಾಯರ್ ಕಳವು ಮಾಡಿದ ಘಟನೆ ಯಲ್ಲಾಪುರದಲ್ಲಿ ನಡೆದಿದ್ದು ದೂರು ನೀಡಿದರೂ ಪೊಲೀಸ್ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಿಲ್ಲ‌ ಎಂದು ರಾಜ್ಯ ಲಾರಿ ಮಾಲೀಕರ ಸಂಘದ ಉಪಾಧ್ಯಕ್ಷ ಕೆ.ಎಸ್ ಮಣಿ ಆರೋಪಿಸಿದ್ದಾರೆ.

ಇದನ್ನೂ ಓದಿ:-Karnataka|ಎರಡು ದಶಕದ ನಕ್ಸಲ್ ಹೋರಾಟಕ್ಕೆ ತೆರೆ ಆರು Naxals ಮುಖ್ಯಮಂತ್ರಿ ಮುಂದೆ ಶರಣಾಗತಿ.

ಕಾರವಾರ(karwar) ನಗರದ ಪತ್ರಿಕಾಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು
ಯಲ್ಲಾಪುರ ಮೂಲದ ಮಹಮದ್ ರಫೀಕ್‌ ಎನ್ನುವವರು ಕಳಚೆಯ ಸೈಹಾದ್ರಿ ಸೇವಾ ಸಹಕಾರಿ ಬ್ಯಾಂಕ್ ನಿಂದ 19.58 ಲಕ್ಷ ರೂ ಸಾಲ ಪಡೆದು ಲಾರಿ ಖರೀದಿಸಿದ್ದರು.

ಡಿ.23 ರಂದು ಲಾರಿಯನ್ನು ಹುಬ್ಬಳ್ಳಿಯ ಗ್ಯಾರೇಜ್ ಒಂದರಲ್ಲಿ ರಿಪೇರಿಗೆ ಬಿಡಲಾಗಿತ್ತು. ಈ ವೇಳೆ ಆಗಮಿಸಿದ ಬ್ಯಾಂಕ್ ಸಿಬ್ಬಂದಿ ಲಾರಿಯನ್ನು ಜಪ್ತಿ‌ಮಾಡಿದ್ದಾರೆ.‌ ಆದರೆ ಲಾರಿಯನ್ನು ಬ್ಯಾಂಕಿಗೆ ಕೊಂಡೊಯ್ಯದೇ ಸಿಬ್ಬಂದಿಯೋರ್ವರ ಮನೆಗೆ ಕೊಂಡೊಯ್ದು ಲಾರಿಯ ಟಾಯರ್ ತೆಗೆದು ಬದಲಿಗೆ ಹಳೆಯ ಟಯರ್ ಹಾಕಿದ್ದಾರೆ. ಅಲ್ಲದೇ ಎರಡು ದಿನದ ಬಳಿಕ ಬ್ಯಾಂಕಿನ ಬಳಿ ಲಾರಿ ತಂದು ಇಟ್ಟಿದ್ದಾರೆ ಎಂದು ಆರೋಪಿಸಿದರು.

ಲಾರಿಯ ಟಾಯರ್ ಕಳವು ಮಾಡಿದ ಬಗ್ಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೆ ಸ್ವೀಕರಿಸಿರಲಿಲ್ಲ. ಬಳಿಕ‌ ದೂರು ಸ್ವೀಕರಿಸಿದರೂ ಸರಿಯಾಗಿ ವಿಚಾರಣೆ ನಡೆಸಿಲ್ಲ. ಲಾರಿಯ ಟಾಯರ್ ತೆಗೆದ ಜಾಗದಲ್ಲಿ ಪಂಚನಾಮೆ ನಡೆಸಿಲ್ಲ. ಹೀಗಾಗಿ ಸರಿಯಾದ ಕ್ರಮ ತೆಗೆದುಕೊಳ್ಳುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಲಿದ್ದೇವೆ‌. ಇಲ್ಲವಾದಲ್ಲಿ ಯಲ್ಲಾಪುರ ಪೊಲೀಸ್ ಠಾಣೆಯ ಮುಂಭಾಗ ರಾಜ್ಯ ಲಾರಿ ಮಾಲೀಕರ ಸಂಘದ ವತಿಯಿಂದ ಪ್ರತಿಭಟನೆ ನಡೆಸುತ್ತೇವೆ ಎಂದರು.

ಪತ್ರಿಕಾ ಗೋಷ್ಟಿಯಲ್ಲಿ ರಾಜ್ಯ ಉಪಾಧ್ಯಕ್ಷ ಗಿರೀಶ ಮಲ್ನಾಡು, ಮಾಧವ ನಾಯಕ, ಕಿರಣ ನಾಯ್ಕ, ಶ್ರೀಕೃಷ್ಣ, ನೂರ್ ಭಾಷಾ, ಪ್ರಶಾಂತ‌ನಾಯ್ಕ, ದಿಲೀಪ‌ ಕುಮಾರ, ಸುಜಯ ಮರಾಠಿ, ಕ್ವಾಜಾ ಅಕ್ತರ ಮಹಮದ್ ರಫೀಕ್ ಇದ್ದರು‌.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ