ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Elephant death| ವಿದ್ಯುತ್ ತಂತಿ ತಗಲಿ ಆನೆಗಳು ಸಾವು| ಈ ಸಾವಿನ ಹಿಂದೆ ಸಾವಿರ ಪ್ರಶ್ನೆ! ವಿಡಿಯೋ ನೋಡಿ

Elephant death|two elephants died after coming in contact with a live electric fence in Belagavi’s Khanapur area. Dispute arises over cause — solar or HESCOM line?
09:53 PM Nov 02, 2025 IST | ಶುಭಸಾಗರ್
Elephant death|two elephants died after coming in contact with a live electric fence in Belagavi’s Khanapur area. Dispute arises over cause — solar or HESCOM line?

Elephant death| ವಿದ್ಯುತ್ ತಂತಿ ತಗಲಿ ಆನೆಗಳು ಸಾವು| ಈ ಸಾವಿನ ಹಿಂದೆ ಸಾವಿರ ಪ್ರಶ್ನೆ! ವಿಡಿಯೋ ನೋಡಿ.

ಬೆಳಗಾವಿ (02 November2025):- ಭತ್ತದ ಬೆಳೆಗಳ ರಕ್ಷಣೆಗೆ ಹಾಕಿದ ವಿದ್ಯುತ್ ತಂತಿಬೇಲಿಯ ವಿದ್ಯುತ್ ಹರಿದು ಎರಡು ಆನೆಗಳು ಸಾವು ಕಂಡ ( elephant death) ಘಟನೆ ಬೆಳಗಾವಿ(belagavi) ಜಿಲ್ಲೆಯ ಖಾನಾಪುರ ಗಡಿ ಭಾಗದಲ್ಲಿ ನಡೆದಿದೆ.

Advertisement

ಪ್ರಾಥಮಿಕ ಮಾಹಿತಿಯಂತೆ ಖಾನಾಪುರ ತಾಲ್ಲೂಕಿನ ಸುಲೇಗಾಳಿ ಗ್ರಾಮದ ರೈತ ಗಣಪತಿ ಗುರವ ತಮ್ಮ ಹೊಲದಲ್ಲಿ ಕಾಡು ಪ್ರಾಣಿಗಳಿಂದ ರಕ್ಷಣೆಗಾಗಿ ಸೌರ ಬೇಲಿ ಅಳವಡಿಸಿದ್ದರು. ಆದರೆ ಬೆಳಗಿನ ವೇಳೆಗೆ ಹೆಸ್ಕಾಂ ವಿದ್ಯುತ್ ಲೈನ್ ನ  ತಂತಿ ಮುರಿದು ಬೇಲಿಗೆ ತಗುಲಿ ವಿದ್ಯುತ್ ಹರಿದಿದೆ.

Advertisement

ಇದೇ  ಸಮಯದಲ್ಲಿ ಆಹಾರದ ಹುಡುಕಾಟದಲ್ಲಿ ಬಂದ ಎರಡು ಆನೆಗಳು ಬೇಲಿಯನ್ನು ಸ್ಪರ್ಶಿಸಿ ಸ್ಥಳದಲ್ಲೇ ಕುಸಿದು ಬಿದ್ದವು ಎಂದು ಸ್ಥಳೀಯರು ತಿಳಿಸಿದ್ದಾರೆ.

ಘಟನೆ ಸಂಬಂಧ ಮಾಹಿತಿ ಪಡೆದ ಖಾನಾಪುರ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.

ಸತ್ಯ ಏನು?

Elephant death| ವಿದ್ಯುತ್ ತಂತಿ ತಗಲಿ ಆನೆಗಳು ಸಾವು| ಈ ಸಾವಿನ ಹಿಂದೆ ಸಾವಿರ ಪ್ರಶ್ನೆ! ವಿಡಿಯೋ ನೋಡಿ

ಇನ್ನು ಭತ್ತದ ಗದ್ದೆಗೆ ಅಳವಡಿಸಿದ ಸೌರ ವಿದ್ಯುತ್ ತಂತಿ ಶಾಕ್ ಹೊಡೆದರೂ ಆನೆಗಳು ಸಾವು ಕಾಣಲು ಸಾಧ್ಯವಿಲ್ಲ. ಇನ್ನು ಘಟನೆಯ ನಿಜಾಂಶದ ಬಗ್ಗೆ ವಿವಾದ ಹುಟ್ಟಿದೆ.

Kumta| ನಿಯಮ ಮೀರಿ ಸಾಲ ವಸೂಲಿಗೆ ಇಳಿದ ಬ್ಯಾಂಕ್ ಗೆ ಪಾಠ ಕಲಿಸಿದ ಖ್ಯಾತ ವಕೀಲ ಪ್ರಶಾಂತ್ ನಾಯ್ಕ ಬೆಟಕುಳಿ.

ಹೆಸ್ಕಾಂ ಅಧಿಕಾರಿಗಳು ಹೇಳುವಂತೆ ವಿದ್ಯುತ್ ತಂತಿ ಮುರಿದುಹೋಗಿಲ್ಲ. ರೈತನ ಗುಡಿಸಲಿನ ಸಂಪರ್ಕದಿಂದಲೇ ವಿದ್ಯುತ್ ಶಾಕ್ ಹರಿದಿರಬಹುದು, ಎಂದು ತಿಳಿಸಿದ್ದಾರೆ.

 ಇನ್ನು  ಸ್ಥಳೀಯರು ಹೇಳುವಂತೆ ಸೌರ ಬೇಲಿಯ ಮೇಲೆ ಹೆಸ್ಕಾಂ ನ ವಿದ್ಯುತ್ ತಂತಿ ಹರಿದು ಬಿದ್ದಿದ್ದನ್ನು ನಾವು ಸ್ವತಃ ನೋಡಿದ್ದೇವೆ ಎಂದು ಹೇಳುತ್ತಿದ್ದಾರೆ.

ಇದರಿಂದಾಗಿ ಆನೆಗಳ ಸಾವಿನ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಅರಣ್ಯ ಇಲಾಖೆ ತನಿಖೆ ತನಿಖೆ ಮುಂದುವರೆಸಿದ್ದು, ನಿಜಕ್ಕೂ ಆನೆಗಳು ಸೌರ ಬೇಲಿಯಿಂದಲೇ ಸತ್ತವೋ ಅಥವಾ ಬೇರೆ ವಿದ್ಯುತ್ ಸಂಪರ್ಕದಿಂದ ಸಾವು ಕಂಡಿದೆಯೇ  ಎಂಬ ಪ್ರಶ್ನೆ ಏಳುವಂತೆ ಮಾಡಿದೆ.

Honnavar|KSRTC ಬಸ್ ಗೆ ಡಿಕ್ಕಿಯಾದ ಕಾರು| 11 ಕ್ಕೂ ಹೆಚ್ಚು ಜನರಿಗೆ ಗಾಯ ಓರ್ವ ಸಾವು

ಬೆಳಗಾವಿ ಗಡಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಗಡಿ ಭಾಗದಲ್ಲಿ ಆನೆಗಳು ಸಂಚರಿಸುತ್ತವೆ. ಹಳಿಯಾಳ ಮೂಲಕ ಬೆಳಗಾವಿ ಗಡಿಯ ಕಿತ್ತೂರು ,ಖಾನಾಪುರ ಭಾಗದಲ್ಲಿ ಆನೆಗಳ ಹಿಂಡಿನ ಸಂಚಾರವಿದೆ.

ಇನ್ನು ಭತ್ತ ,ಕಬ್ಬು ಬೆಳೆಯುವ ರೈತನ ಹೊಲಕ್ಕೆ ದಾಳಿ ಇಡುವ ಆನೆಗಳು ಬೆಳೆ ಹಾಳುಮಾಡುತ್ತವೆ ಎಂಬ ಆರೋಪ ಸಾಮಾನ್ಯವಾಗಿದೆ. ಹೀಗಿರುವಾಗ ಕಾಡು ಪ್ರಾಣಿಗಳ ದಾಳಿ ತಡೆಯಲು ಹೋಗಿ ಆನೆಗಳ ಹತ್ಯೆ ಮಾಡಲಾಯಿತಾ ಎಂಬ ಪ್ರಶ್ನೆ ಏಳುವಂತೆ ಮಾಡಿದೆ.

ವಿಡಿಯೋ ನೋಡಿ:-

Advertisement
Tags :
Animal DeathBelagavielectric wireElephant deathFarmersForest DepartmentForest InvestigationHescomHuman-Wildlife ConflictKarnataka newsKhanapurSolar FenceWild ElephantWildlife Protection
Advertisement
Next Article
Advertisement