Bellary| ಜೈಲಲ್ಲಿ ಕೆಟ್ಟ ವರ್ತನೆ ತೋರದಂತೆ ನಟ ದರ್ಶನ್ ಗೆ ವಕೀಲರ ಎಚ್ಚರಿಕೆ.
Bellary:--ನಟ ದರ್ಶನ್ ವರ್ತನೆ ಕುರಿತಾಗಿ ವಕೀಲರು ಬರೆದ ಪತ್ರ ತಲುಪಿದ ಮೆಲೆ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿರುವ ಕೊಲೆ ಆರೋಪಿ ದರ್ಶನ್ ವರ್ತನೆ ಬದಲಾಗಿದೆ. ಜೈಲಿನಲ್ಲಿ ಪದೇ ಪದೇ ದುವರ್ತನೆ ತೋರುತ್ತಿದ್ದ ನಟ ದರ್ಶನ್ (Actor Darshan) ಪತ್ರ ಬರೆದಿದ್ದ ವಕೀಲರು ಎಚ್ಚರಿಸಿದ್ದಾರೆ.
ಮಾಧ್ಯಮಗಳ ಮೇಲೆ ದುರ್ನಡತೆ, ಜೈಲಲ್ಲಿ ಕಿರಿಕ್ ಬಗ್ಗೆ ಪತ್ರ ಬರೆದಿದ್ದ ವಕೀಲರು ಎಚ್ಚರಿಸಿದ್ರು. ವರ್ತನೆ ಬದಲಿಸಿಕೊಳ್ಳದಿದ್ರೆ ಜಾಮೀನು ಅರ್ಜಿ ಹಾಕಿದಾಗ ಸಮಸ್ಯೆ ಆಗುತ್ತೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದೇ ಕಾರಣಕ್ಕೆ ನಿನ್ನೆ ಪತ್ನಿ ಹಾಗೂ ಆಪ್ತರು ಜೈಲಿಗೆ ಬಂದಾಗ ಆರೋಪಿ ದರ್ಶನ್ ನಗು ನಗುತ್ತಾ ಸೆಲ್ ನಿಂದ ಹೊರ ಬಂದಿದ್ರು. ಪತ್ನಿ ಹಾಗೂ ಆಪ್ತರ ಬೇಟಿ ಬಳಿಕವೂ ನಗುತ್ತಲೇ ಸೆಲ್ ಗೆ ಹೋಗಿದ್ರು. ವಕೀಲರ ಪತ್ರ ತಲುಪಿದ ಬಳಿಕ ಕೊನೆಗೂ ಎಚ್ಚೆತ್ತುಕೊಂಡ ದರ್ಶನ್ ಜೈಲಿನಲ್ಲಿ ತಮ್ಮ ವರ್ತನೆ ಬಲಾಯಿಸಿಕೊಂಡಿದ್ದಾರೆ.
ಜಾಮೀನಿನ ಅಭಯ ಬೀಡಿದ ಪತ್ನಿ ವಿಜಯಲಕ್ಷ್ಮಿ.
ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿರುವ ( Bellary
Central Jail) ಆರೋಪಿ ದರ್ಶನ್ ಗೆ ಜಾಮೀನಿನದ್ದೇ ಚಿಂತೆಯಾಗಿದೆ.
ಮಂಗಳವಾರ ಪತ್ನಿ ವಿಜಯಲಕ್ಷ್ಮಿ ಭೇಟಿಗೆ ಬಂದಾಗಲೂ ಇದೇ ವಿಚಾರವನ್ನ ಆರೋಪಿ ದರ್ಶನ್ ಚರ್ಚೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಹೀಗಾಗಿ ಜಾಮೀನಿಗೆ ಅರ್ಜಿ ಹಾಕೋದು ಯಾವಾಗ ಎಂದು ಪತ್ನಿಗೆ ಕೇಳಿದ್ದಾರೆ. ಈ ವೇಳೆ ಎಲ್ಲಾ ಸಾಧಕ, ಬಾಧಕಗಳನ್ನ ನೋಡಿಕೊಂಡು ಜಾಮೀನಿಗೆ ಅರ್ಜಿ ಹಾಕುವುದಾಗಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ತಿಳಿಸಿದ್ದಾರೆ.
ದರ್ಶನ್ ವಿರುದ್ಧ ಸಿಕ್ಕಿರುವ ಪ್ರಭಲ ಸಾಕ್ಷಿಗಳ ಬಗ್ಗೆ ದರ್ಶನ್ ಗಮನಕ್ಕೆ ತಂದಿದ್ದ ವಿಜಯಲಕ್ಷ್ಮಿ, ಏನೇ ಎವಿಡೆನ್ಸ್ ಸಿಕ್ಕಿದ್ರೂ ನಮ್ಮ ವಕೀಲರು ಸ್ಟ್ರಾಂಗ್ ಆಗಿ ವಾದ ಮಾಡ್ತಿದ್ದಾರೆ. ಆದಷ್ಟು ಬೇಗ ಜಾಮೀನಿಗೆ ಅರ್ಜಿ ಹಾಕೋಣ. ಅದರ ಬಗ್ಗೆಯೇ ನಾನು ವಕೀಲರ ಜೊತೆ ನಿತ್ಯ ಸಂಪರ್ಕದಲ್ಲಿದ್ದೇನೆ. ಯಾವುದಕ್ಕೂ ಆತಂಕ ಪಡಬೇಡಿ, ಆದಷ್ಟು ಬೇಗ ಜಾಮೀನಿಗೆ ಅರ್ಜಿ ಹಾಕ್ತೀವಿ ಎಂದು ಹೇಳಿದ್ದಾರೆ. ಬಹುತೇಕ ಇನ್ನೆರಡು ದಿನಗಳಲ್ಲಿ ಜಾಮೀನಿಗೆ ಅರ್ಜಿ ಹಾಕುವ ಸಾಧ್ಯತೆ ಇದೆ ಎನ್ನಲಾಗಿದ್ದು, ಇದೇ ವಿಚಾರವನ್ನು ವಿಜಯಲಕ್ಷ್ಮಿ ದರ್ಶನ್ ಜೊತೆ ನಿನ್ನೆ ಹಲವು ಸಮಯಗಳ ಕಾಲ ಚರ್ಚೆ ನಡೆಸಿದ್ದಾರೆ.

Karwar 18 ವರ್ಷದಿಂದ ತಲೆಮರಸಿಕೊಂಡಿದ್ದ ಕಳ್ಳನ ಬಂಧನ! ಈತ ಮಾಡಿದ್ದೇನು ಗೊತ್ತಾ?

Karwar | ಸತೀಶ್ ಶೈಲ್ ಪರಪ್ಪನ ಅಹ್ರಹಾರ ಜೈಲಿಗೆ ? ಏನಾಗಿತ್ತು ಏನು ಪ್ರಕರಣ ವಿವರ ಇಲ್ಲಿದೆ.

Karwar |ಅದಿರು ನಾಪತ್ತೆ ಪ್ರಕರಣ ಶಾಸಕ ಸತೀಶ್ ಸೈಲ್ ದೋಷಿ

Arecanut price: ಅಡಿಕೆ ಧಾರಣೆ 23 october 2024

Karwar | ಅಕ್ಟೋಬರ್ 26 ಉದ್ಯೋಗ ಮೇಳ ಕೆಲಸ ಹುಡುಕುವವರು ವಿವರ ನೋಡಿ.
ಇದನ್ನೂ ಓದಿ:-Bellary | ಜೈಲಿನ ಮುಂದೆ ನಟ ದರ್ಶನ್ ಮದುವೆಯಾಗಲು ಬಂದ ತ್ರಿಪುರ ಸುಂದರಿ!