DC ಹೆಸರು ದುರುಪಯೋಗ | ಭಟ್ಕಳ ಎಸಿ ಡಾ.ನಯನಾಗೆ ಶೋಕಾಸ್ ನೋಟಿಸ್!
Bhatkal :- ಮೊನ್ನೆ ದಿನ ಬೆಂಗಳೂರು ಮೂಲದ ವಿದ್ಯಾರ್ಥಿ ಗೌತಮ್ ಮುರುಡೇಶ್ವರ (Murdeshwar) ಕಡಲಿನಲ್ಲಿ ಮುಳುಗಿ ಸಾವು ಕಂಡ ಪ್ರಕರಣವನ್ನೇ ನೆಪವಾಗಿಟ್ಟುಕೊಂಡು ಜಿಲ್ಲೆಯಲ್ಲೇ ಅತೀ ಹೆಚ್ಚು ಪ್ರವಾಸಿಗರು ಆಗಮಿಸುವ ಮುರುಡೇಶ್ವರದ ಕಡಲ ತೀರಕ್ಕೆ ಬರುವ ಪ್ರವಾಸಿಗರಿಗೆ ನಿಷೇಧ ವನ್ನು ಭಟ್ಕಳ (Bhatkal)ಎಸಿ ಡಾ.ನಯನಾ ರವರು ಜಿಲ್ಲಾಧಿಕಾರಿ ಗಮನಕ್ಕೆ ತರದೇ ಜಿಲ್ಲಾಧಿಕಾರಿರವರ ಹೆಸರನ್ನು ಬಳಸಿ ಜಿಲ್ಲಾಧಿಕಾರಿ ರವರ ಮೌಖಿಕ ನಿರ್ದೇಶ ಎಂದು ಉಲ್ಲೇಖಿಸಿ ಆದೇಶ ಮಾಡಿದ ಕುರಿತು ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾರವರು ಕಾರಣ ಕೇಳಿ ಭಟ್ಕಳ ಎಸಿ ರವರಿಗೆ ಶೋಕಾಸ್ ನೋಟಿಸ್ ಜಾರಿಮಾಡಿದ್ದಾರೆ.
ಇದನ್ನೂ ಓದಿ:-Murdeshwara| ಮುರ್ಡೇಶ್ವರ ಕಡಲ ತೀರದಲ್ಲಿ ಪ್ರವಾಸಿಗರಿಗೆ ಧಿಡೀರ್ ನಿರ್ಬಂಧ!
ಪ್ರವಾಸೋದ್ಯಮ ನಿರ್ವಹಣ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗಳಿಗೆ ಯಾವುದೇ ಮಾಹಿತಿಯನ್ನು ಭಟ್ಕಳದ ಎಸಿ ರವರು ನೀಡದೇ ಏಕಾ ಏಕಿ ಮುರುಡೇಶ್ವರ ಕಡಲ ತೀರದಲ್ಲಿ ಪ್ರವಾಸಿಗರಿಗೆ ನಿಷೇಧ ಹೇರಿದ್ದರು.
ಇದಲ್ಲದೇ ಪ್ರವಾಸೋದ್ಯಮ ಚಟುವಟಿಕೆ ನಡೆಸುವವರಿಗೂ ನಿರ್ಬಂಧ ವಿಧಿಸಿದ್ದರು.ಇದರಿಂದಾಗಿ ಪ್ರವಾಸೋದ್ಯಮ ಚಟುವಟಿಕೆ ಸಹ ಸಂಪೂರ್ಣ ಬಂದ್ ಆಗಿದ್ದು ,ಕಡಲು ನೋಡಲು ಬಂದ ಪ್ರವಾಸಿಗರು ಹಾಗೆಯೇ ಹಿಂತಿರುಗುವಂತಾಗಿತ್ತು.
ಕಡಲ ತೀರ ಭಾಗದಲ್ಲಿ ಹಲವು ಸಾವುನೋವುಗಳು ಸಂಭವಿಸಿದ್ದರೂ ಮಳೆಗಾಲದಲ್ಲಿ ಹೊರತುಪಡಿಸಿ ಇತರೆ ದಿನದಲ್ಲಿ ಪ್ರವಾಸಿಗರಿಗೆ ಕಡಲ ತೀರಕ್ಕೆ ಪ್ರವೇಶ ನೀಡಲಾಗುತಿತ್ತು. ಆದರೇ ಇದೀಗ ಏಕಾ ಏಕಿ ಜಿಲ್ಲಾಧಿಕಾರಿ ಹೆಸರು ಬಳಸಿ ಅವರ ಗಮನಕ್ಕೂ ತಾರದೇ ಆದೇಶ ಮಾಡಿರುವುದು ಭಟ್ಕಳ ಎಸಿ ರವರು ಯಾರ ಹಿತಕ್ಕಾಗಿ ಹೀಗೆ ಮಾಡಿದ್ದಾರೆ ಎಂಬ ಪ್ರಶ್ನೆ ಏಳುವಂತೆ ಮಾಡಿದೆ.
ಭಟ್ಕಳ ಎಸಿ ಮುರುಡೇಶ್ವರ ಪೊಲೀಸರಿಗೆ ನೀಡಿದ ಆದೇಶ ಪ್ರತಿ.
ಇನ್ನು ಮುರುಡೇಶ್ವರದಲ್ಲಿ ಪ್ರವಾಸೋದ್ಯಮ (Turisem) ನಂಬಿ ಜೀವನ ಕಟ್ಟಿಕೊಂಡ ಸಾವಿರಾರು ಕುಟುಂಬಗಳಿವೆ. ಹೀಗಿದ್ದರೂ ಸಾರ್ವಜನಿಕ ಹಿತಾಸಕ್ತಿಯನ್ನು ಬದಿಗೊತ್ತಿ ಭಟ್ಕಳ ಎಸಿ ರವರುಮಾಡಿದ ಆದೇಶ ಹಲವು ಪ್ರಶ್ನೆಗಳು ಏಳುವಂತೆ ಮಾಡಿದೆ.
ಸದ್ಯ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾರವರು ಭಟ್ಕಳ ಎಸಿ ಗೆ ಕಾರಣ ಕೇಳಿ ಶೋಕಾಸ್ ನೋಟಿಸ್ ನೀಡಿದ್ದಾರೆ.
ಇದನ್ನೂ ಓದಿ:-Murdeshwar| ಸಮುದ್ರದಲ್ಲಿ ಮುಳುಗಿ ವಿದ್ಯಾರ್ಥಿ ಸಾವು-ಓರ್ವನ ರಕ್ಷಣೆ.