For the best experience, open
https://m.kannadavani.news
on your mobile browser.
Advertisement

Bhatkal|ಭಟ್ಕಳ ದೇವಾಲಯದ ಮುಂದೆ ಗೋ ಕಳ್ಳತನ ಆರೋಪಿಗಳ ಬಂಧನ

Bhatkal Town Police have swiftly arrested two individuals involved in the recent cow theft incident that occurred in front of the Sri Hanuman Temple at Chennapattana
01:06 AM Nov 18, 2025 IST | ಶುಭಸಾಗರ್
Bhatkal Town Police have swiftly arrested two individuals involved in the recent cow theft incident that occurred in front of the Sri Hanuman Temple at Chennapattana
bhatkal ಭಟ್ಕಳ ದೇವಾಲಯದ ಮುಂದೆ ಗೋ ಕಳ್ಳತನ ಆರೋಪಿಗಳ ಬಂಧನ
ಬಙಧಿತ ಆರೋಪಿಗಳು

Bhatkal|ಭಟ್ಕಳ ದೇವಾಲಯದ ಮುಂದೆ ಗೋ ಕಳ್ಳತನ ಆರೋಪಿಗಳ ಬಂಧನ

Advertisement

ಕಾರವಾರ :-ಭಟ್ಕಳ (bhatkal) ನಗರ ಠಾಣೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಗೋ ಕಳ್ಳತನ ಮಾಡಿದ್ದ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

 ಭಟ್ಕಳ (bhatkal)ತಾಲೂಕಿನ  ಪುರವರ್ಗದ ನಿವಾಸಿಗಳಾದ  ಮಹ್ಮದ್ ರೆಹೀನ್ (28) ಮತ್ತುಮಹ್ಮದ್  ಫೈಜಾನ್ (25) ಬಂಧಿತರು. ಇನ್ನಿಬ್ಬರು ಪ್ರಕರಣದಲ್ಲಿ ಇರುವ ಸಾಧ್ಯತೆ ಇದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Bhatkal| ಐಷಾರಾಮಿ ಕಾರಿನಲ್ಲಿ ಬಂದು ದೇವಸ್ಥಾನದ ಮುಂದೆಯೇ ಗೋ ಕಳ್ಳತನ | ವಿಡಿಯೋ ನೋಡಿ

ಚೆನ್ನಪಟ್ಟಣದ ಶ್ರೀ ಹನುಮಂತ ದೇವಸ್ಥಾನ ಆವರಣದಿಂದ ಬೆಳಿಗ್ಗೆ 3-15ರ ಸುಮಾರಿಗೆ  ಆರೋಪಿಗಳು ಮಾರುತಿ ಸುಜುಕಿ ಫ್ರಾನ್ ಎಕ್ಸ್ (KA-20 MG-3324) ಕಾರಿನಲ್ಲಿ‌ ಗೋವು‌ ಕದ್ದು‌ ಪರಾರಿಯಾಗಿದ್ದರು.  ಕಾರಿನೊಳಗೆ ಗೋವನ್ನು ಹಿಂಸಾತ್ಮಕವಾಗಿ ಕದ್ದೊಯ್ಯುವ ದೃಶ್ಯ  ಸಿಸಿಟಿವಿಯಲ್ಲಿ‌ ದಾಖಲಾಗಿತ್ತು.

ಗೋವನ್ನು ಕದ್ದೊಯ್ದ ಕಳ್ಳರು ಮೂಢಭಟ್ಕಳ ಬೈಪಾಸ್ ಮಾರ್ಗವಾಗಿ ಪರಾರಿಯಾಗಿದ್ದರೆಂಬ ಮಾಹಿತಿಯನ್ನ ಪೊಲೀಸರು ಕಲೆ ಹಾಕಿದ್ದರು. ವಿಡಿಯೋ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿದ್ದರು. ಚನ್ನಪಟ್ಟಣ ದೇವಸ್ಥಾನ ಆವರಣದಿಂದ ಈ ಹಿಂದೆ ಕೂಡ ಗೋ ಕಳ್ಳತನ ನಡೆದಿರುವ ಹಿನ್ನೆಲೆಯಲ್ಲಿ ಸ್ಥಳೀಯರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದರು.

Bhatkal|ಭಟ್ಕಳದಲ್ಲಿ ಪಾಕಿಸ್ತಾನಿಗಳು | ಉಗ್ರವಾದಿ ಚಟುವಟಿಕೆಯಲ್ಲಿ ಭಾಗಿಯಾದವರೆಷ್ಟು? ತಲೆಮರೆಸಿಕೊಂಡವರೆಷ್ಟು ಇಲ್ಲಿದೆ ಮಾಹಿತಿ

ಸದ್ಯ ಭಟ್ಕಳ ನಗರ ಠಾಣಾ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಮುಂದಿನ ತನಿಖೆ ನಡೆಸುತ್ತಿದ್ದಾರೆ. ಪೊಲೀಸರ ಕ್ಷಿಪ್ರ ಕಾರ್ಯಾಚರಣೆಗೆ ಸ್ಥಳೀಯರಿಂದ ಪ್ರಶಂಸೆ ವ್ಯಕ್ತವಾಗಿದೆ. ಅಲ್ಲದೇ ಗೋ ಸಾಗಾಟ ಮತ್ತು ‌ಕಳ್ಳತನ ಕೃತ್ಯ ನಿಲ್ಲಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.

Prakruti medical karwar
ಪ್ರಕೃತಿ ಮೆಡಿಕಲ್ ,ಕಾರವಾರ.
Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ