Bhatkal: ಟ್ಯೂಷನ್‌ಗೆ ಹೋಗುತ್ತಿದ್ದ ಪುಟ್ಟ ಬಾಲಕಿಗೆ ಹಣದ ಆಸೆ ತೋರಿಸಿ ಲೈಂಗಿಕ ಕಿರುಕುಳ|ಪ್ರಕರಣ ದಾಖಲು
Bhatkal: ಟ್ಯೂಷನ್‌ಗೆ ಹೋಗುತ್ತಿದ್ದ ಪುಟ್ಟ ಬಾಲಕಿಗೆ ಹಣದ ಆಸೆ ತೋರಿಸಿ ಲೈಂಗಿಕ ಕಿರುಕುಳ|ಪ್ರಕರಣ ದಾಖಲು
Bhatkal news (13 November 2025):-ಟ್ಯೂಷನ್‌ಗೆ ತೆರಳುತ್ತಿದ್ದ 10 ವರ್ಷದ ಬಾಲಕಿಗೆ ಹಣದ ಆಮಿಷವೊಡ್ಡಿ, ಅಶ್ಲೀಲ ಸನ್ನೆ ಮಾಡಿ ಲೈಂಗಿಕ ಕಿರುಕುಳ ಆರೋಪದಡಿ ಮುಗ್ಧಮ್ ಕಾಲೋನಿಯ ನಿವಾಸಿಯೊಬ್ಬನ ವಿರುದ್ಧ ಭಟ್ಕಳ(bhatkal) ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಟ್ಕಳದ ಬಂದರಿನಲ್ಲಿ ಮೀನು ಲೋಡಿಂಗ್ ಕೆಲಸ ಮಾಡುವ ಆರೋಪಿ ಅಮ್ಹಾದ್ ಎಂಬಾತನು ಬಾಲಕಿಯ ಟ್ಯೂಷನ್ ದಾರಿಯಲ್ಲಿ ತನ್ನ ಮನೆಯ ಹೊರಗೆ ನಿಂತು ಈ ಕೃತ್ಯ ಎಸಗಿದ್ದಾನೆ. ಆರೋಪಿಯು ಬಾಲಕಿಯ ಹೆಸರು ಹೇಳಿ ಕರೆದು, ಕೈಯಲ್ಲಿ ಹಣ ತೋರಿಸಿ, ನಿನಗೆ ಹಣ ಕೊಡುತ್ತೇನೆ, ನನ್ನ ಜೊತೆ ಬಾ ಎಂದು ಹೇಳಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಬಾಲಕಿಯ ತಾಯಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
Bhatkal| ಲಿಪ್ಟ್ ಕುಸಿದು ಇಬ್ಬರು ಕಾರ್ಮಿಕರು ಸಾವು
ಈ ಬಗ್ಗೆ ವಿಚಾರಿಸಲು ಬಾಲಕಿಯ ತಾಯಿ ಆರೋಪಿಯ ಮನೆ ಬಳಿ ಹೋದಾಗ, ಆತ ಸಿಟ್ಟಿಗೆದ್ದು ಪ್ರತಿಕ್ರಿಯಿಸಿ, ಅಸಭ್ಯವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ಬಾಲಕಿಯ ತಾಯಿ ನೀಡಿದ ದೂರಿನ ಅನ್ವಯ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

