Bhatkal|ಭಟ್ಕಳದಲ್ಲಿ ಪಾಕಿಸ್ತಾನಿಗಳು | ಉಗ್ರವಾದಿ ಚಟುವಟಿಕೆಯಲ್ಲಿ ಭಾಗಿಯಾದವರೆಷ್ಟು? ತಲೆಮರೆಸಿಕೊಂಡವರೆಷ್ಟು ಇಲ್ಲಿದೆ ಮಾಹಿತಿ
Bhatkal|ಭಟ್ಕಳದಲ್ಲಿ ಪಾಕಿಸ್ತಾನಿಗಳು | ಉಗ್ರವಾದಿ ಚಟುವಟಿಕೆಯಲ್ಲಿ ಭಾಗಿಯಾದವರೆಷ್ಟು? ತಲೆಮರೆಸಿಕೊಂಡವರೆಷ್ಟು ಇಲ್ಲಿದೆ ಮಾಹಿತಿ
ಕಾರವಾರ:-ದೇಶದಲ್ಲಿ ಎಲ್ಲೇ ಉಗ್ರವಾದಿ ಚಟುವಟಿಕೆ ಇರಲಿ ಅದಕ್ಕೆ ಭಟ್ಕಳವನ್ನು ಲಿಂಕ್ ಮಾಡಲಾಗುತ್ತದೆ. ಭಟ್ಕಳದಲ್ಲಿ (bhatkal) ಇತ್ತೀಚಿನ ವರೆಗೂ ಉಗ್ರವಾದಿ ಚಟುವಟಿಕೆಗೆ ಬೆಂಬಲ ನೀಡಿ ಬಂಧಿತರಾದ ಸಂಖ್ಯೆ ಕಡಿಮೆ ಇಲ್ಲ. ಕರ್ನಾಟಕದಲ್ಲೇ ಅತೀ ಹೆಚ್ಚು ಉಗ್ರವಾದಿ ಆರೋಪದಡಿ ಜೈಲು ಸೇರಿದ ಹಾಗೂ ತಲೆಮರೆಸಿಕೊಂಡವರ ಸಂಖ್ಯೆಯಲ್ಲಿ ಭಟ್ಕಳ ಮೊದಲ ಸ್ಥಾನದಲ್ಲಿದೆ.
Bhatkal| ಡಿಸ್ಕೋಂಟ್ ಆಫರ್ ಹೆಸರಿನಲ್ಲಿ 300 ಜನರಿಗೆ ಹಣ ವಂಚನೆ |ಆರೋಪಿಗಳು ಅಂದರ್
ದೆಹಲಿಯಲ್ಲಿ ಕಾರ್ ಬ್ಲಾಸ್ಟ್ ಬೆನ್ನಲ್ಲೇ ದೇಶಾಧ್ಯಾಂತ ಸೂಕ್ಷ್ಮ ಪ್ರದೇಶಗಳಿಗೆ ಅಲರ್ಟ ನೀಡಲಾಗಿದೆ. ಇದೇ ರೀತಿ ಉತ್ತರ ಕನ್ನಡ ಜಿಲ್ಲೆಯ ಸೂಕ್ಷ್ಮ ಪ್ರದೇಶವಾದ ಭಟ್ಕಳದಲ್ಲೂ ಅಲರ್ಟ ನೀಡಲಾಗಿದ್ದು ಈ ಹಿಂದೆ ಉಗ್ರವಾದಿ ಚಟುವಟಿಕೆಯಲ್ಲಿ ಭಾಗಿಯಾದ ಆರೋಪ ಹೊತ್ತವರ ಕುರಿತು ಈಗಿನ ಚಟುವಟಿಕೆ ಬಗ್ಗೆ ಇಂಚಿಂಚು ಮಾಹಿತಿಯನ್ನು ಕೇಂದ್ರ ಗುಪ್ತಚರ ಇಲಾಖೆ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಸಂಗ್ರಹಿಸುತ್ತಿದೆ.
ಹಾಗಿದ್ರೆ ಭಟ್ಕಳದಲ್ಲಿ ಉಗ್ರವಾದ ಆರೋಪ ಹೊತ್ತವರೆಷ್ಟು? ಪಾಕಿಸ್ತಾನದ ಪ್ರಜೆಗಳು ವಾಸವಿರುವವರು ಎಷ್ಟು ಈಗಿನ ಸ್ಥಿತಿ ಏನಿದೆ ಎಂಬ ಬಗ್ಗೆ ಒಂದು ಕಿರುನೋಟ ಇಲ್ಲಿದೆ.
Bhatkal: ಟ್ಯೂಷನ್‌ಗೆ ಹೋಗುತ್ತಿದ್ದ ಪುಟ್ಟ ಬಾಲಕಿಗೆ ಹಣದ ಆಸೆ ತೋರಿಸಿ ಲೈಂಗಿಕ ಕಿರುಕುಳ|ಪ್ರಕರಣ ದಾಖಲು
ಭಟ್ಕಳಕ್ಕೆ ಉಗ್ರವಾದಿತ್ವದ ಅಂಟು ಅಂಟಲು ಇಂಡಿಯನ್ ಮುಜಾಹಿದಿನ್ ಹಾಗೂ ಐ.ಎಸ್.ಐ.ಎಸ್ ಸಂಘಟನೆ ಕಾರಣವಾಗಿದೆ. ಈ ಎರಡು ಸಂಘಟನೆಯ ಪ್ರಮುಖರು ಭಟ್ಕಳ ಮೂಲದವರಾಗಿದ್ದು ಭಟ್ಕಳದಲ್ಲಿ ಹಲವು ಯುವಕರು ಉಗ್ರವಾದಿ ಸಂಘಟನೆ ಬೆಂಬಲಿಸಿದ ಆರೋಪ ವಿದೆ. ಹಲವರಿಗೆ ಶಿಕ್ಷೆಯಾದರೇ ಹಲವರ ಪ್ರಕರಣ ನ್ಯಾಯಾಲಯದಲ್ಲಿದೆ.ಇನ್ನು ಹಲವರು ತಲೆಮರೆಸಿಕೊಂಡಿದ್ದಾರೆ.
ಐ.ಎಮ್ ಸಂಘಟನೆಯ ಮುಖ್ಯಸ್ಥ ಮೊಹಮ್ಮದ್ ಅಹ್ಮದ್ ಸಿದ್ದೀಬಪ್ಪ ಅಲಿಯಾಸ್ ಯಾಸಿನ್ ಭಟ್ಕಳ್ ಮೂಲಕ ಮೊದಲ ಬಾರಿಗೆ ಭಟ್ಕಳದ ಹೆಸರು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತು .
ಯಾಸಿನ್ ಭಟ್ಕಾಳ್ ಭಾರತದಲ್ಲಿ ನಡೆದ ಅನೇಕ ಬಾಂಬ್ ಸ್ಫೋಟ ಪ್ರಕರಣರೂವಾರಿಯಾಗಿದ್ದ .ಪ್ರಮುಖವಾಗಿ 2010 ರಲ್ಲಿ ಪೂನಾ ಜರ್ಮನ್ ಬೇಕರಿ ಬ್ಲಾಸ್ಟ್,2011 ರಲ್ಲಿ ಮುಂಬೈನಲ್ಲಿ ನಡೆದ ಬ್ಲಾಸ್ಟ್ ,2013 ರಲ್ಲಿ ಹೈದರಾಬಾದ್ ನಲ್ಲಿ ನಡೆದ ಬ್ಲಾಸ್ಟ್ ,ಹಾಗೂ 2008 ರಿಂದ 2012 ರ ನಡುವೆ ದೆಹಲಿ, ಅಹಮದಾಬಾದ್, ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ನಡೆದ ಬಾಂಬ್ ಬ್ಲಾಸ್ಟ್ ಪ್ರಕರಣದ ಆರೋಪಿಯಾಗಿದ್ದ ಈತ 2013 ರಲ್ಲಿ ನೇಪಾಳದ ಗಡಿಯಲ್ಲಿ ಬಂಧಿತನಾಗುತ್ತಾನೆ. 2016ರಲ್ಲಿ NIA ವಿಶೇಷ ನ್ಯಾಯಾಲಯ ಯಾಸಿನ್ ಭಟ್ಕಾಳ್ ಗೆ ಮರಣ ದಂಡನೆ ವಿಧಿಸದ್ದು ,ಸಧ್ಯ ತಿಹಾರ್ ಜೈಲಿನಲ್ಲಿ ಇದ್ದಾನೆ.
ಇನ್ನು ರಿಯಾಜ್ ಭಟ್ಕಳ್ ಕೂಡ ಭಟ್ಕಳ ಮೂಲದವನಾಗಿದ್ದು ಐ.ಎಮ್ ಸಂಘಟನೆಯ ಸಹ ಸಂಸ್ಥಾಪಕ. ಈತನೊಂದಿಗೆ ಇಕ್ಬಾಲ್ ಭಟ್ಕಳ ,ಯಾಸಿನ್ ಭಟ್ಕಳ್ ಸಹ ಕೈಜೋಡಿಸಿದರು. ಇವರು ಕೃತ್ಯಗಳಿಗೆ ಹಣಕಾಸು ನೆರವು ,ಬಾಂಬ್ ದಾಳಿ ಯೋಜನೆ ರೂಪಿಸುವುದು,ತಂತ್ರಜ್ಞಾನ, ಲಾಜಿಸ್ಟಿಕ್ ವ್ಯವಸ್ಥೆ ,ದಾಳಿಗಳಿಗೆ ಸ್ಥಳ ಆಯ್ಕೆ ಯಂತಹ ಕಾರ್ಯದಲ್ಲಿ ತೊಡಗಿದ್ದು ,ಪಾಕಿಸ್ತಾನದ ISI ಮತ್ತು Lashkar-e-Taiba ಜಾಲಗಳೊಂದಿಗೆ ಸಂಪರ್ಕ ಹೊಂದಿರುವ ಆರೋಪವಿದೆ.
ರಿಯಾಜ್ ಭಟ್ಕಳ IM ಸಂಘಟನೆಯ ಸ್ಟ್ರಾಟಜಿಕ್ ಬ್ರೈನ್ ಎಂದೇ ಕರೆಯಲಾಗುತ್ತದೆ. ಇಕ್ಬಾಲ್ ಭಟ್ಕಳ್ ಯುವಕರನ್ನು ಸೆಳೆಯುವ ಮತ್ತು ಸಂಘಟನೆಯ ಉದ್ದೇಶವನ್ನು ಬಿತ್ತರಿಸುವ ಕಾರ್ಯವನ್ನು ನೀಡಿಕೊಳ್ಳುತಿದ್ದ ಆರೋಪವಿದೆ.
Honnavar | ಅರಬ್ಬಿ ಸಮುದ್ರದಲ್ಲಿ ಗೋವಾದ 31 ಮೀನುಗಾರರ ರಕ್ಷಣೆ – ಹೊನ್ನಾವರ ಬಂದರಿಗೆ ರವಾನೆ
ಯಾಸಿನ್ ಭಟ್ಕಳ್ ಐ.ಎಮ್ ನ ತಳ ಮಟ್ಟದ ಕಾರ್ಯಗಳನ್ನು ನೋಡಿಕೊಳ್ಳುವ ಜೊತೆ ಬಾಂಬ್ ತಯಾರಿಕೆ,ಟಾರ್ಗೆಟ್ ಕಮಾಂಡಿಂಗ್ ಕಾರ್ಯಾಚರಣೆ ತಂಡದ ಮುಖ್ಯಸ್ಥನಾಗಿದ್ದ ಆರೋಪವಿದೆ.
ರಿಯಾಜ್ ಭಟ್ಕಳ ಪಾಕಿಸ್ತಾನದಲ್ಲಿ ಅಡಗಿದ್ದಾನೆ ಎಂದು ಹೇಳಲಾಗುತಿದ್ದು ಇಕ್ಬಾಲ್ ಭಟ್ಕಳ್ ರಿಯಾಜ್ ಜೊತೆಗೆ ಪಾಕಿಸ್ತಾನದಲ್ಲಿ ಇರಬಹುದು ಎಂದು ಕೇಂದ್ರ ಗುಪ್ತಚರ ಇಲಾಖೆ ವಾದವಾಗಿದ್ದು ಈ ಇಬ್ಬರೂ ತಲೆಮರೆಸಿಕೊಂಡಿದ್ದಾರೆ.
ಭಟ್ಕಳ ಮೂಲದ ಇವರುಗಳು ಉಗ್ರಸಂಘಟನೆಯನ್ನು ಹುಟ್ಟುಹಾಕಿದ ಕಾರಣ ಹಾಗೂ ಪಾಕಿಸ್ತಾನದ ಜೊತೆ ಸಂಪರ್ಕ ಕಾರಣ ಭಟ್ಕಳ ನಗರ ಮೊದಲಬಾರಿಗೆ ಟಾರ್ಗೆಟ್ ಆಯಿತು.ಇದಲ್ಲದೇ ಹಲವು ಜನ ಉಗ್ರ ಚಟುವಟಿಕೆಯಲ್ಲಿ ಭಾಗಿಯಾಗಿದ್ದು ಪತ್ತೆಯಾಗಿದೆ. ಹೀಗಾಗಿಯೇ ಭಟ್ಕಳದಲ್ಲಿ ಕೇಂದ್ರ ಗುಪ್ತಚರ ಸಂಸ್ಥೆಯ ಕಚೇರಿಯು ಸಹ ತೆರೆಯಲಾಗಿದೆ.
ಎಷ್ಟು ಜನ ಉಗ್ರ ಚಟುವಟಿಕೆ ಆರೋಪ ಹೊಂದಿದ್ದಾರೆ?
ಭಟ್ಖದಲ್ಲಿ 2025 ರ ಹೊಸ ಮಾಹಿತಿ ಪ್ರಕಾರ ವಿವಿಧ ಉಗ್ರ ಚಟುವಟಿಕೆ ಹಾಗೂ ಬೆಂಬಲದಲ್ಲಿ ನ್ಯಾಯಾಲಯದಲ್ಲಿ ಆರೋಪ ಎದುರಿಸುತ್ತಿರುವ ಜೆ.ಸಿ ಕಸ್ಟಡಿಯಲ್ಲಿ ಇರುವವರು ಒಟ್ಟು ಐದು ಜನ .ಆರೋಪದಿಂದ ಮುಕ್ತರಾದವರು ಒಟ್ಟು ಆರು ಜನ.ತಲೆಮರೆಸಿಕೊಂಡವರು ಒಟ್ಟು ಒಂಬತ್ತು ಜನರಿದ್ದಾರೆ.
ಯಾವ ಜೈಲಿನಲ್ಲಿ ಎಷ್ಟು ಜನರಿದ್ದಾರೆ?
ಬಾಂಬ್ ಬ್ಲಾಸ್ಟ್ ಸೇರಿದಂತೆ ವಿವಿಧ ಪ್ರಕರಣದಲ್ಲಿ ಐದು ಜನ ಜೈಲಿನಲ್ಲಿ ಇದ್ದಾರೆ. ಇದರಲ್ಲಿ ದೆಹಲಿಯ ತಿಹಾರ್ ಜೈಲಿನಲ್ಲಿ ಮೂರು ಜನ ,ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಎರಡು ಜನರಿದ್ದಾರೆ.
ತಲೆಮರೆಸಿಕೊಂಡ ಪ್ರಮುಖ ಉಗ್ರರು ಯಾರು.
ಉಗ್ರ ಚಟುವಟಿಕೆ ಆರೋಪ ಹೊತ್ತು ತಲೆಮರೆಸಿಕೊಂಡವರಲ್ಲಿ 9 ಜನರಿದ್ದಾರೆ. ಇವರಲ್ಲಿ ಪ್ರಮುಖವಾಗಿ ರಿಯಾಜ್ ಭಟ್ಕಳ್, ಇಕ್ಭಾಲ್ ಭಟ್ಕಳ್,ಹಬೀಬ್ ಜಿಲಾನಿ ಪ್ರಮುಖರಾಗಿದ್ದಾರೆ.
ಭಟ್ಕಳ ಹಾಗೂ ಪಾಕಿಸ್ತಾನದ ಸಂಬಂಧ|ಭಟ್ಕಳದಲ್ಲಿದ್ದಾರೆ ಪಾಕಿಸ್ತಾನದ 13 ಜನ!
ಭಟ್ಕಳ ಹಾಗೂ ಪಾಕಿಸ್ಥಾನದ ಸಂಬಂಧ ಇಂದು ನಿನ್ನೆಯದಲ್ಲಿ ಸ್ವತಂತ್ರ ಪೂರ್ವದಿಂದಲೂ ಪಾಕಿಸ್ಥಾನ ಭಾಗದೊಂದಿಗೆ ಭಟ್ಕಳಿಗರ ವೈವಾಹಿಕ ಸಂಬಂಧಗಳು ನಡೆದಿವೆ. ಸ್ವತಂತ್ರ ನಂತರ ಭಾರತ ವಿಭಜನೆಯಾದಾಗ ಭಟ್ಕಳದ ಸಂಬಂಧಗಳು ದೂರವಾದವು. ಹಿಂದೆಯೇ ಪಾಕಿಸ್ತಾನದ ಭಾಗಕ್ಕೆ ಹೆಣ್ಣು -ಗಂಡಿನ ವಿವಾಹ ಸಂಬಂಧಗಳು ಇದ್ದವು . ಅದು ಭಾರತದಿಂದ ಪಾಕಿಸ್ತಾನ ವಿಭಜನೆಯಾಗಿ ದೂರವಾದರೂ ,ಉದ್ಯೋಗದ ನೆಪದಲ್ಲಿ ದೇಶ ಬಿಟ್ಟು ಹೊರ ರಾಷ್ಟ್ರಗಳಿಗೆ ತೆರಳಿದ ಭಟ್ಕಳ ಯುವಕರು ಪಾಕಿಸ್ತಾನದ ವಿವಾಹ ಸಂಬಂಧವನ್ನು ಮುಂದುವರೆಸಿದರು. ಹೆಚ್ಚಾಗಿ ಗಲ್ಫ್ ರಾಷ್ಟ್ರದಲ್ಲಿ ಈ ಸಂಬಂಧಗಳು ಚಿಗುರಿದ್ದು,ಹೀಗೆ 12 ಮಹಿಳೆ ಹಾಗೂ ಒಂದು ಮಗು ಸೇರಿ 13 ಜನ ಪಾಕಿಸ್ತಾನದವರು ಇದೀಗ ಭಟ್ಕಳ ದಲ್ಲಿ ನೆಲಸಿದ್ದಾರೆ. ಇವರೆಲ್ಲರೂ ದೀರ್ಗಾವಧಿ ವಿಸಾ ದಡಿ ನೆಲಸಿದ್ದಾರೆ. ಈ ಹಿಂದೆ ಪಾಕಿಸ್ತಾನದ ಮಹಿಳೆಯೊಬ್ಬಳ ವಿಸಾ ಅವಧಿ ಮುಗಿದು ಜೈಲು ಪಾಲಾಗುವಂತ ಘಟನೆ ನಡೆದಿತ್ತು.
Terrorist ಸಂಘಟನೆಗಳ ಜೊತೆಗೆ ಕೆಲಸ – ನಾಲ್ವರು ಸರ್ಕಾರಿ ಅಧಿಕಾರಿಗಳು ಸೇವೆಯಿಂದ ವಜಾ
ಸಧ್ಯ ಈ 13 ಪಾಕಿಸ್ತಾನಿಗಳ ಮಾಹಿತಿ ಜಿಲ್ಲಾ ಪೊಲೀಸ್ ಹಾಗೂ ಕೇಂದ್ರ ಗುಪ್ತಚರ ಇಲಾಖೆಯ ಬಳಿ ಇದೆ. ಆದರೇ ಈವರೆಗೂ ಈ ಮಹಿಳೆಯರು ದೇಶದ್ರೋಹಿ ಚಟುವಟಿಕೆಯಲ್ಲಿ ಭಾಗಿಯಾಗದಿರುವುದು ಇವರ ವೈವಾಹಿಕ ಬದ್ದತೆ ಎತ್ತಿ ಹಿಡಿಯುತ್ತದೆ. ಆದರೇ ಎಲ್ಲಿ ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಉಗ್ರರು ದಾಳಿ ಮಾಡಿದರೋ ಅಂದಿನಿಂದ ಇಲ್ಲಿ ದೀರ್ಗಾವಧಿ ವಿಸಾದಡಿ ನೆಲಸಿರುವ ಮಹಿಳೆಯರಿಗೂ ಸಂಕಷ್ಟ ಎದುರಾಗುವಂತೆ ಆಗಿದೆ. ಇನ್ನು ಈ ಹಿಂದೆಯೇ ಈ ದೇಶದ ಪೌರತ್ವಕ್ಕಾಗಿ ಹಲವು ಭಟ್ಕಳ ಯುವಕರನ್ನು ಮದುವೆಯಾದ ಮಹಿಳೆಯರು ಪ್ರಯತ್ನಿಸಿದ್ದರು.ಆದರೇ ಅದು ಸಾಧ್ಯವಾಗಲಿಲ್ಲ. ಇನ್ನು ಕೆಲವು ಮಹಿಳೆಯರಂತೂ ಮೊಮ್ಮಕ್ಕಳನ್ನು ಕಂಡರೂ ಇದುವರೆಗೂ ಭಾರತೀಯ ನಾಗರೀಕತೆಯ ಹಕ್ಕು ಸಿಕ್ಕಿಲ್ಲ.
ಇನ್ನು ಇತ್ತೀಚಿನ ದಿನದಲ್ಲಿ ಭಟ್ಕಳ ಕೇಂದ್ರ ಗುಪ್ತಚರ ಇಲಾಖೆಯ ಟಾರ್ಗೆಟ್ ನಲ್ಲಿದೆ. ಭಟ್ಕಳದ ಮುಸ್ಲಿಂ ಯುವಕರಿಗೆ ಹೊರದೇಶದಲ್ಲಿ ಉದ್ಯೋಗ ಮಾಡಲು ಪಾಸ್ ಪೋರ್ಟ ಸಹ ದೊರಕುವುದು ಕಷ್ಟಕರವಾಗಿದ್ದು ,ಚಿಕ್ಕ ಪ್ರಕರಣವಿದ್ದರೂ ಪಾಸ್ ಪೋರ್ಟ ನಿರಾಕರಣೆ ಮಾಡಲಾಗುತ್ತಿದೆ. ಇದಲ್ಲದೇ ಭಟ್ಕಳದಲ್ಲಿ ಕೆಲವು ಯುವಕರು ದೇಶದ್ರೋಹಿ ಸಂಘಟನೆ ಜೊತೆ ತಮ್ಮನ್ನು ಗುರುತಿಸಿಕೊಳ್ಳುತ್ತಿರುವುದು ಇಡೀ ಭಟ್ಕಳವನ್ನು ಅನುಮಾನದ ದೃಷ್ಟಿಯಲ್ಲಿ ನೋಡುವಂತಾಗಿದೆ.
ಇದನ್ನೂ ಓದಿ :-Terrorist|ಉಗ್ರ ಮೌಸೀನ್ ಐದು ವರ್ಷದಲ್ಲಿ ಐದು ಮಕ್ಕಳ ತಂದೆ! ಹೊರಬಂತು ಕುಟುಂಬದ ರಹಸ್ಯ! ಎಸ್ ಪಿ ಹೇಳಿದ್ದೇನು
ಉಗ್ರನ ಹುಡುಕಾಟಕ್ಕೆ ಭಟ್ಕಳಕ್ಕೆ ಬಂದ A.T.S ತಂಡ ! ಮನೆಗೆ ನೋಟಿಸ್ ಅಂಟಿಸಿ ಹೋಗಿದ್ದೇಕೆ?