Junglefowl: ಕಾಡುಕೋಳಿ ನಿಮಗೆಷ್ಟು ಗೊತ್ತು?
Junglefowl: ಕಾಡುಕೋಳಿ ನಿಮಗೆಷ್ಟು ಗೊತ್ತು?
ಮನುಷ್ಯನ ಜೀವನ ಶೈಲಿ ಪರಿಸರದ ಮೇಲೆ ಪರಿಣಾಮ ಬೀರುತ್ತಾ ಇಂದು ಕಾಡುಗಳು ನಾಶವಾಗುತ್ತಾ ಸಾಗಿದೆ. ಕಾಡಿನ ಪ್ರಾಣಿ,ಪಕ್ಷಿಗಳು ಅವನತಿ ಅಂಚಿಗೆ ಹೋಗುತಿದ್ದು ಇಂದಿನ ದಿನದಲ್ಲಿ ಹಲವು ಪಕ್ಷಿಗಳು ನಮ್ಮ ಕಣ್ಣಿನ ದೃಷ್ಟಿಯಿಂದ ಮಾಯವಾಗಿದೆ.

ಇಂದಿನ ಪೀಳಿಗೆಗೆ ಇವುಗಳ ಬಗ್ಗೆ ಮಾಹಿತಿ ಇಲ್ಲವಾಗುತ್ತಿದೆ. ಹೀಗಾಗಿ ಇಂದಿನ ಜನರಿಗೆ ನಮ್ಮ ಹಿರಿಕರು ಪರಿಚಯಿಸಿದ ಪಕ್ಷಿಗಳ ಬಗ್ಗೆ ಮಾಹಿತಿ ತಿಳಿಸಬೇಕು ಎಂಬ ಹಂಬಲದಲ್ಲಿ ದಿವಂಗತ ಕೆ.ಪಿ ಪೂರ್ಣಚಂದ್ರ ತೇಜಸ್ವಿಯವರ ಹಕ್ಕಿ ಪುಕ್ಕ ಎಂಬ ಪುಸ್ತಕದಿಂದ ಹಕ್ಕಿಗಳ ಮಾಹಿತಿಯ ಬಗ್ಗೆ ಇಲ್ಲಿ ಪ್ರಕಟಿಸಲಾಗುತ್ತಿದೆ.
ಹಕ್ಕಿ ಪುಕ್ಕ ಎಂಬುದು ದಿವಂಗತ ಕೆ.ಪಿ ಪೂರ್ಣಚಂದ್ರ ತೇಜಸ್ವಿಯವರು ಬರೆದ ಪಕ್ಷಿಗಳ ಪರಿಚಯದ ಪುಸ್ತಕ. ಓದುವ ಆಸಕ್ತಿಯಿದ್ದರೇ ದೆಯವಿಟ್ಟು ಪುಸ್ತಕ ಕೊಂಡು ಓದಿ.
ಹಲವರಿಗೆ ಪುಸ್ತಕ ಓದುವ ಹವ್ಯಾಸ ಕಡಿಮೆಯಾಗಿದೆ. ಪುಸ್ತಕದ ಜಾಗವೀಗ ಮೊಬೈಲ್ ಗಳು ಆವರಿಸಿಕೊಂಡಿದೆ. ನಮ್ಮ ಉದ್ದೇಶ ನಮ್ಮ ದೇಶದ ಪಕ್ಷಿಗಳ ಬಗ್ಗೆ ಮಾಹಿತಿ ನೀಡಬೇಕು ,ಮುಖ್ಯವಾಗಿ ಮಕ್ಕಳು ಇವುಗಳ ಬಗ್ಗೆ ಅರಿಯಬೇಕು ಎಂಬುದಷ್ಟೆ. ಹೀಗಾಗಿ ಕೆ.ಪಿ ಪೂರ್ಣಚಂದ್ರ ತೇಜಸ್ವಿಯವರು ಬರೆದ ಕೆಲವು ಪಕ್ಷಿಗಳ ಮಾಹಿತಿ ಇಲ್ಲಿ ನೀಡುತಿದ್ದೇವೆ.
ಕಾಡುಕೋಳಿ ನಿಮಗೆಷ್ಟು ಗೊತ್ತು?

ಹಿಂದೆ ಮನೆಯ ಹಿತ್ತಲು ದಾಟಿ ಹೋದರೆ ಸಾಕಿತ್ತು ಈ ಕಾಡುಕೋಳಿಗಳು ಕಣ್ಣಿಗೆ ಬೀಳುತಿದ್ದವು . ಇಂಗ್ಲೀಷ್ ನಲ್ಲಿ ಜಂಗಲ್ ಫೌಲ್ ಎಂದು ಕರೆಯುವ ಈ ಕೋಳಿಗಳು ಇದೀಗ ಅವನತಿ ಅಂಚಿಗೆ ತಲುಪಿದೆ.
ಹಾಗಂತ ಎಲ್ಲೂ ಇಲ್ಲವೇ ಇಲ್ಲ ಎಂದೇನೂ ಇಲ್ಲ , ಅರಣ್ಯಗಳಲ್ಲಿ ಅದರಲ್ಲೂ ಮಲೆನಾಡಿನ ಪಶ್ಚಿಮ ಘಟ್ಟ ಭಾಗದಲ್ಲಿ ಇವುಗಳು ಆಗಾಗ ಕಾಣಿಸಿಕೊಳ್ಳುತ್ತವೆ.
ಊರಿನ ಕೋಳಿಯಂತೆ ಇರುವ ಈ ಕಾಡುಕೋಳಿ ನೋಡಲು ಬಲು ಸುಂದರ.ಊರು ಕೋಳಿಯಷ್ಟೇ ದೊಡ್ಡದಾದ ಆದರೆ ಅದಕ್ಕಿಂತ ಹೊಳೆಯುವ ವರ್ಣಗಳನ್ನುಳ್ಳ ಕೋಳಿ ಇದು. ಹುಂಜದ ಬಾಲದ ಪುಕ್ಕಗಳಲ್ಲಿ ಎರಡು ಮೂರು ಕಡು ನೀಲಿ ಬಣ್ಣದ ಪುಕ್ಕಗಳು ಕುಡುಕೋಲಿನಾಕಾರದಲ್ಲಿ ಕಮಾನಾಗಿ ಬಗ್ಗಿರುತ್ತವೆ.
ಇದನ್ನೂ ಓದಿ:-Karnataka ದೇಶದ ಏಳನೇ ಅತೀ ದೊಡ್ಡ ಸಿಗಂದೂರು ಸೇತುವೆ ಕಾಮಗಾರಿ ಪೂರ್ಣ ಹಂತಕ್ಕೆ
ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ಮತ್ತು ಹಿಮಾಲಯದ ತಪ್ಪಲಿನ ಕಾಡುಗಳಲ್ಲಿ, ಕುರುಚಲು ಕಾಡು ಮತ್ತು ನಿತ್ಯ ಹರಿದ್ವರ್ಣದ ದಟ್ಟಕಾಡು ಎರಡು ಪರಿಸರದಲ್ಲೂ ಇದು ಕಾಣಸಿಗುತ್ತದೆ.
ಅತ್ಯಂತ ಸಂಕೋಚ ಸ್ವಭಾವದ ಈ ಕೋಳಿ ಮನುಷ್ಯ ಸಾಮೀಪ್ಯ ಕಂಡೊಡನೆ ಪೊದೆಗಳಲ್ಲಿ ನುಗ್ಗಿ ಕಣ್ಮರೆಯಾಗುತ್ತದೆ. ಜಗತ್ತಿನಲ್ಲಿರುವ ಎಲ್ಲ ಭಾರತದ ಕಾಡು ಕೋಳಿಗಳಲ್ಲಿ ಎರಡು ಪ್ರಭೇದಗಳನ್ನು ನಾವು ಕಾಣಬಹುದು. ಒಂದು ಕೊಂಚ ಬೂದು ಬಣ್ಣದ್ದು, ಇನ್ನೊಂದು ಕೆಂಪು ಬಣ್ಣದ್ದು.
ಕನ್ನಡ ನಾಡಿನಲ್ಲಿ ಬೂದು ಬಣ್ಣದ್ದು ಹೆಚ್ಚು. ಫೆಬ್ರವರಿಯಿಂದ ಮೇವರೆಗೆ ಇದು ನೆಲದಲ್ಲೆ ಗೂಡು ಮಾಡಿ ಮೊಟ್ಟೆ ಗಳನ್ನು ಇಡುತ್ತದೆ. ಹೇಟೆ ಊರು ಕೋಳಿಯಂತೆಯೇ ಕಂದುಗಪ್ಪು ಬಣ್ಣವಿರುತ್ತದೆ.
ಕಾಡಿನ ಬೇಟೆಯಿಂದಾಗಿ ಇತ್ತೀಚಿನ ದಿನದಲ್ಲಿ ಇವು ಅಳಿವಿನಂಚಿಗೆ ತಲುಪಿದ್ದು ಇದೀಗ ದುರ್ಭಲವಾಗಿ ಕಾಣಸಿಗುತ್ತವೆ.