BIG BREAKING: ಕನ್ನಡದ ಖ್ಯಾತ ನಟ ಹರೀಶ್ ರಾಯ್ ಇನ್ನಿಲ್ಲ
BIG BREAKING: ಕನ್ನಡದ ಖ್ಯಾತ ನಟ ಹರೀಶ್ ರಾಯ್ ಇನ್ನಿಲ್ಲ
ಸ್ಯಾಂಡಲ್‌ವುಡ್‌ನ (Sandalwood) ಪೋಷಕ ನಟ ಹಾಗೂ ಖಳನಟ ಹರೀಶ್ ರಾಯ್ (Harish Rai) ನಿಧನರಾಗಿದ್ದಾರೆ.
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬೆಳಗ್ಗೆ 11 ಗಂಟೆ ಸುಮಾರಿಗೆ ಅವರು ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ. ಅವರು ಇಬ್ಬರು ಮಕ್ಕಳು, ಪತ್ನಿಯನ್ನು ಅಗಲಿದ್ದಾರೆ.

ಹಲವು ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದ ಅವರು ಥೈರಾಯ್ಡ್ ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದರು. ಹರೀಶ್ ರಾಯ್ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
Karnataka| ಈ ದಿನ ಎಲ್ಲಿ ಏನು ಸುದ್ದಿ| ಹೈಲೈಟ್ಸ್ ಸುದ್ದಿ ಇಲ್ಲಿದೆ.
ಕೆಲವು ತಿಂಗಳ ಹಿಂದೆ ಚಿಕಿತ್ಸೆಗೆ ಹಣವಿಲ್ಲದೇ ಸಹಾಯದ ಹಸ್ತ ಬೇಡಿದ್ದರು.ಈ ಮೂಲಕ ಮತ್ತೆ ಮುನ್ನಲೆಗೆ ಬಂದಿದ್ದ ಅವರಿಗೆ ಒಂದಿಷ್ಟು ಸಹಾಯದ ಹಸ್ತ ಸಹ ದೊರೆತಿತ್ತು .ದೈಹಿಕವಾಗಿ ಸಂಪೂರ್ಣ ಕುಸಿದಿದ್ದ ಅವರು ಚಿಕಿತ್ಸೆ ಪಡೆದರೂ ಫಲಿಸಲಿಲ್ಲ.
ಸುಮಾರು 2 ದಶಕಗಳಿಂದ ಚಿತ್ರರಂಗದಲ್ಲಿರುವ ಇವರು ಕನ್ನಡ ಮಾತ್ರವಲ್ಲದೆ, ತಮಿಳು ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಅನೇಕ ಚಿತ್ರದಲ್ಲಿ ವಿಲನ್ ಪಾತ್ರದ ಮೂಲಕವೇ ಪ್ರಸಿದ್ದಿಗೆ ಬಂದ ನಟ ಇವರು.