Bollywood news|ಬಾಲಿವುಡ್ ಸ್ಟಾರ್ ಧರ್ಮೇಂದ್ರ ನಿಧನ| ಹೇಗಿತ್ತು ಗೊತ್ತಾ ಅವರ ಜೀವನ!
Bollywood news|ಬಾಲಿವುಡ್ ಸ್ಟಾರ್ ಧರ್ಮೇಂದ್ರ ನಿಧನ| ಹೇಗಿತ್ತು ಗೊತ್ತಾ ಅವರ ಜೀವನ!
ಮುಂಬೈ (11 November 25):- ಬಾಲಿವುಡ್ ಸೂಪರ್ ಸ್ಟಾರ್ ಧರ್ಮೇಂದ್ರ ರವರು (Darmendrha) ಅನಾರೋಗ್ಯ ಕಾರಣ ಇಂದು ನಿಧನರಾಗಿದ್ದಾರೆ.
300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳನ್ನು ರಂಜಿಸಿದ್ದ ನಟ ಧರ್ಮೇಂದ್ರ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.
89 ವರ್ಷ ವಯಸ್ಸಿನ ಧರ್ಮೇಂದ್ರ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಬಳಿಕ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೆಂಟಿಲೇಟರ್ ಮೂಲಕ ಉಸಿರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಧರ್ಮೇಂದ್ರ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ಧರ್ಮೇಂದ್ರ ಅವರು ದೈವಾದೀನರಾಗಿದ್ದಾರೆ.

ಇತ್ತೀಚೆಗಷ್ಟೇ ಧರ್ಮೇಂದ್ರ ಅವರು ಆಸ್ಪತ್ರೆಗೆ ಬಂದು ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದರು. ಆ ಬಳಿಕ ಕೆಲವೇ ದಿನಗಳಲ್ಲಿ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಯಿತು. ಸೋಮವಾರ (ನವೆಂಬರ್ 10) ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬುದು ತಿಳಿದು ಅಭಿಮಾನಿಗಳಿಗೆ ಆತಂಕ ತಂದಿತ್ತು .
ಭಾರತೀಯ ಚಿತ್ರರಂಗಕ್ಕೆ ಧರ್ಮೇಂದ್ರ ಅವರು ನೀಡಿದ ಕೊಡುಗೆ ಅಪಾರ. ನಟನಾಗಿ, ನಿರ್ಮಾಪಕನಾಗಿ ಚಿತ್ರರಂಗದಲ್ಲಿ ಅವರು 6 ದಶಕಗಳ ಕಾಲ ಸಕ್ರಿಯರಾಗಿದ್ದರು. ಇಳಿ ವಯಸ್ಸಿನಲ್ಲಿ ಕೂಡ ಅವರು ನಟಿಸುವುದು ನಿಲ್ಲಿಸಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಸಹ ಅವರು ಚಿಕ್ಕ-ಪುಟ್ಟ ಪಾತ್ರಗಳನ್ನು ಮಾಡುತ್ತಿದ್ದರು. ಅವರ ನಿಧನದಿಂದ ಕೋಟ್ಯಂತರ ಅಭಿಮಾನಿಗಳಿಗೆ ನೋವು ತಂದಿದೆ.
ಧರ್ಮೇಂದ್ರ ಪತ್ನಿ ಹೇಮಾ ಮಾಲಿನಿ (Hema Malini), ಪ್ರಕಾಶ್ ಕೌರ್ ಮಕ್ಕಳಾದ ಮಕ್ಕಳಾದ ಸನ್ನಿ ಡಿಯೋಲ್, ಬಾಬಿ ಡಿಯೋಲ್, ವಿಜೇತಾ, ಅಜೀತಾ, ಇಶಾ ಡಿಯೋಲ್ ಮತ್ತು ಅಹಾನಾ ಡಿಯೋಲ್ ಅವರನ್ನು ಅಗಲಿದ್ದಾರೆ.

ಪಂಜಾಬ್‌ನ ಲುಧಿಯಾನದ ಹಳ್ಳಿಯೊಂದರಲ್ಲಿ 1954 ರಲ್ಲಿ ಜನಿಸಿದ ಧರ್ಮೇಂದ್ರ 19ನೇ ವಯಸ್ಸಿನಲ್ಲಿ ಪ್ರಕಾಶ್ ಕೌರ್ ಅವರನ್ನು ವಿವಾಹವಾದರು. ನಂತರ ನಟಿ ಹೇಮಾ ಮಾಲಿನಿ ಅವರನ್ನು ಪ್ರೀತಿಸಿ ವಿವಾಹವಾದರು.
Karwar| ಟನಲ್ ಬಳಿಯ ಸೇತುವೆ ಬಳಿ ಕುಸಿದ ರಸ್ತೆ| ಒಂದು ಕಿಲೋಮೀಟರ್ ವರೆಗೂ ಇಲ್ಲ ಬೀದಿ ದೀಪ !
89 ನೇ ವಯಸ್ಸಿನಲ್ಲಿಯೂ ಸಹ, ಧರ್ಮೇಂದ್ರ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದರು. ಆಗಾಗ ಆರೋಗ್ಯಕರ ಜೀವನ ಮತ್ತು ಸಾವಯವ ಜೀವನಶೈಲಿಯನ್ನು ಉತ್ತೇಜಿಸುವ ವೀಡಿಯೊಗಳನ್ನು ಹಂಚಿಕೊಳ್ಳುತ್ತಿದ್ದರು. ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳಲ್ಲಿ ಅವರು ಟ್ರ್ಯಾಕ್ಟರ್ ಓಡಿಸುವುದು, ತಮ್ಮ ಜಮೀನನ್ನು ನೋಡಿಕೊಳ್ಳುವ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿದ್ದರು.