ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Breaking news : ಕೇಂದ್ರ ಸರ್ಕಾರದಿಂದ ರಾಜ್ಯಗಳಲ್ಲಿ ಮಾಕ್ ಡ್ರಿಲ್ ಗೆ ಕರೆ- ಯುದ್ಧಕ್ಕೆ ಪೂರ್ವ ಸಿದ್ದತೆ!

ಭಾರತ ಪಾಕ್ ನಡುವೆ ಯುದ್ಧದ ಕಾರ್ಮೋಡ ಇನ್ನಷ್ಟು ದಟ್ಟವಾಗುತ್ತಿದ್ದು, ಈ ನಡುವೆ ಮೇ 7 ರಂದು ದೇಶಾದ್ಯಂತ ಮಾಕ್‌ ಡ್ರಿಲ್‌ (mock drill )ನಡೆಸುವಂತೆ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೂ ಸೂಚನೆ ನೀಡಿದೆ.
09:34 PM May 05, 2025 IST | ಶುಭಸಾಗರ್

Breaking news : ಕೇಂದ್ರ ಸರ್ಕಾರದಿಂದ ರಾಜ್ಯಗಳಲ್ಲಿ ಮಾಕ್ ಡ್ರಿಲ್ ಗೆ ಕರೆ- ಯುದ್ಧಕ್ಕೆ ಪೂರ್ವ ಸಿದ್ದತೆ!

Advertisement

ಭಾರತ ಪಾಕ್ ನಡುವೆ ಯುದ್ಧದ ಕಾರ್ಮೋಡ ಇನ್ನಷ್ಟು ದಟ್ಟವಾಗುತ್ತಿದ್ದು, ಈ ನಡುವೆ ಮೇ 7 ರಂದು ದೇಶಾದ್ಯಂತ ಮಾಕ್‌ ಡ್ರಿಲ್‌ (mock drill )ನಡೆಸುವಂತೆ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೂ ಸೂಚನೆ ನೀಡಿದೆ.

ಪ್ರತಿಕೂಲ ದಾಳಿಯ ಸಂದರ್ಭದಲ್ಲಿ ನಾಗರಿಕರನ್ನು ರಕ್ಷಿಸಲು ಯಾವ ರೀತಿಯಲ್ಲಿ ಸಿದ್ಧತೆಗಳು ಇವೆ ಎಂದು ಖಚಿತಪಡಿಸಿಕೊಳ್ಳುವ ಗುರಿಯನ್ನು ಈ ಮಾಕ್ ಡ್ರಿಲ್ ಹೊಂದಿದ್ದು, ಈ ಮೂಲಕ 'ಭವಿಷ್ಯ' ಹೇಗಿದೆ ಎಂಬುದನ್ನು ಕೇಂದ್ರ ಸರ್ಕಾರ ಸೂಚ್ಯವಾಗಿಯೇ ನಾಗರಿಕರಿಗೆ ತಿಳಿಸಿದೆ.

ಇದನ್ನೂ ಓದಿ:-Uttara kannda:ಕರಾವಳಿಯಲ್ಲಿ ಅಲರ್ಟ – ಪ್ರವಾಸಿಗರ ಮಾಹಿತಿ ಕಲೆಹಾಕುತ್ತಿರುವ ಪೊಲೀಸರು

Advertisement

ಕೇಂದ್ರ ಗೃಹ ಸಚಿವಾಲಯ ನೀಡಿರುವ ಈ ಆದೇಶದಲ್ಲಿ ನಾಗರಿಕರ ರಕ್ಷಣೆಯ ಸಂಬಂಧ ಮೇ 7 ರಂದು ದೇಶಾದ್ಯಂತ ಅಣಕು ಪ್ರದರ್ಶನ ಮಾಡಿಸಬೇಕು, ಎಲ್ಲಾ ರಾಜ್ಯಗಳಲ್ಲಿ ವಾಯುದಾಳಿಯ ಸೈರನ್ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದೆ. ಅದರಂತೆ ಬುಧವಾರ ಎಲ್ಲ ರಾಜ್ಯಗಳಲ್ಲೂ ಯುದ್ಧದ ಸಮಯದಲ್ಲಿ ನಡೆಸಲಾಗುವ ರಕ್ಷಣಾ ಕಾರ್ಯದ ಅಣಕು ಕವಾಯತು ನಡೆಸಲು ಸೂಚಿಸಲಾಗಿದೆ.

ಇದಲ್ಲದೆ, ರಾಷ್ಟ್ರವ್ಯಾಪಿ ನಡೆಯುವ ಈ ಮಾಕ್ ಡ್ರಿಲ್ ಪರಿಣಾಮಕಾರಿಗೊಳಿಸಲು ಸ್ಥಳೀಯ ಅಧಿಕಾರಿಗಳು, ಶಿಕ್ಷಣ ಸಂಸ್ಥೆಗಳು, ನಾಗರಿಕ ರಕ್ಷಣಾ ಸಿಬ್ಬಂದಿ ಸಂಘಟಿತರಾಗಿ ಭಾಗವಹಿಸುವಂತೆಯೂ ಸಚಿವಾಲಯ ಒತ್ತಿ ಹೇಳಿದೆ.

ಏನಿದೆ ಗೃಹ ಸಚಿವಾಲಯದ ಆದೇಶದಲ್ಲಿ?

•ವಾಯುದಾಳಿ ಎಚ್ಚರಿಕೆ ಸೈರನ್ ಕಾರ್ಯಾಚರಣೆ

•ದಾಳಿ ಸಂದರ್ಭ ಸ್ವರಕ್ಷಣೆಗೆ ನಾಗರಿಕರು, ವಿದ್ಯಾರ್ಥಿಗಳಿಗೆ ರಕ್ಷಣಾ ಅಂಶಗಳ ಕುರಿತು ತರಬೇತಿ

•ಪ್ರಮುಖ ಕಟ್ಟಡ, ಸ್ಥಾವರ ಮರೆಮಾಚುವುದು

•ಜನರ ರಕ್ಷಣೆಗಾಗಿ ಅಣಕು ಪ್ರದರ್ಶನ ಮಾಡಲು ನಿರ್ದೇಶನ

•ವಾಯುದಾಳಿ ಎಚ್ಚರಿಕೆ ಸೈರನ್‌ಗಳ ಕಾರ್ಯಾಚರಣೆ

•ಪ್ರತಿಕೂಲ ದಾಳಿಯ ಸಂದರ್ಭದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ನಾಗರಿಕರು, ವಿದ್ಯಾರ್ಥಿಗಳು ಇತ್ಯಾದಿಗಳಿಗೆ ನಾಗರಿಕ ರಕ್ಷಣಾ ಅಂಶಗಳ ಕುರಿತು ತರಬೇತಿ

•ಕ್ರ್ಯಾಶ್ ಬ್ಲ್ಯಾಕೌಟ್ ಕ್ರಮಗಳನ್ನು ಒದಗಿಸುವುದು

•ಸ್ಥಳಾಂತರಿಸುವ ಯೋಜನೆ ಮತ್ತು ಅದರ ಪೂರ್ವಾಭ್ಯಾಸಕ್ಕೆ ಸೂಚನೆ ನೀಡಲಾಗಿದೆ

ಪ್ರಕೃತಿ ಮೆಡಿಕಲ್ ,ಕಾರವಾರ.

 1971 ರಲ್ಲಿ ನಡೆದಿತ್ತು ಮಾಕ್ ಡ್ರಿಲ್!

ಇದೇ ರೀತಿಯ ಮಾಕ್ ಡ್ರಿಲ್ ಈ ಹಿಂದೆ 1971 ರಲ್ಲಿ ನಡೆದಿತು. ಅದೇ ವರ್ಷದಲಿ ಭಾರತ ಮತು ಪಾಕಿಸ್ಥಾನದ ಯುದ್ದ ಸಂಭವಿಸಿತ್ತು.

ಉತ್ತರ ಕನ್ನಡ ದಲ್ಲಿ ಏನು?

ಭಟ್ಕಳದಲ್ಲಿ ಎಸ್ .ಪಿ ಎಂ ನಾರಾಯಣ್

ಉತ್ತರ ಕನ್ನಡ (uttara kannda) ಜಿಲ್ಲೆಯಲ್ಲಿ ನೌಕಾ ನೆಲೆ, ಅಣು ಸ್ಥಾವರಗಳು ಇದ್ದು ಸೂಕ್ಷ ಪ್ರದೇಶ ಸಹ ಹೌದು ಹೀಗಾಗಿ ಇನ್ನು ಈ ಕುರಿತು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ.ನಾರಾಯಣ್ ರವರನ್ನು ಸಂಪರ್ಕಿಸಿ ಮಾಹಿತಿ ಕೇಳಿದಾಗ ,ಈವರೆಗೆ ಯಾವುದೇ ರೀತಿಯ ಸೂಚನೆ ಬಂದಿಲ್ಲ. ಕೇಂದ್ರ ಮತ್ತು ರಾಜ್ಯ ಗೃಹ ಇಲಾಖೆ ಮಾಹಿತಿಯಂತೆ ಈವರೆಗೆ ಜಿಲ್ಲೆಯಲ್ಲಿ ಇರುವ ಪಾಕಿಸ್ತಾನದ ಪ್ರಜೆಗಳ ಬಗ್ಗೆ ಮಾಹಿತಿ ಕಲೆಹಾಕಲಾಗಿದೆ. ಒಟ್ಟು 15 ಜನರು ಪಾಕಿಸ್ತಾನದ ಪ್ರಜೆಗಳಿದ್ದಾರೆ. ಉಳಿದಂತೆ ಹೊರ ದೇಶದ ಬಾಂಗ್ಲ ,ನೇಪಾಳ ಮೂಲದ ಕಾರ್ಮಿಕರ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ ಎಂದಿದ್ದಾರೆ.

 

Advertisement
Tags :
Central governmentIndiaKarnatakamock drillNewspakistanPoliceWar
Advertisement
Next Article
Advertisement