Budget 2025 :ಮಂಗನ ಕಾಯಿಲೆ ನಿಯಂತ್ರಣಕ್ಕೆ ಬಜೆಟ್‌ನಲ್ಲಿ ಪ್ರಸ್ತಾಪ, ಏನದು?
Budget 2025 :ಮಂಗನ ಕಾಯಿಲೆ ನಿಯಂತ್ರಣಕ್ಕೆ ಬಜೆಟ್‌ನಲ್ಲಿ ಪ್ರಸ್ತಾಪ, ಏನದು?
ಬೆಂಗಳೂರು : ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯ ಭಾಗವನ್ನು ಬಾಧಿಸುತ್ತಿರುವ ಮಂಗನ ಕಾಯಿಲೆ (ಕ್ಯಾಸನೂರು ಕಾಡಿನ ಕಾಯಿಲೆ) ನಿಯಂತ್ರಣಕ್ಕೆ ಬಜೆಟ್‌ನಲ್ಲಿ (Budget) ಅನುದಾನ ಬಿಡುಗಡೆಯಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ, ಸಾಂಕ್ರಾಮಿಕ ಕಾಯಿಲೆಗಳಾದ ಚಿಕೂನ್‌ಗುನ್ಯ, ಡೆಂಗ್ಯೂ ಮತ್ತು ಮಲೆನಾಡು ಭಾಗದಲ್ಲಿ ಕಾಣಿಸಿಕೊಳ್ಳುವ ಕೆಎಫ್‌ಡಿ (KFD) ನಿಯಂತ್ರಣಕ್ಕಾಗಿ 50 ಕೋಟಿ ರೂ. ವೆಚ್ಚದಲ್ಲಿ ವಿಶೇಷ ಅಭಿಯಾನ ರೂಪದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಾಗುತ್ತದೆ ಎಂದು ತಿಳಿಸಲಾಗಿದೆ.
ಸದ್ಯ ಮಂಗನಕಾಯಿಲೆ ಚಿಕಿತ್ಸೆಗೆ ಯಾವುದೇ ಚುಚ್ಚುಮದ್ದುಗಳು ಇಲ್ಲ. ಶಿರಸಿ ಯಲ್ಲಿ ಮಂಗನಕಾಯಿಲೆ ಗಾಗಿ ಲ್ಯಾಬ್ ನಿರ್ಮಾಣ ಹಂತದಲ್ಲಿದೆ. ಶಿವಮೊಗ್ಗದಲ್ಲಿ ಈಗಾಲೇ ಲ್ಯಾಬ್ ಕಾರ್ಯನಿರ್ವಹಿಸುತ್ತಿದೆ.
ಇದನ್ನೂ ಓದಿ:-ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನ ಕಾಯಿಲೆಗೆ ಎರಡು ಸಾವು-43 ಕ್ಕೆ ಏರಿಕೆ ಕಂಡ KFD ಗೆ ಸೊಳ್ಳೆ ತಿಗಣೆ ಓಡಿಸುವ ಔಷಧವೇ ಗತಿ!
ಪ್ರತಿ ವರ್ಷ ಮಂಗನಕಾಯಿಯಿಂದ ಕನಿಷ್ಟ 20 ಜನರ ವರೆಗೆ ಸಾವಾಗಿದೆ.ಈ ಹಿಂದೆ ಮಂಗನಕಾಯಿಲೆಯಿಂದ ಮೃತರಾದ ಕುಟುಂಬಕ್ಕೆ ಪರಿಹಾರ ನೀಡಲಾಗಿತ್ತಾದರೂ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಭಾಗದ ಮೃತ ಕುಟುಂಬಗಳಿಗೆ ಸರ್ಕಾರ ಪರಿಹಾರ ನೀಡಿರಲಿಲ್ಲ.
ಆದ್ರೆ ಇದೀಗ ಮಂಗನ ಕಾಯಿಲೆಗೆ ಬಜೆಟ್ ನಲ್ಲಿ ಹಣ ಇರಿಸಲಾಗಿದ್ದು ಮಲೆನಾಡು ಭಾಗದ ಮಂಗನ ಕಾಯಿಲೆ ಪೀಡಿತ ಪ್ರದೇಶಕ್ಕೆ ಒಂದಿಷ್ಟು ಭರವಸೆ ಸಿಕ್ಕಂತಾಗಿದೆ.