For the best experience, open
https://m.kannadavani.news
on your mobile browser.
Advertisement

CENTRAL GOVERNMENT | ಆರು ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ-ವಿವರ ನೋಡಿ

Agriculture information news 19 October 2024:- ಕೇಂದ್ರ ಸರ್ಕಾರ ರೈತರಿಗೆ ಬಂಪರ್ ದೀಪಾವಳಿ (Deepavali)ಉಡುಗೊರೆ ನೀಡಿದೆ.
09:51 PM Oct 19, 2024 IST | ಶುಭಸಾಗರ್
central government   ಆರು ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ ವಿವರ ನೋಡಿ

CENTRAL GOVERNMENT | ಆರು ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ-ವಿವರ ನೋಡಿ

Advertisement

Agriculture information news 19 October 2024:- ಕೇಂದ್ರ ಸರ್ಕಾರ ರೈತರಿಗೆ ಬಂಪರ್ ದೀಪಾವಳಿ (Deepavali)ಉಡುಗೊರೆ ನೀಡಿದೆ.

ಹೌದು ಪ್ರಮುಖ ಹಿಂಗಾರು ಬೆಳೆಗಳಾದ ಗೋಧಿ, ಬಾರ್ಲಿ, ಕಡಲೆಕಾಳು, ಸೂರ್ಯಕಾಂತಿ ಸೇರಿ ಒಟ್ಟು 6 ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಿದೆ.

ಬೆಂಬಲ ಬೆಲಯಲ್ಲಿ ಕ್ವಿಂಟಾಲ್‌ಗೆ ಗರಿಷ್ಠ 300 ರೂಪಾಯಿ ಹಾಗೂ ಕನಿಷ್ಠ 130 ರೂಪಾಯಿ 6 ರಾಬಿ ಅಂದರೆ ಹಿಂಗಾರು ಬೆಳೆಗಳ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಯನ್ನು ಕ್ವಿಂಟಾಲ್‌ಗೆ 130 ರೂ.ನಿಂದ 300 ರೂ.ವರೆಗೆ ಏರಿಕೆ ಮಾಡಿದೆ.

ಹಿಂಗಾರು ಬೆಳೆಗಳಿಗೆ (crops) ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಯನ್ನು ಕೇಂದ್ರ ಸರ್ಕಾರ ನಿಗದಿ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ನೇತೃತ್ವದ ಸಚಿವ ಸಂಪುಟ ಸಭೆ ಈ ಸಂಬಂಧದ ಪ್ರಸ್ತಾವನೆಗೆ ಬುಧವಾರ ಒಪ್ಪಿಗೆ ನೀಡಿದೆ.

2025-26ನೇ ಸಾಲಿಗೆ ಅನ್ವಯವಾಗುವಂತೆ ಕೇಂದ್ರ ಸಚಿವ ಸಂಪುಟವು ಹಿಂಗಾರು ಬೆಳೆಗಳಿಗೆ ಹೊಸ ಬೆಂಬಲ ಬೆಲೆಯನ್ನು ನಿಗದಿಮಾಡಿದೆ.

ಇದನ್ನೂ ಓದಿ:-ಹಳಿಯಾಳದಲ್ಲಿ ಆನೆ ಕಾಟ! ಕೃಷಿ ಜಮೀನಿಗೆ ನುಗ್ಗಿ ರಂಪಾಟ|Video ನೋಡಿ.

ಯಾವ ಬೆಲೆ ಎಷ್ಟು ಬೆಂಬಲ ಬೆಲೆ:-

ಸಾಸಿವೆಗೆ ಪ್ರತಿ ಕ್ವಿಂಟಾಲ್‌ಗೆ 300 ರೂಪಾಯಿ, ಮಸೂ‌ರ್ ಬೇಳೆಗೆ ಪ್ರತಿ ಕ್ವಿಂಟಲ್‌ಗೆ 275 ರೂಪಾಯಿ, ಉದ್ದಿನಬೇಳೆಗೆ ಕ್ವಿಂಟಲ್ ಗೆ 210 ರೂಪಾಯಿ, ಗೋಧಿಗೆ 150 ರೂಪಾಯಿ, ಕುಸುಬೆಗೆ 140 ರೂಪಾಯಿ, ಬಾರ್ಲಿ ಕ್ವಿಂಟಾಲ್‌ಗೆ 130 ರೂಪಾಯಿ ಏರಿಕೆಮಾಡಿದೆ.

ರೈತರ ಬೆಳೆಗಳಿಗೆ ಖರ್ಚಿಗಿಂತ ಒಂದೂವರೆ ಪಟ್ಟು ಹೆಚ್ಚು ಎಂಎಸ್‌ಪಿ (MSP)ನೀಡಬೇಕು ಎನ್ನುವ ನೀತಿಯಂತೆ ದರ ನಿಗದಿಯಾಗಿದೆ.

ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗ
(ಸಿಎಸಿಪಿ) ಬಿತ್ತನೆ ಹಂಗಾಮು ಮುಗಿಯುವ
ಮೊದಲು 22 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಶಿಫಾರಸು ಮಾಡುತ್ತದೆ.

ಮುಂಗಾರಿನಲ್ಲಿ 14 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಿದರೆ, 7ಹಿಂಗಾರು ಬೆಳೆಗಳಿಗೆ ಎಂಎಸ್‌ಪಿಯ
ನೀಡಲಾಗುತ್ತದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ