ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Chandra Grahan: ಯಾವರಾಶಿಗೆ ಏನು ಫಲ ,ವಿವರ ನೋಡಿ

2025ರ ಸೆಪ್ಟೆಂಬರ್ 7ರ ಚಂದ್ರ ಗ್ರಹಣ: 12 ರಾಶಿಗಳ ಫಲ ಹೇಗಿದೆ ನೋಡಿ. ಮೇಷದಿಂದ ಮೀನದವರೆಗಿನ ಲಾಭ-ನಷ್ಟಗಳ ಸಂಪೂರ್ಣ ವಿವರ ಧಾರ್ಮಿಕ ಪಂಚಾಂಗದ ಪ್ರಕಾರ.
03:34 PM Sep 06, 2025 IST | ಶುಭಸಾಗರ್
2025ರ ಸೆಪ್ಟೆಂಬರ್ 7ರ ಚಂದ್ರ ಗ್ರಹಣ: 12 ರಾಶಿಗಳ ಫಲ ಹೇಗಿದೆ ನೋಡಿ. ಮೇಷದಿಂದ ಮೀನದವರೆಗಿನ ಲಾಭ-ನಷ್ಟಗಳ ಸಂಪೂರ್ಣ ವಿವರ ಧಾರ್ಮಿಕ ಪಂಚಾಂಗದ ಪ್ರಕಾರ.

Chandra Grahan: ಯಾವರಾಶಿಗೆ ಏನು ಫಲ ,ವಿವರ ನೋಡಿ

Advertisement

Chandra Grahan: ಇದೇ ಭಾನುವಾರ ಸೆಪ್ಟೆಂಬರ್ 7 ರಂದು 2025 ರ ಕೊನೆಯ ಚಂದ್ರ ಗ್ರಹಣವು ಸಂಭವಿಸಲಿದೆ. ಈ ಚಂದ್ರ ಗ್ರಹಣದಿಂದ ಹಲವು ರಾಶಿಗೆ ಲಾಭವಾದರೆ, ಕೆಲವು ರಾಶಿಗೆ ನಷ್ಟವಾಗಲಿದೆ ಎನ್ನುತ್ತದೆ ಧಾರ್ಮಿಕ ಪಂಚಾಂಗ .ಹಾಗಿದ್ದರೇ ಯಾವ ರಾಶಿಗೆ ಏನೆಲ್ಲಾ ಫಲವಿದೆ ಅದರ ವಿವರ ಈ ಕೆಳಗಿನಂತಿದೆ.

ಗ್ರಹಣವು ಭಾನುವಾರ ಮಧ್ಯರಾತ್ರಿ 9:57 ಕ್ಕೆ ಶುರುವಾಗಿ ಸೆಪ್ಟೆಂಬರ್ 8ರ ಮಧ್ಯರಾತ್ರಿ 1:26 ರವರೆಗೆ ಈ ಗ್ರಹಣ ಕಾಲ ಇರಲಿದೆ.

ಚಂದ್ರ ಗ್ರಹಣದ ಪೂರ್ಣ ಪ್ರಭಾವದ ಆರಂಭವು ಮಧ್ಯರಾತ್ರಿ 12.28 ರಿಂದ 1.56 ರವರೆಗೆ ಇರಲಿದೆ. ಇದರ ಪ್ರಭಾವವನ್ನು ಎಲ್ಲಾ 12 ರಾಶಿಗಳಿಗೆ ಸೇರಿದ ಜನರ ಮೇಲೆ ನೋಡಬಹುದಾಗಿದೆ.

Advertisement

ಮೇಷ ರಾಶಿ

ಈ  ರಾಶಿಗೆ 11ನೇ ಮನೆಯಲ್ಲಿ ಚಂದ್ರ ಗ್ರಹಣ ಸಂಭವಿಸಲಿದ್ದು, ಇದು ಲಾಭದ ಮನೆಯಾಗಿದೆ. ಹಾಗಾಗಿ ಈ ಅವಧಿಯಲ್ಲಿ ನಿಮಗೆ ಆರ್ಥಿಕ ಲಾಭ ಉನ್ನತಿಯ ಸಂಕೇತವಾಗಿದೆ. ವ್ಯಾಪಾರದಲ್ಲಿ ಲಾಭ,ಆಧಾಯದಲ್ಲಿ ಹೆಚ್ಚಳ ,ಆರೋಗ್ಯ ಸುಧಾರಣೆ, ಕುಟುಂಬ ಸೌಖ್ಯವಿದ್ದು ,ಮಾನಸಿಕ ನೆಮ್ಮದಿ ಸಿಗಲಿದೆ.

ವೃಷಭ

 ಈ ರಾಶಿಗೆ ಚಂದ್ರ ಗ್ರಹಣವು ಮಿಶ್ರ ಫಲವನ್ನು ನೀಡಲಿದ್ದು, ಗ್ರಹಣವು ಈ ರಾಶಿಯ ಹತ್ತನೇ ಮನೆಯಲ್ಲಿ ಸಂಭವಿಸಲಿದೆ. ಇಲ್ಲಿ ರಾಹುವಿನ ಸಂಚಾರವನ್ನು ನೋಡಬಹುದಾಗಿದೆ. ಹಾಗಾಗಿ ಕೆಲಸದ ಸ್ಥಳದಲ್ಲಿ ಇದರ ಪ್ರಭಾವವನ್ನು ಹೆಚ್ಚಾಗಿ ನೋಡಬಹುದಾಗಿದೆ. ಆದ್ದರಿಂದ ಈ ಅವಧಿಯಲ್ಲಿ ನಿಮಗೆ ಹೆಚ್ಚಿನ ಪ್ರಯೋಜನಗಳಾಗುವುದು. ಈ ಅವಧಿಯಲ್ಲಿ ನೀವು ಆರೋಗ್ಯಕ್ಕೆ ಸಂಬಂಧಿಸಿದಂತೆ ಸಮಸ್ಯೆ,ಮಾನಸಿಕ ತೊಲಲಾಟ,ಕುಟುಂಬದಲ್ಲಿ ಭಿನ್ನಾಭಿಪ್ರಾಯ ಕಾಣುವುದು.ಆರ್ಥಿಕ ಪರಿಸ್ಥಿತಿ ಏರಿಳಿತ ಇರಲಿದೆ.

ಮಿಥುನ ರಾಶಿ

ಈ ರಾಶಿಗೆ ಒಂಬತ್ತನೇ ಮನೆ ಅಂದರೆ ಅದೃಷ್ಟದ ಮನೆಯಲ್ಲಿ ಗ್ರಹಣ ಯೋಗದ ನಿರ್ಮಾಣವಾಗುವುದು. ಇದರಿಂದಾಗಿ ನಿಮ್ಮ ಎಲ್ಲಾ ಅಪೂರ್ಣ ಕೆಲಸಗಳು ಮತ್ತೆ ಆರಂಭವಾಗಲಿದೆ. ಆರೋಗ್ಯ ಸಮಸ್ಯೆ ಎದುರಾಗುವ ಸಾಧ್ಯತೆಗಳಿವೆ. ಹಣದ ಖರ್ಚಿನಲ್ಲಿ ಏರಿಳಿತ ಇರಲಿದ್ದು ಕೆಲವರು ಸಾಧಾರಣ ಫಲ ಪಡೆದರೇ ಕೆಲವರಿಗೆ ಮಧ್ಯಮ ಫಲಗಳು ದೊರೆಯಲಿದೆ.

ಕಟಕ ರಾಶಿ

ಈ ರಾಶಿಗೆ 8ನೇ ಮನೆಯಲ್ಲಿ  ಗ್ರಹಣ ಯೋಗದ ನಿರ್ಮಾಣವಾಗುವುದು. ಎಂಟನೇ ಮನೆಯು ರಹಸ್ಯ, ದುರ್ಘಟನೆ, ಹಠಾತ್ ಲಾಭ ಅಥವಾ ಹಾನಿಯನ್ನು ಪಡೆಯುವ ಯೋಗವನ್ನು ಸೃಷ್ಟಿಸುತ್ತದೆ. ಹಾಗಾಗಿ ಕಟಕ ರಾಶಿಗೆ ಸೇರಿದ ಜನರು ತಮ್ಮ ಮನೆಯ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಜೊತೆಗೆ ಖರ್ಚು ಕಡಿಮೆ ಮಾಡಿ, ಆದಾಯದ ಬಗ್ಗೆ ಹೆಚ್ಚಿನ ಗಮನವನ್ನು ನೀಡಿ. ಇದರಿಂದ ಧನ ಲಾಭವಾಗುವುದು.

ಸಿಂಹ ರಾಶಿ

ಈ ರಾಶಿಗೆ 7ನೇ ಮನೆಯಲ್ಲಿ ಈ ಚಂದ್ರ ಗ್ರಹಣ ಸಂಭವಿಸಲಿದೆ. ಹಾಗಾಗಿ ವೈವಾಹಿಕ ಜೀವನದಮೇಲೆ ಅಡ್ಡ ಪರಿಣಾಮ ಬೀರುವುದು.ವ್ಯಾಪಾರದಲ್ಲಿ ಲಾಭ ,ನಷ್ಟಗಳಿದ್ದು ಸೋಲು ಅನುಭವಿಸುವ ಸಾಧ್ಯತೆಗಳಿರುತ್ತವೆ.ಆರೋಗ್ಯದ ಮೇಲೆ ಗ್ರಹಣ ಫಲ ಪರಿಣಾಮ ಭೀರುವುದರಿಂದ ಎಚ್ಚರಿಕೆಯಿಂದ ಇರಬೇಕು. ಕುಟುಂಬದಲ್ಲಿ ಮಿಶ್ರ ಫಲ ಇರುವುದು.

ಕಾರವಾರದ ಗಿಲಾನಿ ಸೂಪರ್ ಮಾರ್ಕೆಟ್ ನಲ್ಲಿ ಭರ್ಜರಿ ಆಫರ್ ,ಗ್ರೂಸರಿ ಕರೀದಿ ದಾರರಿಗೆ ಸಿಗಲಿದೆ ಬಂಪರ್ ಬಹುಮಾನ

 ಕನ್ಯಾ ರಾಶಿ

ಈ ರಾಶಿಗೆ ಎಂಟನೇ ಮನೆಯಲ್ಲಿ  ಗ್ರಹಣ ಯೋಗದ ನಿರ್ಮಾಣವಾಗುವುದು. ಇದರಿಂದಾಗಿ ನಿಮ್ಮ ಆರೋಗ್ಯದಲ್ಲಿ ಸುಧಾರಣೆಯಾಗಲಿದೆ ಮತ್ತು ಶತ್ರುಗಳಿಂದ ಮುಕ್ತಿ ದೊರಕುವುದು. ನಿಮ್ಮ ವಿರೋಧಿಗಳು ದೂರವಾಗುವರು. ಕಾರ್ಯದಲ್ಲಿ ಯಶಸ್ಸು,ಪರಿಶ್ರಮಕ್ಕೆ ತಕ್ಕ ಫಲ ಇದ್ದು,ಕುಟುಂಬ ಸೌಖ್ಯ,ಆರ್ಥಿಕ ಅಭಿವೃದ್ಧಿ ಆಗಲಿದ್ದು,ಶುಭ ಫಲ ನಿರೀಕ್ಷಿಸಬಹುದು.

ತುಲಾ ರಾಶಿ

ಈ ರಾಶಿಗೆ 5ನೇ ಮನೆಯಲ್ಲಿ ಈ ಗ್ರಹಣ ಯೋಗದ ನಿರ್ಮಾಣವಾಗುವುದು. ಇದರಿಂದಾಗಿ ತುಲಾ ರಾಶಿಗೆ ಸೇರಿದ ಜನರಿಗೆ ಮಕ್ಕಳಿಗೆ ಸಂಬಂಧಿಸಿದಂತಹ ಚಿಂತೆ ಈ ಸಂದರ್ಭದಲ್ಲಿ ಕಾಡುವುದು. ಶಿಕ್ಷಣಕ್ಕೆ ಸಂಬಂಧಿಸಿದ ಕ್ಷೇತ್ರದಲ್ಲಿ ಕೆಲಸವನ್ನು ಮಾಡುವ ಈ ರಾಶಿಗೆ ಸೇರಿದ ಜನರು ಈ ಅವಧಿಯಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ.ಆರ್ಥಿಕ ಏರಿಳಿತ ಇರಲಿದ್ದು ,ವ್ಯಾಪಾರ ವಹಿವಾಟಿನಲ್ಲಿ ಸಮಸ್ಯೆ ಎದುರಿಸಬೇಕಾಗುವುದು.

ವೃಶ್ಚಿಕ ರಾಶಿ

ಈ ರಾಶಿಗೆ ನಾಲ್ಕನೇ ಮನೆಯಲ್ಲಿ ಈ ವರ್ಷದ ಕೊನೆಯ ಚಂದ್ರ ಗ್ರಹಣವು ಸಂಭವಿಸಲಿದ್ದು, ಇದರ ಪರಿಣಾಮವಾಗಿ ನಿಮ್ಮ ಮನೆಯಲ್ಲಿ ಸುಖ, ಸಮೃದ್ಧಿ ಹೆಚ್ಚಾಗಲಿದೆ. ಈ ಅವಧಿಯಲ್ಲಿ ನೀವು ಹೊಸ ವಾಹನವನ್ನು ಖರೀದಿಸಬಹುದಾಗಿದೆ. ಹಾಗೆ ಧಾರ್ಮಿಕ ಯಾತ್ರೆಗೆ ಪ್ರಯಾಣಿಸುವುದರಿಂದ ಸಾಕಷ್ಟು ಲಾಭವನ್ನು ಪಡೆಯುವಿರಿ.ಉದ್ಯೋಗದಲ್ಲಿ ಸಮಸ್ಯೆ ,ಕುಟುಂಬದ ಹಿರಿಯರ ಆರೋಗ್ಯ ಸಮಸ್ಯೆ ನಿಮಗೆ ಚಿಂತೆಗೆ ಕಾರಣವಾಗಬಹುದು.

ಧನು ರಾಶಿ

ಈ ರಾಶಿಗೆ ಮೂರನೇ ಮನೆಯಲ್ಲಿ ಈ ಚಂದ್ರ ಗ್ರಹಣ ಸಂಭವಿಸಲಿದ್ದು, ಇದರ ಪರಿಣಾಮವಾಗಿ ನಿಮ್ಮ ಆತ್ಮವಿಶ್ವಾಸ ಮತ್ತು ಸಾಹಸದಲ್ಲಿ ಹೆಚ್ಚಳವಾಗಲಿದೆ. ವ್ಯಾಪಾರ ವಹಿವಾಟು ಸಮಸ್ಯೆ,ಉದ್ಯೋಗ ಕಿರಿಕಿರಿ ಇರಲಿದೆ. ಆರೋಗ್ಯ ಮಧ್ಯಮವಿದ್ದು, ಆರ್ಥಿಕ ಸ್ಥಿತಿ ಮೇಲೆ ಪರಿಣಾಮ ಬೀರಲಿದೆ.

ಮಕರ ರಾಶಿ

ಈ ರಾಶಿಗೆ ಎರಡನೇ ಮನೆಯಲ್ಲಿ ಈ ಚಂದ್ರ ಗ್ರಹಣ ಸಂಭವಿಸಲಿದೆ. ಹಾಗಾಗಿ ನಿಮ್ಮ ಸಂಬಂಧಗಳಲ್ಲಿ ಒತ್ತಡ ಹೆಚ್ಚಾಗುವ ಸಂಭವವಿದೆ. ಆದ್ದರಿಂದ ಈ ಅವಧಿಯಲ್ಲಿ ಮಕರ ರಾಶಿಗೆ ಸೇರಿದ ಜನರು ತಮ್ಮ ಮಾತನ್ನು ನಿಯಂತ್ರಿಸುವುದು ಉತ್ತಮ. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುವ ಸಂಭವವಿದೆ. ಜೊತೆಗೆ ಈ ಅವಧಿಯಲ್ಲಿ ಹಣದ ವಹಿವಾಟು ನಡೆಸುವಾಗ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಈ ಅವಧಿಯಲ್ಲಿ ಹೊಸ ಅವಕಾಶಗಳನ್ನು ಪಡೆಯುವಿರಿ. ಹಾಗೆ ಕೆಲಸದ ಸ್ಥಳದಲ್ಲಿ ಸಕಾರಾತ್ಮಕ ಫಲಿತಾಂಶಗಳು ದೊರಕುವ ಸಾಧ್ಯತೆ ಹೆಚ್ಚಾಗಿರುವುದು.

ಕುಂಭ ರಾಶಿ

ಈ ರಾಶಿಗೆ ಮೊದಲನೇ ಮನೆಯಲ್ಲಿ ಈ ಗ್ರಹಣ ಯೋಗದ ನಿರ್ಮಾಣವಾಗಲಿದೆ. ಇದು ನಿಮ್ಮ ವ್ಯಕ್ತಿತ್ವದ ಮೇಲೆ ಹೆಚ್ಚಿನ ಪ್ರಭಾವವನ್ನು ಬೀರುವುದು.ವೈವಾಹಿಕ ಜೀವನದಲ್ಲಿ ಸಮಸ್ಯೆ,ಆರೋಗ್ಯ ಸಮಸ್ಯೆ ಕಾಡುವುದು.ವ್ಯಾಪಾರ ,ವ್ಯವಹಾರ ದಲ್ಲಿ ಮಧ್ಯಮ ಪ್ರಭಾವ ಇದ್ದು ಉತ್ತಮ ಫಲವಿಲ್ಲ, ಉದ್ಯೋಗಿಗಳಿಗೆ ಮಿಶ್ರ ಫಲ ಸಿಗಲಿದೆ.

 ಮೀನ ರಾಶಿ

 ಈ ರಾಶಿಗೆ 12ನೇ ಮನೆಯ ಮೇಲೆ ಈ ಚಂದ್ರ ಗ್ರಹಣವು ಸಂಭವಿಸಲಿದ್ದು, ಆರ್ಥಿಕತೆಯ ಮೇಲೆ ಪರಿಣಾಮ ಬೀರಲಿದೆ.ಆರೋಗ್ಯ ಸಮಸ್ಯೆ,ಮಾನಸಿಕ ನೆಮ್ಮದಿ ಮೇಲೆ ಪರಿಣಾಮ ಭೀರಲಿದ್ದು ,ಕುಟುಂಬದ ಮೇಲೂ ಪರಿಣಾಮ ಭೀರಲಿದೆ. ಹೊಸ ಕೆಲಸಗಳಲ್ಲಿ ಫಲ ಕಡಿಮೆ ಇದ್ದು ,ವಿದೇಶಿ ವಹಿವಾಟು ದಾರರಿಗೆ ಶುಭವಿದೆ.

 

Advertisement
Tags :
KannadaLunar Eclipse 2025 KannadaRashifal 2025 KannadaSeptember 2025 Chandra Grahanಚಂದ್ರ ಗ್ರಹಣ 2025 ಫಲ
Advertisement
Next Article
Advertisement