Crime news| ಭಟ್ಕಳದ ಪೊಲೀಸರ ಕೈಯಲ್ಲಿರುವ ಈತನಿಗೆ ಪೊಲೀಸರೇ ಟಾರ್ಗೆಟ್ !
Crime news| ಭಟ್ಕಳದ ಪೊಲೀಸರ ಕೈಯಲ್ಲಿರುವ ಈತನಿಗೆ ಪೊಲೀಸರೇ ಟಾರ್ಗೆಟ್ !
ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಭಟ್ಕಳ(bhatkal) ದಲ್ಲಿ ಹುಸಿ ಬಾಂಬ್ ಸ್ಫೋಟಿಸುವ ಬೆದರಿಕೆ ಈಮೇಲ್ ಹಾಕಿದ ಪ್ರಕರಣ ಸಂಬಂಧ ಆರೋಪಿ ನಿತಿನ್ ಶರ್ಮಾ ಅಲಿಯಾಸ್ ಖಾಲೀದ್‌ನನ್ನು ಭಟ್ಕಳ ಪೊಲೀಸರು ಬಂದಿಸಿ ತನಿಖೆ ಕೈಗೊಂಡಿದ್ದು ಕೇರಳಕ್ಕೆ ಮಹಜರಿಗಾಗಿ ಕರೆದೊಯ್ದಿದ್ದಾರೆ.
ಕೇರಳದ ಮೂನಾರಿಗೆ ಮಹಜರಿಗಾಗಿ ಕರೆದೊಯ್ದ ಭಟ್ಕಳ ಪೊಲೀಸರಿಗೆ ಈತ 16 ಪ್ರಕರಣದಲ್ಲಿ ಆರೋಪಿಯಾಗಿರುವುದು ಪತ್ತೆ ಮಾಡಿದ್ದಾರೆ.
Bhatkal: ಅರಣ್ಯದಲ್ಲಿ ಗೋವುಗಳ ಅಸ್ಥಿಪಂಜರ ಪತ್ತೆ ಪ್ರಕರಣ ಬೆನ್ನಲ್ಲೇ ಈವರೆಗೆ ಸಿಕ್ತು 2425 ಕೆಜಿ ಗೋಮಾಂಸ!
ಪ್ರತಿ ಪ್ರಕರಣದಲ್ಲೂ ಈತ ಹುಸಿ ಬಾಂಬ್ ಬೆದರಿಕೆ ಹಾಕಿರುವುದು ಪತ್ತೆಯಾಗಿದೆ.ದೆಹಲಿಯ ಪಟೇಲ್ ನಗರದ ನಿವಾಸಿ ನಿತಿನ್ ಶರ್ಮಾ ಅಲಿಯಾಸ್ ಖಾಲೀದ್ ಕಳೆದ ಜುಲೈ ತಿಂಗಳಲ್ಲಿ ಭಟ್ಕಳ ಶಹರ ಠಾಣೆಗೆ ಇ- ಮೇಲ್ ಕಳುಹಿಸಿದ್ದನು.
ಬೆಳಿಗ್ಗೆ 7.22 ಕ್ಕೆ ಮೇಲ್ ಕಳುಹಿಸಿದ್ದ ಆರೋಪಿ 'ನಾವು ಪಟ್ಟಣದಲ್ಲಿ ಬಾಂಬ್ ಇಟ್ಟಿದ್ದೇವೆ' ಎಂದು ಒಂದು ಲೈನರ್‌ನಲ್ಲಿ ಬರೆದಿದ್ದ, ಎರಡನೇ ಇಮೇಲ್ ಬೆಳಿಗ್ಗೆ 7.23 ಕ್ಕೆ ಬಂದಿತ್ತು. ಇದು 24 ಗಂಟೆಗಳಲ್ಲಿ ಸ್ಫೋಟಗೊಳ್ಳುತ್ತದೆ' ಎಂದು ಬರೆದಿತ್ತು. ಪೊಲೀಸರು ಮೊಬೈಲ್ ಫೋನ್ ಅನ್ನು ಕಣ್ಣನ್ ಬಳಿ ಪತ್ತೆಹಚ್ಚಿದರು.
Bhatkal| ಅರಣ್ಯದಲ್ಲಿ ರಾಶಿ-ರಾಶಿ ಗೋಮೂಳೆ ಪತ್ತೆ ಪ್ರಕರಣ -ಇಬ್ಬರು ಆರೋಪಿಗಳ ಬಂಧನ
ಇನ್ನು ಈತ ಬಾಂಬ್ ಸ್ಫೋಟದ ಬೆದರಿಕೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಮೈಸೂರು ಜೈಲಿನಲ್ಲಿದ್ದನು.
ಈತನ ವಿರುದ್ಧ ಕೇರಳ- 6, ದೆಹಲಿ-1, ಮಧ್ಯಪ್ರದೇಶ-1, ಪುದುಚೇರಿ-2, ಉತ್ತರಾಖಂಡ್-1, ಒಡಿಸ್ಸಾ-1, ಆಂಧ್ರಪ್ರದೇಶ-1 ಹಾಗೂ ಕರ್ನಾಟಕದಲ್ಲಿ 3 ಪ್ರಕರಣ ದಾಖಲಾಗಿವೆ.
ಸದ್ಯ ಈತನನ್ನು ಬಾಡಿ ವಾರೆಂಟ್ ಮೂಲಕ ಭಟ್ಕಳಕ್ಕೆ ಕರೆತಂದು ಕೇರಳದಲ್ಲಿ ಮಹಜರು ಮಾಡಲಾಗಿದೆ.
ಪೊಲೀಸರ ಮೇಲೆ ದ್ವೇಶ.
ಖಾಲೀದ್ ಗೆ ಈ ಹಿಂದೆ ಪ್ರಕರಣವೊಂದರಲ್ಲಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ಇದರಿಂದ ಸಿಟ್ಟಿಗೆದ್ದ ಈತ ಪೊಲೀಸರ ಮೇಲೆ ಸೇಡು ತೀರಿಸಿಕೊಳ್ಳಲು ಹೀಗೆ ಹುಸಿ ಬಾಂಬ್ ಬೆದರಿಕೆ ಹಾಕುತಿದ್ದಾನೆ ಎಂಬುದು ತಿಳಿದು ಬಂದಿದೆ.
ಈತ ಬೇರೆಯವರ ಮೊಬೈಲ್ ಕದಿಯುವುದು ಅಥವಾ ಕೇಳಿ ಪಡೆದು ಹೀಗೆ ಇನ್ನೊಬ್ಬರ ಮೊಬೈಲ್ ನಲ್ಲಿ ಕರೆ ಅಥವಾ ಇ-ಮೇಲ್ ಮಾಡಿ ಹುಸಿ ಬಾಂಬ್ ಬೆದರಿಕೆ ಹಾಕುತಿದ್ದನು.