Dandeli :ವಾಹನ ಸವಾರರಿಗೆ ರಸ್ತೆಯಲ್ಲಿ ಅಡ್ಡಗಟ್ಟಿ ಕುಳಿತ ಚಿರತೆ,ಹುಲಿ!
Dandeli :ವಾಹನ ಸವಾರರಿಗೆ ರಸ್ತೆಯಲ್ಲಿ ಅಡ್ಡಗಟ್ಟಿ ಕುಳಿತ ಚಿರತೆ,ಹುಲಿ!
ಕಾರವಾರ :- ಚಿರತೆಯೊಂದು ಹೆದ್ದಾರಿಯಲ್ಲಿ ಕುಳಿತು ಕೆಲವು ಸಮಯಗಳ ಕಾಲ ವಾಹನ ಸವಾರರಿಗೆ ಬೆವರಿಳಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ (Dandeli)ಅಂಬಿಕಾ ನಗರ ರಸ್ತೆಯಲ್ಲಿ ಇಂದು ನಡೆದಿದೆ.
ಅಂಬಿಕಾನಗರ - ದಾಂಡೇಲಿ ರಸ್ತೆಯಲ್ಲಿ ಪ್ರತಿದಿನ ಕಾಡುಪ್ರಾಣಿಗಳ ಓಡಾಟ ಸಾಮಾನ್ಯ. ಕಾಳಿ ಹುಲಿ ಸಂರಕ್ಷಿತ ಪ್ರದೇಶವೂ ಹೌದು. ಆಗಾಗ ಆನೆಗಳು,ಹುಲಿ ಗಳು ಈ ಭಾಗದಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತದೆ.

ಆದ್ರೆ ವಾಹನದ ಶಬ್ದ ಕೇಳಿದಾಗ ಕಾಡುಪ್ರಾಣಿಗಳು ರಸ್ತೆಯಿಂದ ಮರೆಮಾಚಿಕೊಂಡು ಕಾಡು ಸೇರುತ್ತವೆ.
ಇದನ್ನೂ ಓದಿ:-Dandeli: ದೇವರ ದರ್ಶನಕ್ಕೆ ಹೋದವರ ಹೊಡಿಬಡಿ ಆಟ! ಇಬ್ಬರು ಗಂಭೀರ ಗಾಯ
ಆದ್ರೆ ಇಂದು ಚಿರತೆಯೊಂದು ಅಂಬಿಕಾ ನಗರ -ದಾಂಡೇಲಿ ಮಾರ್ಗದ ರಸ್ತೆಯಲ್ಲಿ ಕಾಣಿಸಿಕೊಂಡು ವಾಹನಗಳು ಬಂದರೂ ಹೆದರದೇ ರಸ್ತೆಯಲ್ಲೇ ಕೆಲವು ಸಮಯ ಕುಳಿತುಬಿಟ್ಟಿತು. ಇದರಿಂದ ಹೆದರಿದ ವಾಹನ ಸವಾರರು ಚಿರುತೆ ಕಾಡಿನೊಳಗೆ ಹೋಗುವ ವರೆಗೂ ವಾಹನ ನಿಲ್ಲಿಸಿ ಕಾದು ಅದು ತೆರಳಲು ಅನುವು ಮಾಡಿಕೊಟ್ಟರು. ಈ ದೃಶ್ಯವನ್ನು ದಾಂಡೇಲಿ ಭಾಗಕ್ಕೆ ಹೋಗುವ ವಾಹನ ಸವಾರನೊಬ್ಬ ಚಿತ್ರೀಕರಿಸಿದ್ದು ಇದೀಗ ವೈರಲ್ ಆಗುತ್ತಿದೆ.
ಇದನ್ನೂ ಓದಿ:-Joida: ಜಿಂಕೆ ಕೋಡು, ಕಾಡು ಬೆಕ್ಕಿನ ಹಲ್ಲು ವಶಕ್ಕೆ ಆರೋಪಿ ಬಂಧನ
ದಾಂಡೇಲಿ ಚರ್ಚ ಕ್ರಾಸ್ ನಲ್ಲಿ ವಾಹನ ಸವಾರರಿಗೆ ಕಾಣಿಸಿಕೊಂಡ ಹುಲಿ ಮರಿಗಳು!

ದಾಂಡೇಲಿ ಬರ್ಚಿ ಕ್ರಾಸ್ ಬಳಿ ಗಣೇಶಗುಡಿಯಲ್ಲಿ ಎರಡು ಹುಲಿ ಮರಿಗಳು ರಸ್ತೆ ದಾಟುವಾಗ ವಾಹನ ಸವಾರರ ಕ್ಯಾಮರಾಕ್ಕೆ ಸೆರೆಯಾಗಿದೆ.