Dandeli |ಕಾಳಿ ನದಿಯ ಕಬ್ಬಿಣದ ಬೇಲಿ ದಾಟಿ ಬಂದ ಮೊಸಳೆ ! ವಿಡಿಯೋ ನೋಡಿ
Dandeli |ಕಾಳಿ ನದಿಯ ಕಬ್ಬಿಣದ ಬೇಲಿ ದಾಟಿ ಬಂದ ಮೊಸಳೆ ! ವಿಡಿಯೋ ನೋಡಿ
ವಿಡಿಯೋ ನೋಡಿ:-
ಕಾರವಾರ (27 october 2025) :- ಮೊಸಳೆಗಳು ಹೊರಬಾರದಂತೆ ಕಬ್ಬಿಣದ ಬೇಲಿ ಅಳವಡಿಸಿದರೂ ನದಿಯ ತೀರ ಭಾಗದಲ್ಲಿ ಹಾಕಿದ ಬೇಲಿ ದಾಟಿ ದಾಳಿ ಮಾಡುತ್ತಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ(dandeli) ನಗರದಲ್ಲಿ ನಡೆದಿದೆ.
ಮೊಸಳೆಯೊಂದು(crocodile)ಕಾಳಿ ನದಿಯಲ್ಲಿ ಹಾಕಿರುವ ಕಬ್ಬಿಣದ ಬೇಲಿಯನ್ನು ದಾಟಿ ದಡದ ಕಡೆ ಬರುತ್ತಿರುವ ವಿಡಿಯೋ ವನ್ನು ಸ್ಥಳೀಯರೊಬ್ಬರು ರೆಕಾರ್ಡ್ ಮಾಡಿದ್ದು ಇದೀಗ ವೈರಲ್ ಆಗಿದೆ . ದಾಂಡೇಲಿ ನಗರದ ಕಾಳಿ ನದಿ ಭಾಗದಲ್ಲಿ ಮೊಸಳೆಗಳ ಸಂಖ್ಯೆ ಹೆಚ್ಚಾಗಿದ್ದು ನಗರ ಪ್ರದೇಶಕ್ಕೂ ದಾಳಿ ಇಡುತ್ತಿವೆ.
ನಗರ ಭಾಗದ ತೀರ ಪ್ರದೇಶಗಳಲ್ಲಿ ಬರುವ ಮೊಸಳೆಗಳು ಕೋಳಿ,ಹಂದಿ,ಹಸುಗಳನ್ನು ಭೇಟೆಯಾಡಿ ಎಳೆದೊಯ್ಯುತ್ತಿದೆ. ಇನ್ನು ಜನರ ಮೇಲೂ ದಾಳಿ ಮಾಡುತಿದ್ದು ಕಳೆದ ಒಂದು ವರ್ಷದಲ್ಲಿ ಮೂರು ಜನ ಮೊಸಳೆ ದಾಳಿಯಿಂದ ಮೃತಪಟ್ಟಿದ್ದಾರೆ.
Dandeli : ಕುಟುಂಬಸ್ತರಿಂದಲೇ ಸರಪಳಿಯಲ್ಲಿ ಬಂದಿಯಾದ ಮಾನಸಿಕ ಅಸ್ವಸ್ತನ ರಕ್ಷಣೆ
ಇತ್ತೀಚೆಗೆ ಬೇಲಿಯಲ್ಲಿ ಸಿಲುಕಿಕೊಂಡಿದ್ದ ಮೊಸಳೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಣೆ ಮಾಡಿ ಮರಳಿ ನದಿಗೆ ಬಿಟ್ಟಿದ್ದರು. ನಗರಕ್ಕೆ ಬಾರದಂತೆ ಬೇಲಿ ಅಲವಡಿಸಿದರೂ ಇದೀಗ ಮೊಸಳೆಗಳು ದಾಳಿ ಇಡುತಿದ್ದು ,ನದಿ ತೀರ ಭಾಗದ ಜನ ಭಯದಲ್ಲಿ ದಿನ ಕಳೆಯುವಂತಾಗಿದೆ.