For the best experience, open
https://m.kannadavani.news
on your mobile browser.
Advertisement

Dandeli: ಜೀವ ಪಣಕ್ಕಿಟ್ಟು ನದಿಯಲ್ಲಿ ಕಾರ್ಯಾಚರಣೆ ಎರಡು ದಿನದ ನಂತರ ವಿದ್ಯುತ್ ಪೂರೈಕೆ ಮಾಡಿದ ಹೆಸ್ಕಾಂ ಸಿಬ್ಬಂದಿ

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ (Dandeli)ಮುಂಗಾರು ಪೂರ್ವ ಭಾರೀ ಗಾಳಿ, ಮಳೆಯಿಂದ ಬೃಹತ್ ಗಾತ್ರದ ಮಾವಿನ ಮರ ಬಿದ್ದು ವಿದ್ಯುತ್ ಲೈನ್ ತುಂಡಾಗಿ ಕಾಳಿ ನದಿ ನೀರಿಗೆ ಬಿದ್ದಿದ್ದ ಇದರಿಂದಾಗಿ ಈ ಭಾಗದ ಬೊಮ್ಮನಳ್ಳಿ, ಕೇದಾಳ, ಕುಳಗಿ ಹಾಗೂ ಅಂಬಿಕಾನಗರ ಪಂಚಾಯತ್‌ ವ್ಯಾಪ್ತಿಯಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು.
03:15 PM Mar 29, 2025 IST | ಶುಭಸಾಗರ್
dandeli  ಜೀವ ಪಣಕ್ಕಿಟ್ಟು ನದಿಯಲ್ಲಿ ಕಾರ್ಯಾಚರಣೆ ಎರಡು ದಿನದ ನಂತರ ವಿದ್ಯುತ್ ಪೂರೈಕೆ ಮಾಡಿದ ಹೆಸ್ಕಾಂ ಸಿಬ್ಬಂದಿ

Dandeli: ಜೀವ ಪಣಕ್ಕಿಟ್ಟು ನದಿಯಲ್ಲಿ ಕಾರ್ಯಾಚರಣೆ ಎರಡು ದಿನದ ನಂತರ ವಿದ್ಯುತ್ ಪೂರೈಕೆ ಮಾಡಿದ ಹೆಸ್ಕಾಂ ಸಿಬ್ಬಂದಿ

Advertisement

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ (Dandeli) ಮುಂಗಾರು ಪೂರ್ವ ಭಾರೀ ಗಾಳಿ, ಮಳೆಯಿಂದ  ಬೃಹತ್ ಗಾತ್ರದ ಮಾವಿನ ಮರ ಬಿದ್ದು ವಿದ್ಯುತ್ ಲೈನ್ ತುಂಡಾಗಿ ಕಾಳಿ ನದಿ ನೀರಿಗೆ ಬಿದ್ದಿದ್ದ ಇದರಿಂದಾಗಿ ಈ ಭಾಗದ ಬೊಮ್ಮನಳ್ಳಿ, ಕೇದಾಳ, ಕುಳಗಿ ಹಾಗೂ ಅಂಬಿಕಾನಗರ ಪಂಚಾಯತ್‌ ವ್ಯಾಪ್ತಿಯಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು.

ಪ್ರಕೃತಿ ಮೆಡಿಕಲ್ ,ಕಾರವಾರ.

ತಕ್ಷಣ ಕಾರ್ಯಪ್ರವೃತ್ತರಾದ ಹೆಸ್ಕಾಂ ಸಿಬ್ಬಂದಿ 11 ಕೆ.ವಿ. ಪ್ರಾಜೆಕ್ಟ್ 1 ಮತ್ತು 2 ಹಾಗೂ ಕಾಳಿ ಮಾರ್ಗದ ವಿದ್ಯುತ್‌ ಲೈನ್‌ ದುರಸ್ತಿ ಕಾರ್ಯ ಕ್ಕೆ ಕೈ ಹಾಕಿದರು. ಆದರೇ ನದಿಯಲ್ಲಿ ಬಿದ್ದ ವಿದ್ಯುತ್ ಲೈನ್ ಗಳನ್ನು ತೆಗೆದು ಸರಿ ಪಡಿಸಲು ಬೋಟ್ ವ್ಯವಸ್ಥೆ ಇಲ್ಲದೇ ಕಷ್ಟವಾಗಿದ್ದು ಇದಲ್ಲದೇ ಈ ನದಿಯಲ್ಲಿ ಮೊಸಳೆಗಳು ಹೆಚ್ಚಿದ್ದು ದಾಳಿ ನಡೆಸುವ ಸಾಧ್ಯತೆಗಳಿತ್ತು.

ಆದರೇ ಹೆಸ್ಕಾಂ ಸಿಬ್ಬಂದಿಗಳು ತಮ್ಮ ಜೀವದ ಹಂಗು ತೊರೆದು ವಿದ್ಯುತ್ ಲೈನ್ ಅನ್ನು ಸರಿಪಡುಸಲು ಮುಂದಾಗಿದ್ದು ಇದಕ್ಕಾಗಿ ಸಂತೋಷ್ ಎಂಬುವವರು ರಿವರ್ ರಾಪ್ಟಿಂಗ್ ಬೋಟ್ ಅನ್ನು ವ್ಯವಸ್ಥೆ ಮಾಡಿಕೊಟ್ಟಿದ್ದು ಎರಡು ದಿನ ಕಾಳಿ ನದಿಯಲ್ಲಿ ನಿರಂತರ ಕಾರ್ಯಾಚರಣೆ ನಡೆಸಿ ಕೊನೆಗೂ ವಿದ್ಯುತ್ ತಂತಿ ಸರಿಪಡಿಸುವಲ್ಲಿ ಯಶಸ್ವಿಯಾಗಿದ್ದು ಇಂದು ದಾಂಡೇಲಿಯ ಅಂಬಿಕಾ ನಗರ ವ್ಯಾಪ್ತಿಯ ಗ್ರಾಮಗಳಿಗೆ ವಿದ್ಯುತ್ ಪೂರೈಕೆ ಮಾಡಿದ್ದಾರೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ