For the best experience, open
https://m.kannadavani.news
on your mobile browser.
Advertisement

Dandeli:ದಾಂಡೇಲಿ ಜಲಸಾಹಸ ಕ್ರೀಡೆಗಳಿಗೆ ಅನುಮತಿ ನೀಡಿದ ಜಿಲ್ಲಾಡಳಿತ-ಜಿಗುರಿದ ಪ್ರವಾಸೋಧ್ಯಮ

Dandeli tourism in Uttara Kannada gets a boost as district administration permits water adventure sports again. Visitors can enjoy white water rafting, kayaking, boating, jungle safari, trekking, cave visits, crocodile park, bird watching, and more amidst Kali River’s beauty.
03:27 PM Sep 08, 2025 IST | ಶುಭಸಾಗರ್
Dandeli tourism in Uttara Kannada gets a boost as district administration permits water adventure sports again. Visitors can enjoy white water rafting, kayaking, boating, jungle safari, trekking, cave visits, crocodile park, bird watching, and more amidst Kali River’s beauty.
dandeli ದಾಂಡೇಲಿ ಜಲಸಾಹಸ ಕ್ರೀಡೆಗಳಿಗೆ ಅನುಮತಿ ನೀಡಿದ ಜಿಲ್ಲಾಡಳಿತ ಜಿಗುರಿದ ಪ್ರವಾಸೋಧ್ಯಮ

Dandeli:ದಾಂಡೇಲಿ ಜಲಸಾಹಸ ಕ್ರೀಡೆಗಳಿಗೆ ಅನುಮತಿ ನೀಡಿದ ಜಿಲ್ಲಾಡಳಿತ-ಜಿಗುರಿದ ಪ್ರವಾಸೋಧ್ಯಮ

Advertisement

https://chat.whatsapp.com/HbI3YG8zHwtAYxenaKEbAg?mode=ems_copy_t

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಪರಿಸರ ಪ್ರವಾಸೋಧ್ಯಮದಲ್ಲಿ ( tourism) ಒಂದಾದ ದಾಂಡೇಲಿ ಪ್ರವಾಸೋಧ್ಯಮ ಮತ್ತೆ ಚಿಗುರೊಡೆದಿದೆ.

ಉತ್ತರ ಕನ್ನಡ ಜಿಲ್ಲಾಡಳಿತ ಮಳೆಗಾಲದಲ್ಲಿ(rain) ನಿಷೇಧ ಹೇರಿದ್ದ ಜಲಸಾಹಸ ಕ್ರೀಡೆಗಳಿಗೆ ಮತ್ತೆ ಅವಕಾಶ ಮಾಡಿಕೊಟ್ಟಿದ್ದು ಪ್ರಕೃತಿ ಪ್ರಿಯರಿಗೆ,ಜಲಸಾಹಸಿಗಳಿಗೆ ದಾಂಡೇಲಿ ತೆರೆದುಕೊಂಡಿದೆ.

ಕಾರವಾರದ ಗಿಲಾನಿ ಸೂಪರ್ ಮಾರ್ಕೆಟ್ ನಲ್ಲಿ ಭರ್ಜರಿ ಆಫರ್ ,ಗ್ರೂಸರಿ ಕರೀದಿ ದಾರರಿಗೆ ಸಿಗಲಿದೆ ಬಂಪರ್ ಬಹುಮಾನ

ದಾಂಡೇಲಿಯಲ್ಲಿ ಯಾವೆಲ್ಲಾ ಚಟುವಟಿಕೆಗಳಿವೆ.

ವೈಟ್ ವಾಟರ್ ರಾಫ್ಟಿಂಗ್ 

ದಾಂಡೇಲಿ ರಾಫ್ಟಿಂಗ್ (ಸಂಗ್ರಹ ಚಿತ್ರ)

ಕಾಳಿ ನದಿಯ ಸುಂದರ ತಾಣವಾದ ಜೋಯಿಡಾದ ಗಣೇಶ ಗುಡಿ ಬಳಿಯ ನದಿ ಭಾಗದಲ್ಲಿ  ಜಿಲ್ಲಾ ಪ್ರವಾಸೋಧ್ಯಮ ಇಲಾಖೆ ವೈಟ್ ವಾಟರ್ ರಾಪ್ಟಿಂಗ್ ಗೆ ಅವಕಾಶ ಮಾಡಿಕೊಟ್ಟಿದೆ. ಕಾಳಿ ನದಿಯ ನೀರು ಶಾಂತವಾಗಿ ಹರಿದು ಗಲ್ಲುಬಂಡೆಯಮೇಲೆ ದುಮ್ಮಿಕ್ಕಿ ಜಾರುಬಂಡಿಯಂತೆ ನದಿಯ ನೀರು ಹರಿಯುತ್ತದೆ. ಈ ಭಾಗದಲ್ಲಿ ರಾಪ್ಟಿಂಗ್ ಗೆ ಅವಕಾಶ ಮಾಡಿಕೊಟ್ಟಿದ್ದು ,ಇಲ್ಲಿ ರಾಫ್ಟರ್ ನಲ್ಲಿ ಹುಟ್ಟುಗಳನ್ನು ಹಾಕುತ್ತಾ ಹೋಗುವುದೇ ಮನಮೋಹಕ. ಇಲ್ಲಿ ನದಿಯ ನೀರು ಹಾಲಿನ ನೊರೆಯಂತೆ ತನ್ನ ಬಣ್ಣ ಬದಲಿಸಿ ಹರಿಯುತ್ತದೆ.

ಕಯಾಕಿಂಗ್ ,ಬೋಟಿಂಗ್ ಗೆ ಅವಕಾಶ.

ದಾಂಡೇಲಿ Zipline (ಸಂಗ್ರಹ ಚಿತ್ರ)
ದಾಂಡೇಲಿ ಮೊಸಳೆ ಪಾರ್ಕ (ಸಂಗ್ರಹ ಚಿತ್ರ)

ಸದ್ಯ ಮಳೆಯಿಂದ ತನ್ನ ಸೌಂದರ್ಯ ರುದ್ದಿಸಿಕೊಂಡಿರುವ ಕಾಳಿ ನದಿ ಕಯಾಕಿಂಗ್ ಹಾಗೂ ಬೋಟಿಂಗ್ ಮಾಡಲು ಹೇಳಿಮಾಡಿಸಿದ ಸಮಯ. ಇಲ್ಲಿನ ಪರಿಸರ ವೀಕ್ಷಣೆಗೆ ಕಯಾಕಿಂಗ್ ಹಾಗೂ ಬೋಟಿಂಗ್ ಮಾಡುತ್ತಾ ನಿಸರ್ಗದ ಪರಿಸರವನ್ನು ವೀಕ್ಷಿಸಲು ಪ್ರವಾಸೋಧ್ಯಮ ಇಲಾಖೆ ಅವಕಾಶ ಮಾಡಿಕೊಟ್ಟಿದೆ.

Dandeliಅಂಬೇವಾಡಿ ಕೈಗಾರಿಕಾ ಪ್ರದೇಶದಲ್ಲಿ ಹೆಜ್ಜೇನು ದಾಳಿ, ಏಳಕ್ಕೂ ಹೆಚ್ಚು ಕಾರ್ಮಿಕರಿಗೆ ಗಾಯ

ಇದಲ್ಲದೇ ದಾಂಡೇಲಿ ,ಜೋಯಿಡಾ ಭಾಗದಲ್ಲಿ ಜಿಫಿಂಗ್,ಟ್ರಕ್ಕಿಂಗ್ , ಜಂಗಲ್ ಸಫರಿ,ಕವಳೆ ಗುಹೆಗಳ ವೀಕ್ಷಣೆ, ಹಾರ್ನಬಿಲ್  ಪಕ್ಷಿಗಳ ವೀಕ್ಷಣೆ ,ಸಿಂಥೇರಿ ರಾಕ್ ,ಮೊಸಳೆ ಪಾರ್ಕ ಗಳನ್ನು ವೀಕ್ಷಿಸಬಹುದು. ವೀಕೆಂಡ್ ನಲ್ಲಿ ಹೆಚ್ಚಿನ ಪ್ರವಾಸಿಗರು ಬರುವುದರಿಂದ ವೀಕ್ ಡೇಸ್ ನಲ್ಲಿ ಇಲ್ಲಿಗೆ ಬರುವುದು ಉತ್ತಮ.

Dandeli : ಕುಟುಂಬಸ್ತರಿಂದಲೇ ಸರಪಳಿಯಲ್ಲಿ ಬಂದಿಯಾದ ಮಾನಸಿಕ ಅಸ್ವಸ್ತನ ರಕ್ಷಣೆ 

ವಸತಿಗಾಗಿ ಹಲವು ಹೋಮ್ ಸ್ಟೇ ,ರೆಸಾರ್ಟಗಳು ಇದ್ದು ಒಂದೊಂದು ಭಾಗದಲ್ಲಿ ಒಂದೊಂದು ದರವಿದೆ.ಜೋಯಿಡಾ ಭಾಗದಲ್ಲಿ ಅಲ್ಪ ದರಗಳು ದಾಂಡೇಲಿಗೆ ಹೋಲಿಸಿದಲ್ಲಿ ಕಡಿಮೆಯಿದ್ದು ಈ ಭಾಗವನ್ನು ತಂಗಲು ಆಯ್ಕೆ ಮಾಡಿಕೊಳ್ಳಬಹುದು.

ಸಧ್ಯ ಜಿಲ್ಲಾಡಳಿತ ಜಲಸಾಹಸ ಕ್ರೀಡೆಗೆ ಅನುಮತಿ ನೀಡಿದ್ದರಿಂದ ಪ್ರವಾಸೋಧ್ಯಮ ಜಿಗುರೊಡೆದಿದೆ.

ಹೆಚ್ವಿನ ಮಾಹಿತಿಗೆ ಈ ಲಿಂಕ್ ಗೆ ಕ್ಲಿಕ್ ಮಾಡಿ:- http://Tourist Places | Uttara Kannada District, Government of Karnataka | India https://share.google/GSUPlZnRxsvsozffP

Dandeli:ಪ್ರಧಾನಿ ಮೋದಿ ಅವಹೇಳನಕಾರಿ ಪೋಸ್ಟ್ -ದಾಂಡೇಲಿ ವ್ಯಕ್ತಿ ಬಂಧನ

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ