For the best experience, open
https://m.kannadavani.news
on your mobile browser.
Advertisement

Delhi ಬಾಂಬ್ ಸ್ಪೋಟ| ಉಗ್ರರ ಹಿನ್ನಲೆ ಹೇಗಿತ್ತು ಗೊತ್ತಾ?

Delhi Bomb Blast: New revelations in the Red Fort car explosion case! Investigations expose shocking details about doctors linked to Jaish-e-Mohammed — Dr Shaheen Shahid, Dr Umar Un Nabi, and Dr Adeel Ahmed Rather — accused of planning terror activities across Delhi, Haryana, and Kashmir.
11:12 AM Nov 12, 2025 IST | ಶುಭಸಾಗರ್
Delhi Bomb Blast: New revelations in the Red Fort car explosion case! Investigations expose shocking details about doctors linked to Jaish-e-Mohammed — Dr Shaheen Shahid, Dr Umar Un Nabi, and Dr Adeel Ahmed Rather — accused of planning terror activities across Delhi, Haryana, and Kashmir.
delhi ಬಾಂಬ್ ಸ್ಪೋಟ  ಉಗ್ರರ ಹಿನ್ನಲೆ ಹೇಗಿತ್ತು ಗೊತ್ತಾ
Delhi ಬಾಂಬ್ ಸ್ಪೋಟ| ಉಗ್ರರ ಹಿನ್ನಲೆ ಹೇಗಿತ್ತು ಗೊತ್ತಾ?

Delhi ಬಾಂಬ್ ಸ್ಪೋಟ| ಉಗ್ರರ ಹಿನ್ನಲೆ ಹೇಗಿತ್ತು ಗೊತ್ತಾ?

Advertisement

ನವ ದೆಹಲಿ:- ಕೆಂಪುಕೋಟೆ ಬಳಿ ಕಾರ್ ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳು ಶಂಕಿತರ ಹಿನ್ನೆಲೆ ಜಾಲಾಡುವ ವೇಳೆ ಹಲವು ಸ್ಫೋಟಕ ವಿಚಾರಗಳು ಬೆಳಕಿಗೆ ಬಂದಿದೆ . ಯಾವ ಉಗ್ರರ ಹಿನ್ನಲೆ ಹೇಗಿತ್ತು? ಅದರ ವರದಿ ಇಲ್ಲಿದೆ.

ಕಾಲೇಜಿನಲ್ಲಿ ಟಾಪರ್‌, ಪತಿಗೆ ತಲಾಖ್‌, ಪ್ರೊಫೆಸರ್‌ ಹುದ್ದೆಗೆ ಚಕ್ಕರ್‌ – ಟೆರರ್‌ ಡಾಕ್ಟರ್‌ ಶಾಹೀನ್‌ ಬದುಕೇ ನಿಗೂಢ ರಹಸ್ಯ

dr Shaheen Shahid.
dr Shaheen Shahid.

ಭಾರತದಲ್ಲಿ ಪಾಕಿಸ್ತಾನದ ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆಯ ಮಹಿಳಾ ವಿಭಾಗ ಸ್ಥಾಪನೆಯ ಹೊಣೆ ಹೊತ್ತಿದ್ದ ವೈದ್ಯೆ ಶಾಹೀನ್ ಶಾಹಿದ್(46) ಬದುಕೇ ನಿಗೂಢ ರಹಸ್ಯವಾಗಿ ಉಳಿದಿದೆ.

Delhi Explosion| ಹತ್ತಕ್ಕೇರಿದ ಸಾವಿನ ಸಂಖ್ಯೆ|30 ಕ್ಕೂ ಹೆಚ್ಚು ಜನರಿಗೆ ಗಾಯ

ಹರಿಯಾಣದ ಫರಿದಾಬಾದ್‌ನಲ್ಲಿ(Faridabad) ಬೃಹತ್ ಸ್ಫೋಟಕಗಳ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಲಕ್ನೋದ ಕೈಸರ್‌ಬಾಗ್‌ ನಿವಾಸಿಯಾದ ಶಾಹೀನ್‌ಳನ್ನು (Dr Shaheen Shahid) ಬಂಧಿಸಲಾಗಿದೆ. ರಷ್ಯಾದ ಅಸಾಲ್ಟ್ ರೈಫಲ್ ಮತ್ತು ಲೈವ್ ಕಾರ್ಟ್ರಿಜ್‌ಗಳನ್ನು ವಶಪಡಿಸಿಕೊಂಡ ನಂತರ ಪೊಲೀಸರು ಆಕೆಯನ್ನು ಬಂಧಿಸಿದ್ದರು.

ಲಕ್ನೋ ಸರ್ಕಾರಿ ಬಾಲಕಿಯರ ಕಾಲೇಜಿನಲ್ಲಿ ಓದಿದ್ದ ಶಾಹೀನ್ ಶಾಹಿದ್ 10 ಮತ್ತು 12 ನೇ ತರಗತಿ ಪರೀಕ್ಷೆಯಲ್ಲಿ ಟಾಪರ್‌ ಆಗಿದ್ದಳು. ಉತ್ತರ ಪ್ರದೇಶದ (Uttar Pradesh) ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದ ಶಾಹೀನ್‌ ಪ್ರಯಾಗ್‌ರಾಜ್‌ನಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಮತ್ತು ಎಂಡಿ ಪದವಿ ಪಡೆದಿದ್ದಾಳೆ.

ಓದಿದ ನಂತರ 2009 ರಲ್ಲಿ ಕಾನ್ಪುರದ ಗಣೇಶ ಶಂಕರ ವಿದ್ಯಾರ್ಥಿ ಮೆಡಿಕಲ್ ಕಾಲೇಜಿನಲ್ಲಿ (GSVM) ಔಷಧಶಾಸ್ತ್ರ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಕರ್ತವ್ಯಕ್ಕೆ ಹಾಜರಾಗುತ್ತಾಳೆ.  ಆರು ತಿಂಗಳ‌ ನಂತರ ಕನೌಜ್‌ ಮೆಡಿಕಲ್‌ ಕಾಲೇಜಿಗೆ ಆಕೆಯನ್ನು ವರ್ಗಾವಣೆ ಮಾಡಲಾಗುತ್ತದೆ ಮತ್ತು 2010 ರಲ್ಲಿ ಮರಳಿ ಕಾನ್ಪುರಕ್ಕೆ ಬರುತ್ತಾಳೆ. ಜಿಎಸ್‌ವಿಎಂ ಕಾಲೇಜಿನಲ್ಲಿ 2013 ರವರೆಗೆ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಶಾಹೀನ್‌ ಉದ್ಯೋಗ ಮಾಡಿದ್ದಾಳೆ. ಈ ವೇಳೆ ನೇತ್ರಶಾಸ್ತ್ರಜ್ಞ ಜಾಫರ್ ಸಯೀದ್ ಅವರನ್ನು ಮದುವೆಯಾಗುತ್ತಾಳೆ.

ಮದುವೆಯಾದ ನಂತರ ದಂಪತಿ ಮಧ್ಯೆ ಆಗಾಗ ಜಗಳ ನಡೆಯುತ್ತಿರುತ್ತದೆ. ಹೀಗಾಗಿ ಪತಿಗೆ 2015 ರಲ್ಲಿ ತಲಾಖ್‌ ನೀಡಿ ಲಕ್ನೋದಲ್ಲಿ ಶಾಹೀನ್‌ ವಾಸಿಸುತ್ತಿದ್ದಳು. ಪತಿಗೆ ವಿಚ್ಚೇದನ ನೀಡಿದ ಬಳಿಕ ಉಗ್ರ ಮುಜಮ್ಮಿಲ್ ಜೊತೆ ನಂಟು ಬೆಳೆಸಿದ್ದಾಳೆ.

Delhi blast news
Delhi Explosion| ಸ್ಪೋಟಗೊಂಡ ಸ್ಥಳ.

ಕಾಲೇಜು ದಾಖಲೆಗಳ ಪ್ರಕಾರ ಶಾಹೀನ್‌ 2013 ರಲ್ಲಿ ಯಾವುದೇ ಅಧಿಕೃತ ರಜೆ ಅಥವಾ ಸೂಚನೆ ನೀಡದೇ ಕರ್ತವ್ಯಕ್ಕೆ ಗೈರು ಹಾಜರಿ ಹಾಕಿದ್ದಳು. ಕಾಲೇಜು ಆಡಳಿತ ಹಲವಾರು ಸೂಚನೆಗಳನ್ನು ನೀಡಿದ್ದರೂ ಆಕೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಸಹೋದ್ಯೋಗಿಗಳು ಅವಳನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರೂ ಅವರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಅಂತಿಮವಾಗಿ 2021 ರಲ್ಲಿ ಸರ್ಕಾರ ಆಕೆಯನ್ನು ಸೇವೆಯಿಂದ ಮುಕ್ತಗೊಳಿಸಿತ್ತು.

ಜಿಎಸ್‌ವಿಎಂ ತೊರೆದ ಬಳಿಕ ಶಾಹೀನ್ ಹರಿಯಾಣದ ಅಲ್-ಫಲಾಹ್ ವಿಶ್ವವಿದ್ಯಾಲಯದೊಂದಿಗೆ ಸಂಬಂಧ ಬೆಳೆಸಿ ಅಲ್ಲಿ ಮುಜಮ್ಮಿಲ್‌ನನ್ನು ಭೇಟಿಯಾಗಿದ್ದಾಳೆ. ಶಾಹೀನ್ ಜೈಶ್ ಮಹಿಳಾ ವಿಂಗ್‌ಗೆ ಭಾರತದ ನಾಯಕಿಯಾಗಿದ್ದು, ಜೆಇಎಂ ಸಂಸ್ಥಾಪಕ ಮಸೂದ್ ಅಜರ್‌ನ ಸಹೋದರಿ ಸಾದಿಯಾ ಅಜರ್ ನೇತೃತ್ವದ ಜೆಇಎಂನ ಮಹಿಳಾ ವಿಭಾಗವಾದ ಜಮಾತ್ ಉಲ್-ಮೊಮಿನಾತ್‌ನ ಕಮಾಂಡ್ ಜವಾಬ್ದಾರಿಯನ್ನು ಸಹ ವಹಿಸಿಕೊಂಡಿದ್ದಳು.

ರೋಗಿಯ ಪ್ರಾಣವನ್ನೇ ತೆಗೆದ, ಕೆಲಸಕ್ಕೆ ಚಕ್ಕರ್, ಕೊನೆಗೆ ವಜಾ – ಇದು ಕಾರ್ ಬಾಂಬರ್ ಉಮರ್ ವೈದ್ಯನ ಅಸಲಿ ಮುಖ.

Dr Umar Un Nabi
Umar Un Nabi

ಕಾಶ್ಮೀರದ ಅನಂತ್‌ನಾಗ್ ಆಸ್ಪತ್ರೆಯಲ್ಲಿ ಉಗ್ರ ಡಾ.ಉಮರ್ (Dr Umar Un Nabi) ನಿರ್ಲಕ್ಷ್ಯದಿಂದ ಒಂದು ಜೀವ ಬಲಿಯಾಗಿದ್ದಕ್ಕೆ ಕೆಲಸ ಕಳೆದುಕೊಂಡು ಅಲ್-ಪಲಾಹ್ ವಿಶ್ವವಿದ್ಯಾಲಯಕ್ಕೆ (Al-Falah) ಸೇರಿಕೊಂಡು, ಅಲ್ಲಿಂದ ಭಯೋತ್ಮಾದಕ ದಾಳಿಗೆ ಸಂಚು ಹೂಡಿದ್ದ ಎಂದು ತಿಳಿದುಬಂದಿದೆ.

ಐತಿಹಾಸಿಕ ಕೆಂಪು ಕೋಟೆಯ (Redfort Blast) ಬಳಿ ಸಂಭವಿಸಿದ್ದ ಸ್ಫೋಟದಿಂದ 12 ಜನರು ಸಾವನ್ನಪ್ಪಿದ್ದು, 20ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.

ಸ್ಫೋಟಗೊಂಡ ಕಾರು ಘಟನೆಗೂ ಮುನ್ನ ದೆಹಲಿಯ ಹಲವೆಡೆ ಸುತ್ತಾಡಿರುವುದು ಕಂಡುಬಂದಿದ್ದು, ಚಾಲಕರು ಯಾರು ಎಂದು ಪತ್ತೆಹಚ್ಚಿದ್ದಾಗ ಡಾ.ಉಮರ್ ಉನ್ ನಬಿ ಎಂದು ತಿಳಿದುಬಂದಿದೆ. ಸ್ಫೋಟದಲ್ಲಿ ಉಮರ್ ದೇಹ ಸಂಪೂರ್ಣವಾಗಿ ಛಿದ್ರಗೊಂಡಿದ್ದು, ತನಿಖಾ ಸಂಸ್ಥೆ ಈಗಾಗಲೇ ಉಮರ್ ಕುಟುಂಬಸ್ಥರನ್ನು ಡಿಎನ್‌ಎ ಪರೀಕ್ಷೆಗೆ ಒಳಪಡಿಸಿದೆ.

Karnataka |ಶಾರಾವತಿ ಪಂಪ್ ಸ್ಟೋರೇಜ್ ಯೋಜನೆಗೆ ಪರಿಸರ ಸಚಿವಾಲಯದಿಂದ ಬ್ರೇಕ್ !

ದೆಹಲಿ ಸ್ಫೋಟದ ಪ್ರಮುಖ ಶಂಕಿತ ಆರೋಪಿ ಉಮರ್ ನಬಿ ಶ್ರೀನಗರದಿಂದ MBBS ಮತ್ತು MD ಪದವಿಗಳನ್ನು ಪಡೆದು 2023ರಲ್ಲಿ ಕಾಶ್ಮೀರದ ಅನಂತ್‌ನಾಗ್‌ನಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಎಸ್‌ಆರ್ ಆಗಿ ಕೆಲಸ ಮಾಡುತ್ತಿದ್ದ.

ಆರಂಭದಿಂದಲೂ ಉಮರ್ ಕೆಲಸ ವಿಷಯದಲ್ಲಿ ಕೆಟ್ಟ ಉದ್ಯೋಗಿಯಾಗಿಯೇ ಕಾಣಿಸಿಕೊಂಡಿದ್ದ. ದಿನೇದಿನೇ ಒಂದಿಲ್ಲೊಂದು ದೂರುಗಳು ಬರುತ್ತಲೇ ಇದ್ದವು. ಸಹ ವೈದ್ಯರು, ಪ್ಯಾರಾಮೆಡಿಕಲ್ ಸಿಬ್ಬಂದಿ ಸೇರಿದಂತೆ ರೋಗಿಗಳು ಕೂಡ ಉಮರ್‌ನ ಅಸಭ್ಯ ಹಾಗೂ ಅಜಾಗರೂಕತೆ ಬಗ್ಗೆ ಆರೋಪಿಸುತ್ತಿದ್ದರು. ಅಲ್ಲದೇ ಉಮರ್ ಕೂಡ ಹೆಚ್ಚಿನ ಸಮಯ ಆಸ್ಪತ್ರೆಗೆ ಗೈರಾಗಿಯೇ ಇರುತ್ತಿದ್ದ.

ಸಮಯದಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ರೋಗಿಯೋರ್ವರನ್ನು ಉಮರ್ ನೋಡಿಕೊಳ್ಳುತ್ತಿದ್ದ. ಆ ದಿನ ಅವರಿಗೆ ಚಿಕಿತ್ಸೆ ನೀಡಲು ಉಮರ್ ಆಸ್ಪತ್ರೆಗೆ ಬರಲೇ ಇಲ್ಲ. ಈ ವೇಳೆ ಅನಿವಾರ್ಯ ಕಾರಣದಿಂದ ಅಲ್ಲಿನ ಕಿರಿಯ ವೈದ್ಯರು ಅವರನ್ನು ಉಳಿಸುವ ಪ್ರಯತ್ನ ಮಾಡಿದರು. ಆದರೆ ಅದು ವಿಫಲವಾಗಿ ರೋಗಿ ಸಾವನ್ನಪ್ಪಿದರು. ಮೃತ ರೋಗಿಯ ಕುಟುಂಬಸ್ಥರು ಮೇಲಾಧಿಕರಿಗಳಿಗೆ ಉಮರ್ ವಿರುದ್ಧ ದೂರು ನೀಡಿದರು. ಈ ವಿಷಯದ ಬಗ್ಗೆ ತನಿಖೆ ನಡೆಸಲು ನಾಲ್ವರು ಹಿರಿಯ ವೈದ್ಯರ ಸಮಿತಿಯನ್ನು ರಚಿಸಲಾಯಿತು. ಆದರೆ ಉಮರ್ ನಾನು ಆಸ್ಪತ್ರೆಗೆ ಬಂದಿದ್ದೆ ಎಂದರು.

ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಉಮರ್ ಸುಳ್ಳು ಹೇಳುತ್ತಿರುವುದು ಗೊತ್ತಾಗಿತ್ತು. ತನಿಖೆ ಸಮಯದಲ್ಲಿ ಹಲವು ಬಾರಿ ಸಮನ್ಸ್ ಜಾರಿಯಾಗಿದ್ದರೂ ಕೂಡ ಉಮರ್ ಸಮಿತಿ ಮುಂದೆ ಹಾಜರಾಗಿರಲಿಲ್ಲ. ಇದರಿಂದ ಸಮಿತಿ ಅಂತಿಮವಾಗಿ ಉಮರ್‌ನ್ನು ಕೆಲಸದಿಂದ ವಜಾಗೊಳಿಸಿತ್ತು.

ವಜಾಗೊಂಡ ನಂತರ ಡಾ.ಉಮರ್ 2023ರಲ್ಲಿ ಫರಿದಾಬಾದ್‌ನ ಅಲ್-ಫಲಾಹ್ ಸ್ಕೂಲ್ ಆಫ್ ಮೆಡಿಕಲ್ ಸೈನ್ಸ್ಗೆ ಸೇರಿಕೊಂಡ. ಅಲ್ಲಿ ವೈದ್ಯರು, ನರ್ಸ್ಗಳೊಟ್ಟಿಗೆ ಸೇರಿಕೊಂಡು ಭಯೋತ್ಪಾದಕ ದಾಳಿಗೆ ಸಂಚು ಹೂಡಿದ್ದ ಎಂದು ಮೂಲಗಳು ತಿಳಿಸಿವೆ.

ದೆಹಲಿ ಬಾಂಬ್ ಸ್ಫೋಟವಾದ ಬಳಿಕ ಉಮರ್ ಅತ್ತಿಗೆ ಮಾಧ್ಯಮದೊಂದಿಗೆ ಮಾತನಾಡಿ, ಉಮರ್ ಯಾವಾಗಲೂ ಅಂತರ್ಮುಖಿಯಾಗಿದ್ದ. ಹೆಚ್ಚಾಗಿ ತನ್ನ ಕೋಣೆಯಲ್ಲಿ ಒಬ್ಬನೇ ಇರುತ್ತಿದ್ದ. ಒಬ್ಬನೇ ಅಧ್ಯಯನದಲ್ಲಿಯೇ ತೊಡಗಿಕೊಂಡಿರುತ್ತಿದ್ದ ಎಂದು ಹೇಳಿದ್ದರು. ಆದರೆ ಇದೀಗ ಇದಕ್ಕೆ ವಿರುದ್ಧ ಅನಂತ್‌ನಾಗ್ ಆಸ್ಪತ್ರೆಯ ಪ್ರೊಫೆಸರ್ ಡಾ. ಗುಲಾಮ್ ಜೀಲಾನಿ ರೊಮ್ಶೂ ಪ್ರತಿಕ್ರಿಯಿಸಿದ್ದಾರೆ.

ವೈದ್ಯ ಆದಿಲ್‌ಗೆ ಸಿಗುತ್ತಿತ್ತು ತಿಂಗಳಿಗೆ 5 ಲಕ್ಷ ರೂ. ಸಂಬಳ!

Adeel Ahmed Rather
Adeel Ahmed Rather

ಶ್ರೀನಗರದಲ್ಲಿ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯನ್ನು ಬೆಂಬಲಿಸುವ ಪೋಸ್ಟರ್‌ಗಳನ್ನು ಹಾಕಿ ಬಂಧನಕ್ಕೆ ಒಳಗಾಗಿ ಫರಿದಾಬಾದ್‌ ಟೆರರ್‌ ಗ್ಯಾಂಗ್‌ ಬಗ್ಗೆ ಬಾಯ್ಬಿಟ್ಟ  ಕಾಶ್ಮೀರಿ ವೈದ್ಯ ಆದಿಲ್ ಅಹ್ಮದ್ ರಾಥರ್‌ಗೆ (Dr Adeel Ahmed Rather) ತಿಂಗಳಿಗೆ 5 ಲಕ್ಷ ರೂ. ಸಂಬಳ ಸಿಗುತ್ತಿತ್ತು.

ದಕ್ಷಿಣ ಕಾಶ್ಮೀರದ ಖಾಜಿಗುಂಡ್ ನಿವಾಸಿಯಾಗಿರುವ ಆದಿಲ್ ಅಹ್ಮದ್ ರಾಥರ್ ಅಕ್ಟೋಬರ್ 2024 ರವರೆಗೆ ಅನಂತನಾಗ್‌ನಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ (ಜಿಎಂಸಿ) ಹಿರಿಯ ರೆಸಿಡೆಂಟ್‌ ಆಗಿ ಕೆಲಸ ಮಾಡಿದ್ದ. ಬಳಿಕ ಈ ವರ್ಷದ ಮಾರ್ಚ್‌ನಲ್ಲಿ ಉತ್ತರ ಪ್ರದೇಶದ (Uttar Pradesh) ಸಹರಾನ್‌ಪುರಕ್ಕೆ ತೆರಳಿದ್ದ.

ಮೊದಲು ವಿ-ಬ್ರಾಸ್ ಆಸ್ಪತ್ರೆಗೆ ಸೇರಿದ ನಂತರ ಪ್ರಸಿದ್ಧ ಮೆಡಿಕೇರ್‌ ಆಸ್ಪತ್ರೆಯಲ್ಲಿ (Medicare Hospital) ಕೆಲಸದ ಗುತ್ತಿಗೆಗೆ ಆದಿಲ್ ಸಹಿ ಹಾಕುತ್ತಾನೆ. ಪೊಲೀಸ್‌ ದಾಖಲೆಗಳ ಪ್ರಕಾರ ಈತನಿಗೆ ತಿಂಗಳಿಗೆ 5 ಲಕ್ಷ ರೂ. ಸಂಬಳ ಸಿಗುತ್ತಿತ್ತು. ಅಷ್ಟೇ ಅಲ್ಲದೇ ವಸತಿಗಾಗಿ 10 ಸಾವಿರ ರೂ. ಭತ್ಯೆ ಪ್ರತ್ಯೇಕವಾಗಿ ಸಿಗುತ್ತಿತ್ತು.

ಬಾಪು ಬಿಹಾರ ಕಾಲೋನಿಯಲ್ಲಿ ಎರಡು ಬೆಡ್‌ರೂಮ್‌ ಮನೆಯಲ್ಲಿ ವಾಸವಿದ್ದ ಆದಿಲ್ ತಡರಾತ್ರಿ ಭೇಟಿ ನೀಡುವವರನ್ನು ಹೊರತುಪಡಿಸಿ ನೆರೆಮನೆಯವರ ಜೊತೆ ಅಷ್ಟಾಗಿ ಮಾತನಾಡುತ್ತಿರಲಿಲ್ಲ. ಈ ವರ್ಷದ ಸೆಪ್ಟೆಂಬರ್ 26 ರಂದು ದಿಢೀರ್‌ ರಜೆ ತೆಗೆದುಕೊಂಡು ಅಕ್ಟೋಬರ್ 4 ರಂದು ಜಮ್ಮುವಿನಲ್ಲಿ ಕರ್ತವ್ಯದಲ್ಲಿದ್ದ ವೈದ್ಯೆಯನ್ನು ಆದಿಲ್ ಮದುವೆಯಾಗಿ ಸಹರಾನ್‌ಪುರಕ್ಕೆ ಮರಳಿದ್ದ.

ಅಕ್ಟೋಬರ್ 27 ರ ರಾತ್ರಿ ಶ್ರೀನಗರದ ರೈನಾವರಿ ಮತ್ತು ಜಡಿಬಲ್ ಪ್ರದೇಶಗಳಲ್ಲಿನ ಗೋಡೆಗಳ ಮೇಲೆ ಜೈಶ್-ಎ-ಮೊಹಮ್ಮದ್ ಸಂಘಟನೆಯನ್ನು ಬೆಂಬಲಿಸುವ ಪೋಸ್ಟರ್‌ಗಳು ಕಾಣಿಸಿಕೊಂಡಿತ್ತು. ಜಿಹಾದ್‌ಗೆ ಕರೆ ನೀಡುವ ಪೋಸ್ಟ್‌ಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿದ್ದ ಜಮ್ಮು ಕಾಶ್ಮೀರ ಪೊಲೀಸರು ಸಿಸಿಟಿವಿ ಮತ್ತು ಮೊಬೈಲ್‌ ಡೇಟಾ ಆಧಾರದಲ್ಲಿ ಮೆಡಿಕೇರ್‌ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿರುವಾಗಲೇ ಆದೀಲ್‌ನನ್ನು ನ.6 ರಂದು ಬಂಧಿಸುತ್ತಾರೆ.

ಶಸ್ತ್ರಾಸ್ತ್ರ ಕಾಯ್ದೆ ಮತ್ತು ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯಡಿಯಲ್ಲಿ ಆರೋಪ ಹೊರಿಸಿ ವಿಚಾರಣೆ ನಡೆಸಿದಾಗ ಫರಿದಾಬಾದ್‌ ಟೆರರ್‌ ಗ್ಯಾಂಗ್‌ ಬಗ್ಗೆ ಬಾಯಿ ಬಿಟ್ಟಿದ್ದಾನೆ. ದೆಹಲಿ-ಎನ್‌ಸಿಆರ್, ಹರಿಯಾಣ ಮತ್ತು ಜಮ್ಮು ಕಾಶ್ಮೀರದಲ್ಲಿರುವ ಸದಸ್ಯರ ಬಗ್ಗೆ ಹೇಳಿದ್ದಾನೆ. ನಂತರ ಪೊಲೀಸರು ಅನಂತ್‌ನಾಗ್‌ನ ಜಿಎಂಸಿ ಮೇಲೆ ದಾಳಿ ನಡೆಸಿ ಆದಿಲ್‌ನ ಲಾಕರ್‌ನಿಂದ ಎಕೆ -47 ರೈಫಲ್ ಮತ್ತು ಮದ್ದುಗುಂಡುಗಳನ್ನು ವಶಕ್ಕೆ ಪಡೆಯುತ್ತಾರೆ.

2019 ರ ಪುಲ್ವಾಮಾ ದಾಳಿ ನಡೆಸಿದ ಜೈಷ್‌-ಎ-ಮೊಹಮ್ಮದ್‌ ಮತ್ತು ಷರಿಯಾ ನಿಯಮವನ್ನು ಪ್ರತಿಪಾದಿಸುವ ಸ್ಥಳೀಯ ಶಾಖೆಯಾದ ಅನ್ಸರ್ ಘಜ್ವತ್-ಉಲ್-ಹಿಂದ್ ಎರಡರೊಂದಿಗೆ ಈತ ಸಂಬಂಧ ಹೊಂದಿದ್ದಾನೆ. ಸಹರಾನ್‌ಪುರದಲ್ಲಿರುವ ತನ್ನ ಆಕ್ಸಿಸ್ ಬ್ಯಾಂಕ್ ಖಾತೆಯಿಂದ ಶ್ರೀನಗರದಲ್ಲಿರುವ ತನ್ನ ಸಹೋದರನ ಖಾತೆಗೆ 15-20 ಲಕ್ಷ ರೂ. ಹಣವನ್ನು ಕಳುಹಿಸಿದ್ದ. ಈ ಹಣವನ್ನು ಉಗ್ರ ಚಟುವಟಿಕೆ ನಡೆಸಲು ವರ್ಗಾವಣೆ ಮಾಡಲಾಗಿದ್ಯಾ ಎಂಬ ನಿಟ್ಟಿನಲ್ಲಿ ಈಗ ತನಿಖೆ ನಡೆಯುತ್ತಿದೆ.

ಮೆಡಿಕೇರ್ ಆಸ್ಪತ್ರೆ ವ್ಯವಸ್ಥಾಪಕ ಮನೋಜ್ ಮಿಶ್ರಾ ಆದಿಲ್ ಬಂಧನದ ವಿಚಾರ ತಿಳಿದು ಶಾಕ್‌ ಆಗಿದ್ದಾರೆ. ಮೃದುಭಾಷಿ, ಶಿಸ್ತುಬದ್ಧವಾಗಿ ಕೆಲಸ ಮಾಡುತ್ತಿದ್ದ. ಆತ ಉಗ್ರ ಚಟುವಟಿಕೆ ನಡೆಸುವ ಬಗ್ಗೆ ಎಲ್ಲಿಯೂ ನಮಗೆ ಅನುಮಾನ ಬರುತ್ತಿರಲಿಲ್ಲ. ಹಿರಿಯ ವೈದ್ಯರ ಶಿಫಾರಸಿನ ಆಧಾರದಲ್ಲಿ ಆದಿಲ್‌ನನ್ನು ನೇಮಿಸಿಕೊಂಡಿದ್ದೇವೆ. ಪೊಲೀಸರಿಂದ ಮಾಹಿತಿ ಪಡೆದ ನಂತರ ಆದೀಲ್‌ನನ್ನು ತಕ್ಷಣವೇ ವಜಾಗೊಳಿಸಲಾಗಿದೆ. ನಮ್ಮ ಆಸ್ಪತ್ರೆಗೆ ಆದಿಲ್‌ನನ್ನು ಸೇರಿಸಿದ್ದ ಹಿರಿಯ ವೈದ್ಯ ಡಾ. ಬಾಬರ್‌ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ