ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Honnavara| ಚಿರತೆ ಹಿಡಿಯಲು ತಂದ ಬೋನಿನ ಬಾಗಿಲು ತೆರದಿಡಲು ಮರೆತ ಅರಣ್ಯ ಇಲಾಖೆ!

ಹೊನ್ನಾವರ :- ಹೊನ್ನಾವರ ತಾಲೂಕಿನ ಕವಲಕ್ಕಿ ಭಾಗದಲ್ಲಿ ಕಳೆದ ಎರಡು ತಿಂಗಳಿಂದ ಚಿರತೆ ಕಾಟ ಹೆಚ್ಚಾಗಿದ್ದು ಹಸುಗಳು ,ನಾಯಿಗಳು ಚಿರತೆಪಾಲಾಗುತ್ತಿದೆ. ಇದರಿಂದ ಬೇಸತ್ತ ಜನರು ಚಿರತೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಆಗ್ರಹಿಸಿದ್ದರು.
11:12 AM Oct 10, 2024 IST | ಶುಭಸಾಗರ್

ವರದಿ:- ವಿನಯ್ ಶಟ್ಟಿ. ಕವಲಕ್ಕಿ.

Advertisement

ಹೊನ್ನಾವರ :- ಹೊನ್ನಾವರ ತಾಲೂಕಿನ ಕವಲಕ್ಕಿ ಭಾಗದಲ್ಲಿ ಕಳೆದ ಎರಡು ತಿಂಗಳಿಂದ ಚಿರತೆ ಕಾಟ ಹೆಚ್ಚಾಗಿದ್ದು ಹಸುಗಳು ,ನಾಯಿಗಳು ಚಿರತೆಪಾಲಾಗುತ್ತಿದೆ.
ಇದರಿಂದ ಬೇಸತ್ತ ಜನರು ಚಿರತೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಆಗ್ರಹಿಸಿದ್ದರು.

ಇದನ್ನೂ ಓದಿ:-Karwar|ಕದಂಬ ನೌಕಾನೆಯ ನಿಷೇಧಿತ ಪ್ರದೇಶದಲ್ಲಿ ರಾತ್ರಿ ಡ್ರೋನ್ ಹಾರಾಟ- ಗುಪ್ತಚರ ಇಲಾಖೆಯಿಂದ ತನಿಖೆ

ಜನರ ಒತ್ತಡ ಹೆಚ್ಚಾಗುತಿದ್ದಂತೆ ಕವಲಕ್ಕಿ ಅರಣ್ಯದಲ್ಲಿ ಬೋನು ತಂದಿಟ್ಟು ಚಿರತೆ ಹಿಡಿಯುವುದಾಗಿ ಅರಣ್ಯ ಇಲಾಖೆ ಹೇಳಿತ್ತು.

Advertisement

ಇದರಂತೆ 15 ದಿನದ ಹಿಂದೆ ಬೋನು ತಂದ ಅರಣ್ಯ ಇಲಾಖೆ ಅದನ್ನು ತೆರದಿಡದೇ ವಿಶಿಷ್ಟವಾಗಿ ಹಿಡಿಯಲು ಹೊಸ ಪ್ರಯತ್ನ ಮಾಡಿದಂತಿದೆ! ಜನರಿಗೆ ತೋರಿಕೆಗೆ ತಂದಿಟ್ಟ ಬೋನ್ ನನ್ನು ತೆರದಿಡುವುದಾಗಲಿ ,ಆಹಾರ ಹಾಕಿ ಹಿಡಿಯುವ ಪ್ರಯತ್ನ ಮಾಡದೇ ಮಳೆಯಲ್ಲೇ ಚಿರತೆ ಹಿಡಿಯುವ ಬೋನ್ ತುಕ್ಕು ಹಿಡಿಗುತಿದ್ದು ಹುಲಿ ಬಂತು ಹುಲಿ ಎಂಬಂತೆ ಚಿರತೆ ಬೆದರಿಸಲೋ ಅಥವಾ ಜನರನ್ನ ಮೂರ್ಖರನ್ನಾಗಿಸಲೋ ಹೊರಟಂತೆ ಕಾಣುತಿದ್ದು ಜನರ ಮೂಗಿಗೆ ತುಪ್ಪ ಸುರಿದಿದೆ.

ಇದನ್ನೂ ಓದಿ:-Daily astrology |ದಿನಭವಿಷ್ಯ 10 october 2024

ಇನ್ನಾದರೂ 15 ದಿನದಿಂದ ಅರಣ್ಯ ದಲ್ಲಿ ಬಿದ್ದಿರುವ ಬೋನಿನ ಬಾಯಿ ತೆರೆದಿಟ್ಟು ಚಿರತೆ ಹಿಡಿಯುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.

Advertisement
Tags :
chethaHonnavaraKannda newsPantherUttra kannda newsಹೊನ್ನಾವರ
Advertisement
Next Article
Advertisement