For the best experience, open
https://m.kannadavani.news
on your mobile browser.
Advertisement

Uttra kannda |ಫಟಾ ಫಟ್ ಸುದ್ದಿ ಎಲ್ಲಿ ಏನು ವಿವರ ನೋಡಿ

Yallapura News :- ಹೆದ್ದಾರಿಯಲ್ಲಿ ಸರಣಿ ಅಪಘಾತವಾಗಿ ಬಸ್ ಚಾಲಕನಿಗೆ ಗಾಯ ವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ
01:59 PM Sep 06, 2024 IST | ಶುಭಸಾಗರ್
uttra kannda  ಫಟಾ ಫಟ್ ಸುದ್ದಿ ಎಲ್ಲಿ ಏನು ವಿವರ ನೋಡಿ

Yallapura |ಹೆದ್ದಾರಿಯಲ್ಲಿ ಸರಣೆ ಅಪಘಾತ.

Yallapura bus accident

Advertisement

Yallapura News :- ಹೆದ್ದಾರಿಯಲ್ಲಿ ಸರಣಿ ಅಪಘಾತವಾಗಿ ಬಸ್ ಚಾಲಕನಿಗೆ ಗಾಯ ವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ನಡೆದಿದೆ.

ಸಿಮೆಂಟ್ ತುಂಬಿದ್ದ ಲಾರಿ ನಿಯಂತ್ರಣ ತಪ್ಪಿ ಕಂಟೈನರ್ ಹಾಗೂ ಮಂಗಳೂರಿಗೆ ತೆರಳುತಿದ್ದ ಬಸ್ ಗೆ ಹಿಂಭಾಗದಲ್ಲಿ ಡಿಕ್ಕಿಹೊಡೆದಿದ್ದು ಇದರ ಪರಿಣಾಮ ಬಸ್ ಚಾಲಕ ನಿತಂತ್ರಣ ತಪ್ಪಿ ಮುಂಭಾಗದಲ್ಲಿ ಬರುತಿದ್ದ ಲಾರಿಗೆ ಡಿಕ್ಕಿ ಹೊಡೆದು ಅಪಘಾತವಾಗಿದೆ.

ಮಂಗಳೂರಿಗೆ ತೆರಳುತಿದ್ದ ರೇಷ್ಮೆ ಹೆಸರಿನ ಬಸ್ ಇದಾಗಿದ್ದು ,ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಆಗಿಲ್ಲ .ಘಟನೆ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲು

ಇದನ್ನೂ ಓದಿ:-Daily Astrology| ದಿನ ಭವಿಷ್ಯ 06 September 2024

Bhatkal | ಜೂಜೂ ಅಡ್ಡದ ಮೇಲೆ ದಾಳಿ ಹುಂಜ ವಶಕ್ಕೆ!

Murudeshwara police

ಭಟ್ಕಳ:- ಮುರುಡೇಶ್ವರದ (Murdeshwara )ಬಸ್ತಿಯ ಬಾಕಡಕೇರಿಯ ರೈಲ್ವೆ ಟ್ರಾಕ್ ಬಳಿ ಗುಂಪುಸೇರಿ ಹಣಕ್ಕಾಗಿ ಕೋಳಿಪಡೆ ಜೂಜಾಟ ಆಡುತಿದ್ದ ಅಡ್ಡದ ಮೇಲೆ ಮುರುಡೇಶ್ವರ ಪಿ‌ಎಸ್.ಐ ಶಿವಕುಮಾರ್ ನೇತ್ರತ್ವದ ತಂಡ ದಾಳಿ ನಡೆಸಿ ನಗದು 1080 ,ಹುಂಜ ವನ್ನು ವಶಪಡಿಸಿಕೊಂಡಿದ್ದಲ್ಲದೇ ಹುಂಡೈ ಕಾರು,ಆಟೋ ,ಎರಡು ಬೈಕ್ ಗಳನ್ನು ವಶಪಡಿಸಿಕೊಂಡು ಏಳು ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

kannadavani news banner
ಫೋಟೋ ಮೇಲೆ ಕ್ಲಿಕ್ ಮಾಡಿ ನಮ್ಮ WhatsApp ಗ್ರೂಪ್ ಗೆ join ಆಗಿ.

ಇಂದಿನ ಡ್ಯಾಮ್ ಗಳ ನೀರಿನ ಮಟ್ಟ ಈ ಕೆಳಗಿನಂತಿದೆ. (Dam level)

Rain Dam information about uttra kannda

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ನಿಮಿತ್ತ ಜಿಲ್ಲೆಯಲ್ಲಿ 260 ಕಿ.ಮೀ. ಉದ್ದದ ಮಾನವ ಸರಪಳಿ ರಚನೆ

ಕಾರವಾರ : ಸೆಪ್ಟಂಬರ್ 15 ರ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಜಿಲ್ಲೆಯ ಹಳಿಯಾಳ ತಾಲೂಕಿನ ಮಾವಿನಕೊಪ್ಪದಿಂದ ಭಟ್ಕಳ ತಾಲೂಕಿನ ಶಿರೂರುವರೆಗೆ 260 ಕಿ.ಮೀ. ಉದ್ದದ ಮಾನವ ಸರಪಳಿ ರಚಿಸಲು ಅಗತ್ಯವಿರುವ ಎಲ್ಲಾ ಸಿದ್ದತೆಗಳನ್ನು ಕೈಗೊಳ್ಳುವಂತೆ ಜಿಲ್ಲಾ ಸಮಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಸೂಚನೆ ನೀಡಿದರು.

ಅವರು ಬುಧವಾರ , ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಡೆದ ವೀಡಿಯೋ ಕಾನ್ಫರೆನ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಪ್ರಯುಕ್ತ ಈ ಬಾರಿ ರಾಜ್ಯದಲ್ಲಿ ಬೀದರ್ ನಿಂದ ಚಾಮರಾಜನಗರದವರೆಗೆ ಮಾನವ ಸರಪಳಿ ನಿರ್ಮಿಸುವ ಮೂಲಕ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದ್ದು, ಧಾರವಾಡ ಜಿಲ್ಲೆಯಲ್ಲಿ ನಿರ್ಮಿಸಲಾಗುವ ಮಾನವ ಸರಪಳಿಯನ್ನು ಜಿಲ್ಲೆಯ ಗಡಿ ತಾಲೂಕಾದ ಹಳಿಯಾಳದಿಂದ ಸೇರ್ಪಡೆ ಮಾಡಿಕೊಂಡು ಯಲ್ಲಾಪುರ, ಶಿರಸಿ, ಕುಮಟಾ, ಹೊನ್ನಾವರ ಮತ್ತು ಭಟ್ಕಳದ ಶಿರೂರು ವರೆಗೆ ರಚಿಸಲು ಉದ್ದೇಶಿಸಲಾಗಿದೆ.

ಜಿಲ್ಲೆಯ ಸಾರ್ವಜನಿಕರು, ಸಂಘ ಸಂಸ್ಥೆಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು,ಎಲ್ಲಾ ಇಲಾಖೆಗಳ ನೌಕರರು ಮಾನವ ಸರಪಳಿಯ ಮೂಲಕ ಸೇರಿ , 260 ಕಿಮೀ ದೂರದವರೆಗೆ ಮಾನವ ಸರಪಳಿ ರಚಿಸಲು ಸೂಕ್ತ ಯೋಜನೆ ರೂಪಿಸಬೇಕು ಎಂದರು.

ಮೀನುಗಾರಿಕೆ ಬಂದ್ !

ಹವಾಮಾನ ವೈಪರಿತ್ಯ ದಿಂದ ಉ.ಕ ಕರಾವಳಿ ಭಾಗದಲ್ಲಿ  ಅರಬ್ಬಿ ಸಮುದ್ರದ ಅಲೆಗಳು ಹೆಚ್ಚಾದ್ದರಿಂದ ಮೀನುಗಾರರು ಸ್ವಯಂ ಪ್ರೇರಿತವಾಗಿ ಮೀನುಗಾರಿಕೆ ಬಂದ್ ಮಾಡಿದ್ದಾರೆ.

Uttrakannda karwar Gilani festival offers

Karwar milal big sale

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ