Mundagodu:ವಸತಿ ಶಾಲೆಯ 75 ವಿದ್ಯಾರ್ಥಿಗಳಿಗೆ ಮಂಗನಬಾವು ಸೊಂಕು
Mundgodu news21 November 2024 :- ಉತ್ತರ ಕನ್ನಡ (uttara kannda) ಜಿಲ್ಲೆಯ ಮುಂಡಗೋಡು ತಾಲೂಕಿನ ವಸತಿ ಶಾಲೆಯಲ್ಲಿ ಒಂದೇ ದಿನದಲ್ಲಿ 50 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ (students) ಮಂಗನಬಾವು ಕಾಯಿಲೆ (Manganbavo )ಕಾಣಿಸಿಕೊಂಡು ಮುಂಡಗೋಡಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇದನ್ನೂ ಓದಿ:-Mundgodu: ಹೋರಿ ಬೆದರಿಸಲು ಹೋದ ಯುವಕನಿಗೆ ತಿವಿತ -ಸಾವು
ಮುಂಡಗೋಡಿನ ಶಿರಸಿ ರಸ್ತೆಯಲ್ಲಿರುವ ಬೃಂದಾವನ ವಸತಿ ಬಡಾವಣೆಯ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು ವಸತಿ ಶಾಲೆಯಲ್ಲಿ 6 ರಿಂದ 10 ನೇ ತರಗತಿ ಓದುತ್ತಿರುವ 205 ವಿದ್ಯಾರ್ಥಿಗಳಿದ್ದಾರೆ.
ಇದರಲ್ಲಿ ಬುಧವಾರ 25 ಜನರಲ್ಲಿ ಕಾಣಿಸಿಕೊಂಡಿತ್ತು.ಆದರೇ ಇದೀಗ ಮಂಗನಬಾವು ಕಾಯಿಲೆ ಇತರೆ ವಿದ್ಯಾರ್ಥಿಗಳಿಗೂ ಹಬ್ಬಿದ್ದು 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸೋಂಕಿಗೆ ಒಳಗಾಗಿದ್ದಾರೆ.
ಒಟ್ಟು 75 ಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ ಈ ಮಂಗನಬಾವು ಕಾಣಿಸಿಕೊಂಡಿದ್ದು ಸದ್ಯ ಕೆಲವು ಮಕ್ಕಳಿಗೆ ಮುಂಡಗೋಡು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತಿದ್ದು ತಾಲೂಕು ಆರೋಗ್ಯಾಧಿಕಾರಿ ಡಾ.ಭರತ್ ಭೇಟಿನೀಡಿ ಪರಿಶೀಲನೆ ನಡೆಸಿದ್ದು ವಿದ್ಯಾರ್ಥಿಗಳ ರಕ್ತ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.
ಇದನ್ನೂ ಓದಿ'- Sirsi :ಶಾಲಾ ಬಾಲಕಿಗೆ ಅತ್ಯಾಚಾರಕ್ಕೆ ಯತ್ನ !
ಏಕಾ ಏಕಿ ಸೋಂಕು ನೀರು ಮತ್ತು ಸೋಂಕಿತರ ಸಂಪರ್ಕದಿಂದ ಬಂದಿರುವ ಸಾಧ್ಯತೆ ಇದ್ದು ಆರೋಗ್ಯ ವಂತ ವಿದ್ಯಾರ್ಥಿಗಳು ಈ ಮಕ್ಕಳಿಂದ ದೂರ ಇರಲು ಸೂಚಿಸಲಾಗಿದೆ.