Uttrakannada| ಮಳೆ ಹಾನಿಗೆ ಬಾರದ ಅನುದಾನ| ಎಷ್ಟು ನಷ್ಟ ವಿವರ ಇಲ್ಲಿದೆ.
Uttrakannada :- ರಾಜ್ಯದಲ್ಲಿ ಮಳೆ (Rain) ಕಡಿಮೆಯಾದರೂ ಕರಾವಳಿಯಲ್ಲಿ ಮಳೆಯ ಅಬ್ಬರ ಇನ್ನೂ ಸಹ ಮುಂದುವರೆದಿದೆ.ಇದರಿಂದಾಗಿ 204 ಕೋಟಿಗೂ ಅಧಿಕ ಆಸ್ತಿಗಳ ಹಾನಿಯಾಗಿದ್ದು 804 ಹೆಕ್ಟೇರ್ ಕೃಷಿ ಬೆಳೆಗಳು ನಾಶವಾಗಿದೆ.

ಕಳೆದ ನಾಲ್ಕು ತಿಂಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಉತ್ತರ ಕನ್ನಡ ಜಿಲ್ಲೆ ( Uttra kannda ) ತತ್ತರಿಸಿ ಹೋಗಿದೆ. ಜುಲೈ 2 ರಿಂದ ಜುಲೈ 24 ರ ವರೆಗೆ ಸುರಿದ ಯಮದ್ರೂಪಿ ಮಳೆಗೆ ಚಿಕ್ಕ ಮಕ್ಕಳು, ಯುವಕರು, ವಯೋ ವೃದ್ಧರು ಸೇರಿದಂತೆ 15 ಕ್ಕೂ ಹೆಚ್ಚು ಜನರ ಪ್ರಾಣವನ್ನು ಕಸಿದುಕೊಂಡಿದೆ.
ಇದನ್ನೂ ಓದಿ:-Ankola| 3.1 ಮೀಟರ್ ಡಾಲ್ಫಿನ್ ಕಳೆಬರ ಪತ್ತೆ.
ಅತಿಯಾದ ಮಳೆಯಿಂದ ಉತ್ತರ ಕನ್ನಡ ಜಿಲ್ಲೆಯ ಅನೇಕ ಗ್ರಾಮಗಳು ಜಲಾವೃತ ಗೊಂಡಿದ್ರೆ, 10 ಕ್ಕೂ ಹೆಚ್ಚು ಸ್ಥಳಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಗುಡ್ಡ ಕುಸಿತ ಗೊಂಡಿದ್ದರಿಂದ ಅನೇಕ ಗ್ರಾಮಕ್ಕೆ ಗ್ರಾಮವೇ ಕಣ್ಣಿರಲ್ಲಿ ಕೈ ತೊಳೆಯುವಂತಾಗಿದೆ.
ಇದನ್ನೂ ಓದಿ:-Shirur|ಜಗನ್ನಾಥ್ ಪುತ್ರಿಗೆ ಕೈಗಾದಲ್ಲಿ ಉದ್ಯೋಗ ಕೊಡಿಸಿದ ಕೇಂದ್ರ ಸಚಿವ ಹೆಚ್.ಡಿ.ಕೆ.
ಈ ರೀತಿಯಾಗಿ ಸರಣಿ ಅವಾಂತರಗಳಿಗೆ ಸಾಕ್ಷಿ ಆಗಿರುವ ವರುಣ ಜಿಲ್ಲೆಯ ಅನೇಕ ರಸ್ತೆಗಳು, ಶಾಲಾ ಕೊಠಡಿಗಳು, ವಿದ್ಯುತ್ ಉಪಕರಣಗಳು ಹೀಗೆ ಸುಮಾರು 214 ಕೋಟಿ ಗೂ ಅಧಿಕ ಹಾನಿ ಆಗಿದ್ದು ತುರ್ತು ಕಾಮಾಗಾರಿಗೆ 32 ಕೋಟಿ ರೂಪಾಯಿಯ ಅವಶ್ಯಕತೆ ಇದ್ದು ಸರ್ಕಾರದಿಂದ ಹಣ ಬಿಡುಗಡೆಯಾಗಬೇಕಿದೆ ಎಂದು ಜಿಲ್ಲಾಧಿಕಾರಿ
ಲಕ್ಷೀ ಪ್ರಿಯಾ ಹೇಳಿದ್ದಾರೆ.
ಜಿಲ್ಲೆಯಲ್ಲಿ ಸದ್ಯ 32 ಕೋಟಿ ರೂಪಾಯಿ ವೆಚ್ಚದಲ್ಲಿ ತುರ್ತು ಕಾಮಗಾರಿಯ ಅವಶ್ಯಕತೆ ಇದೆ. ಆದ್ರೆ ಜಿಲ್ಲಾಡಳಿತದ ಬಳಿ ಕೇವಲ 9.5 ಕೋಟಿ ರೂಪಾಯಿ ಇದ್ದು ಇನ್ನೂಳಿದ ಹಣವನ್ನು ಆದಷ್ಟು ಬೇಗ ಕೊಡಬೇಕೆಂದು ರಾಜ್ಯ ಸರ್ಕಾರಕ್ಕೆ ಜಿಲ್ಲಾಧಿಕಾರಿ ಲಕ್ಷೀ ಪ್ರಿಯಾ ಮನವಿ ಮಾಡಿದ್ದಾರೆ.
ಆದ್ರೆ ಇದುವರೆಗೂ ಹಣ ಬರದ ಹಿನ್ನೆಲೆ ಅನಿವಾರ್ಯವಾಗಿ ತಮ್ಮ ಬಳಿ ಇದ್ದ 9.5 ಕೋಟಿ ರೂಪಾಯಿಯಲ್ಲೇ ಕಾಮಾಗಾರಿ ಮಾಡಲು ಜಿಲ್ಲಾಡಳಿತ ಮುಂದಾಗಿದೆ.
ಇದನ್ನೂ ಓದಿ:-KUMTA |ಧಾರೇಶ್ವರ ದೇವಸ್ಥಾನ ಕಳ್ಳತನ ಮಾಡಿ ಸಿಕ್ಕಿಬಿದ್ದ ಕೊಲೆ ಆರೋಪಿ.ಇನ್ನು ದೊಡ್ಡ ಪ್ರಮಾಣದಲ್ಲಿ ಅಡಿಕೆ ತೋಟ ಸೇರಿದಂತೆ ಕೃಷಿ ಜಮೀನುಗಳಿಗೆ ನೀರು ನುಗ್ಗಿದ್ದರಿಂದ 804 ಹೆಕ್ಟೇರ್ ಬೆಳೆಗಳು ನಾಶವಾಗಿದೆ.4 ಕೋಟಿ 60 ಲಕ್ಷ ನಷ್ಟವಾಗಿದೆ. ಕುಮಟಾ ,ಅಂಕೋಲ, ಹೊನ್ನಾವರ, ಮುಂಡಗೋಡು, ಹಳಿಯಾಳ ಭಾಗದಲ್ಲಿ ರೈತರು ಬೆಳೆ ಪರಿಹಾರವೂ ಇಲ್ಲ ಬೆಳೆಯೂ ಇಲ್ಲ ಎನ್ನುವ ಸ್ಥಿತಿಯಲ್ಲಿ ಬದುಕುವಂತಾಗಿದೆ.
ಒಟ್ಟಿನಲ್ಲಿ ಇತ್ತ ಮಳೆಯೂ ಬಿಡುತ್ತಿಲ್ಲ, ಸೂಕ್ತ ಅನುದಾನವೂ ಇಲ್ಲ,ಪರಿಹಾರವೂ ಸಿಗುತ್ತಿಲ್ಲ ಎನ್ನುವ ಸ್ಥಿತಿ ಉತ್ತರ ಕನ್ನಡ ಜಿಲ್ಲೆಯವರದ್ದಾಗಿದ್ದು ಯಾವಾಗ ಮತ್ತೆ ಗುಡ್ಡ ಕುಸಿಯುತ್ತದೆಯೋ ,ಬೆಳೆ ನಾಶವಾಗುತ್ತೋ ಎನ್ನುವ ಭಯದಲ್ಲಿ ದಿನ ಕಳೆಯುವಂತಾಗಿದೆ.