Karnataka| ಬ್ರೇಕ್ ಫಾಸ್ಟ್ ಮೀಟಿಂಗ್ ನಲ್ಲಿ ಜೋಡೆತ್ತುಗಳು ಕಟ್ಟಿಕೊಂಡ ವಾಚಿನದ್ದೇ ಸದ್ದು| ಎಷ್ಟು ದುಬಾರಿ ಗೊತ್ತ ಈ ವಾಚ್!
Karnataka| ಬ್ರೇಕ್ ಫಾಸ್ಟ್ ಮೀಟಿಂಗ್ ನಲ್ಲಿ ಜೋಡೆತ್ತುಗಳು ಕಟ್ಟಿಕೊಂಡ ವಾಚಿನದ್ದೇ ಸದ್ದು| ಎಷ್ಟು ದುಬಾರಿ ಗೊತ್ತ ಈ ವಾಚ್!
ಬೆಂಗಳೂರು :- CM ಆಗುವುದಕ್ಕೆ ತುದಿಗಾಲಿನಲ್ಲಿ ನಿಂತಿರುವ ಡಿಸಿಎಂ D.K ಶಿವಕುಮಾರ್ ಹಾಗೂ ಸಿಎಂ ಕುರ್ಚಿ ಬಿಟ್ಟುಕೊಡಲು ಹಗ್ಗಾಜಗ್ಗಾಟ ಮಾಡುತ್ತಿರುವ ಸಿದ್ದರಾಮಯ್ಯ ಇವತ್ತು ಬ್ರೇಕ್‌ಫಾಸ್ಟ್ ಮೀಟಿಂಗ್ ಮಾಡಿದ್ದರು. ಇವತ್ತು ಸಿಎಂ ಸಿದ್ದರಾಮಯ್ಯ ಅವರನ್ನು ಸ್ವಾಗತ ಮಾಡಿದ ಡಿಸಿಎಂ ಡಿ.ಕೆ ಶಿವಕುಮಾರ್ ಶಾಲು ಹೊದಿಸಿ ಸ್ವಾಗತ ಮಾಡಿದ್ರು. ಈ ವೇಳೆ ಸಿಎಂ ಹಾಗೂ ಡಿಸಿಎಂ ಕೈನಲ್ಲಿ ಕಟ್ಟಿದ್ದ ವಾಚ್ ಗಮನ ಸೆಳೆದಿದೆ. ಇಬ್ಬರೂ ಒಂದೇ ರೀತಿಯ ವಾಚ್ ಕಟ್ಟಿದ್ದಾರೆ. ಇದು ಎಲ್ಲರು ಹುಬ್ಬೇರುವಂತೆ ಮಾಡಿದೆ.

Karnataka| ಕುರ್ಚಿಗಾಗಿ ಏಳೆಂಟು ಜನರ ಪೈಪೋಟಿ,ಶಾಸಕ,ಮಂತ್ರಿಗಳೂ ರೇಸ್ ನಲ್ಲಿ! ವಿಜಯೇಂದ್ರ ಏನಂದ್ರು ಗೊತ್ತಾ?
ಇದು ಕಾರ್ಟಿಯರ್ (cartier) ಕಂಪನಿಯ ವಾಚ್ ಆಗಿದ್ದು, ಇದರ ಬೆಲೆ 33,900 ಡಾಲರ್ ಅಂದರೆ ಭಾರತೀಯ ರೂಪಾಯಿ ಮೌಲ್ಯದಲ್ಲಿ ಬರೋಬ್ಬರಿ 30 ಲಕ್ಷದ 50 ಸಾವಿರ ರೂಪಾಯಿಗೂ ಅಧಿಕ. ಇಬ್ಬರೂ ನಾಯಕರು ಕಟ್ಟಿರುವ ವಾಚ್‌ನಲ್ಲಿ 18 ಕ್ಯಾರೆಟ್ ಗೋಲ್ಡ್ ಬಳಸಲಾಗಿದೆ ಎಂದು ಕಂಪನಿ ವೆಬ್‌ಸೈಟ್‌ನಲ್ಲಿ ತಿಳಿಸಿದೆ. ಪ್ರತಿಷ್ಠಿತ ವ್ಯಕ್ತಿಗಳು ಕಟ್ಟುವ ವಾಚ್ ಇದಾಗಿದ್ದು, ಸಿಎಂ ಡಿಸಿಎಂ ಇಬ್ಬರೂ ಒಂದೇ ರೀತಿಯ ವಾಚ್ ಕಟ್ಟಿರುವುದು ಗಮನಸೆಳೆಯುತ್ತಿದೆ.
ಇನ್ನು ಇದೀಗ ಈ ವಾಚ್ ಗಳಬಗ್ಗೆ ಪ್ರತಿಪಕ್ಷದ ನಾಯಕರು ಸಹ ತಕರಾರು ತೆಗೆದಿದ್ದು ಈ ವಾಚ್ ಹೇಗೆ ಬಂತು ಎಂಬ ಪ್ರಶ್ನೆ ಎತ್ತಿದ್ದಾರೆ. ಇನ್ನು ಈ ಹಿಂದೆ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಉಡುಗರೆ ನೀಡಿದ್ದ ವಾಚ್ ಸದ್ದು ಮಾಡಿತ್ತು.