ED | ಚೀನಾದಲ್ಲೂ ಬ್ಯಾಂಕ್ ಖಾತೆ ಹೊಂದಿರುವ ಶಾಸಕ ಸೈಲ್ | 46 ಕೋಟಿ ಲಂಚ ನೀಡಿದ್ದ ಸೈಲ್| ED ಚಾರ್ಜ್ ಶೀಟ್ ನಲ್ಲಿ ಏನಿದೆ?
ED | ಚೀನಾದಲ್ಲೂ ಬ್ಯಾಂಕ್ ಖಾತೆ ಹೊಂದಿರುವ ಶಾಸಕ ಸೈಲ್ | 46 ಕೋಟಿ ಲಂಚ ನೀಡಿದ್ದ ಸೈಲ್| ED ಚಾರ್ಜ್ ಶೀಟ್ ನಲ್ಲಿ ಏನಿದೆ?
ಬೆಂಗಳೂರು: ಡೈರೆಕ್ಟರೇಟ್ ಆಫ್ ಎನ್‌ಫೋರ್ಸ್‌ಮೆಂಟ್ (ED), ಬೆಂಗಳೂರು ವಲಯ ಕಚೇರಿ, ಪಿಎಂಎಲ್‌ಎ ವಿಶೇಷ ನ್ಯಾಯಾಲಯ (ಬೆಂಗಳೂರು)ದಲ್ಲಿ ಶ್ರೀ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈವೇಟ್ ಲಿಮಿಟೆಡ್ ಮತ್ತು ಅದರ ವ್ಯವಸ್ಥಾಪಕ ನಿರ್ದೇಶಕ ಹಾಗೂ ಕಾರವಾರ ವಿಧಾನಸಭಾ ಸದಸ್ಯ ಸತೀಶ ಕೃಷ್ಣ ಸೇಲ್ ವಿರುದ್ಧ ಹಣಕಾಸು ಅಕ್ರಮ ನಿಷೇಧ ಕಾಯ್ದೆ (PMLA), 2002ರಡಿ ಪ್ರಾಸಿಕ್ಯೂಷನ್ ಕಂಪ್ರೈಂಟ್ ಸಲ್ಲಿಸಿದೆ. ವಶಪಡಿಸಿಕೊಂಡಿದ್ದ ಕಬ್ಬಿಣದ ಅದಿರನ್ನು ಅನಧಿಕೃತವಾಗಿ ರಫ್ತು ಮಾಡಿರುವ ಪ್ರಕರಣದಲ್ಲಿ ಸರ್ಕಾರಕ್ಕೆ ₹44.09 ಕೋಟಿ ನಷ್ಟ ಉಂಟಾಗಿದೆ ಎಂದು ಆರೋಪಿಸಲಾಗಿದೆ.
ED ಚಾರ್ಜ್ ಶೀಟ್ ನಲ್ಲಿ ಏನಿದೆ?
ಬೇಲೆಕೇರಿ ಬಂದರಿನಿಂದ ಸುಮಾರು 44 ಕೋಟಿ ರೂ.ಮೌಲ್ಯದ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಕಾರವಾರ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಹಾಗೂ ಇತರರ ವಿರುದ್ಧ ಇಡಿ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.
karnataka | ಸಚಿವ ಸಂಪುಟ ಪುನಾರಚನೆ |ಆರ್.ವಿ ದೇಶಪಾಂಡೆ ಏನಂದ್ರು ಗೊತ್ತಾ?
ಸೈಲ್ ಮತ್ತು ಅವರ ಅಧೀನದಕಂಪನಿ ಶ್ರೀ ಮಲ್ಲಿಕಾರ್ಜುನಶಿಪ್ಪಿಂಗ್ ಪ್ರೈ.ಲಿ. ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಅಧಿಕಾರಿಗಳು ಸೈಲ್ ಅವರನ್ನು ಬಂಧಿಸಿದ್ದರು. ಲೋಕಾಯುಕ್ತ ಪ್ರಕರಣದ ಮೇರೆಗೆ ಇಡಿ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿತ್ತು. ಬಳ್ಳಾರಿಯಿಂದ ಬೇಲೆಕೇರಿ ಬಂದರಿಗೆ ಸುಮಾರು 8 ಲಕ್ಷ ಟನ್ ಅದಿರನ್ನು ಸಾಗಿಸಿರುವುದು ಬೆಳಕಿಗೆ ಬಂದಿದ್ದು, ಅದಿರನ್ನು ಚೀನಾಕ್ಕೆ ಮಾರಾಟ ಮಾಡಿದ್ದರು.
Karwar| ಜಿಲ್ಲಾಧಿಕಾರಿ ಕಚೇರಿಗೆ ದಾಳಿ ಇಟ್ಟ ಉಡ! ವಿಡಿಯೋ ನೋಡಿ
ಈ ಅಕ್ರಮದಲ್ಲಿ ಬೇಲೆಕೇರಿ ಬಂದರು ಅಧಿಕಾರಿಗಳುಸಹಕಾರ ನೀಡಿದ್ದರು ಎಂಬುದು ತನಿಖೆಯ ತನಿಖೆಯಲ್ಲಿ ಬಯಲಾಗಿದೆ. ಅದಿರನ್ನು ಅಕ್ರಮವಾಗಿ ಖರೀದಿಸಿದ್ದಕ್ಕಾಗಿ ಇತರ ಆರೋಪಿಗಳಿಗೆ ಸೈಲ್ 46.18 ಕೋಟಿ ರೂ. ಪಾವತಿಸಿರುವುದು ತನಿಖೆಯಲ್ಲಿ ಬಯಲಾಗಿದೆ. ಚೀನಾದ ಹಾಂಕಾಂಗ್ ಜಿಐ (ಎಚ್‌ಇಬಿಇಐ) ಐರನ್ ಆ್ಯಂಡ್ ಸ್ಟೀಲ್ ಇನ್ವೆಸ್ಟ್‌ಮೆಂಟ್ ಕಂಪನಿ ಲಿ. (ಹಿಂದಿನ ಮಲ್ಲಿಕಾರ್ಜುನ ಶಿಪ್ಪಿಂಗ್ ಲಿ. ಕಂಪನಿ) ಮೂಲಕ ರಫ್ತು ಮಾಡಿದ್ದರು. ಅದಿರನ್ನು ಖರೀದಿದಾರರಿಗೆ ನೇರವಾಗಿ ಕಳುಹಿಸುವ ಬದಲು ಅಕ್ರಮವಾಗಿ ತಲುಪಿಸಿ, ಆದಾಯ ಮರೆ ಮಾಚಿರುವುದು ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಸೈಲ್ ವಿದೇಶಿ ಕಂಪನಿಗೆ ಸಂಬಂಧಿಸಿದಂತೆ ಸ್ಟ್ಯಾಂಡರ್ಡ್ ಚಾರ್ಟಡ್್ರ ಬ್ಯಾಂಕ್ (ಹಾಂಕಾಂಗ್), ಹಾಂಕಾಂಗ್ ಇಡಸ್ಟ್ರಿಯಲ್ ಮತ್ತು ಕಮರ್ಷಿಯಲ್ ಬ್ಯಾಂಕ್ ಆಫ್ ಚೀನಾ, ಐಸಿಬಿಸಿ ಬ್ಯಾಂಕ್‌ನಲ್ಲಿ ಖಾತೆಗಳನ್ನು ಹೊಂದಿರುವುದು ಬಯಲಾಗಿದೆ.
ಇದನ್ನೂ ಓದಿ:-Mla sathish sail ಗೆ ಶಿಕ್ಷೆ ಪ್ರಕಟ ಎಷ್ಟು ವರ್ಷ ವಿವರ ಇಲ್ಲಿದೆ.
Karwar |ಬೇಲಿಕೇರ ಅದಿರು ಪ್ರಕರಣ| ಕಾರವಾರ ಶಾಸಕ ಸೈಲ್ ಗೆ ನ.20 ರ ವರೆಗೆ ಜಾಮೀನು ವಿಸ್ತರಣೆ.
