For the best experience, open
https://m.kannadavani.news
on your mobile browser.
Advertisement

Goa|ಗೋವಾ ಅಗ್ನಿ ದುರಂತ |ಬೆಂಗಳೂರು ಮೂಲದ ಯುವಕ ಸಾವು

Goa nightclub fire kills 25, including Bengaluru youth Isac. Goa CM announces compensation; police arrest managers as probe begins into the Hadapadey tragedy.
10:44 PM Dec 07, 2025 IST | ಶುಭಸಾಗರ್
Goa nightclub fire kills 25, including Bengaluru youth Isac. Goa CM announces compensation; police arrest managers as probe begins into the Hadapadey tragedy.
goa ಗೋವಾ ಅಗ್ನಿ ದುರಂತ  ಬೆಂಗಳೂರು ಮೂಲದ ಯುವಕ ಸಾವು

Goa|ಗೋವಾ ಅಗ್ನಿ ದುರಂತ |ಬೆಂಗಳೂರು ಮೂಲದ ಯುವಕ ಸಾವು.

Advertisement

Goa news :- ಗೋವಾದ (Goa) ಹಡೆಪಡೆಯಲ್ಲಿನ ನೈಟ್ ಕ್ಲಬ್ ನ ಅಗ್ನಿ ಅವಘಡದಲ್ಲಿ 25 ಜನ ಮೃತಪಟ್ಟಿದ್ದು ಬೆಂಗಳೂರು ಮೂಲದ ಇಸಾಕ್ ಸಾವನ್ನಪ್ಪಿರುವುದನ್ನು ಗೋವಾದ ಹಣಜುಣ ಪೊಲೀಸರು ಧೃಡಪಡಿಸಿದ್ದಾರೆ.

Goa| Nightclub ದುರಂತ ಹೇಗಾಯ್ತು| ಎಷ್ಟು ಜನರ ಬಂಧನ ವಿಡಿಯೋ ನೋಡಿ

ಬೆಂಗಳೂರಿನಿಂದ ಪಣಜಿಗೆ ಬಂದು ನಂತರ ಇಲ್ಲಿನ ಅರ್ಪೋರಾ ನೈಟ್‌ಕ್ಲಬ್‌ ಗೆ ಬಂದಿದ್ದ ಇಸಾಕ್ ಕ್ಲಬ್ ನಲ್ಲಿ ಘಟನೆ ನಡೆಯುವ ಮುಂಚೆಯೇ ತೆರಳಿದ್ದ.ಆದರೇ ಕ್ಲಬ್ ನಲ್ಲಿ ಮೊಬೈಲ್ ಬಿಟ್ಟು ಬಂದ ಕಾರಣ ಮರಳಿ ಕ್ಲಬ್ ಗೆ ಪ್ರವೇಶಿಸಿದ್ದು ಈವೇಳೆ ಕ್ಲಬ್ ನಲ್ಲಿ ಉಂಟಾದ ಷಾರ್ಟ ಸೆರ್ಕ್ಯೂಟ್ ನಿಂದ ದಟ್ಟ ಹೊಗೆ ತುಂಬಿ ಹೊರಬರಲಾಗದೇ ಅಲ್ಲಿಯೇ ಸಿಲುಕಿ ಸಜೀವ ದಹನವಾಗಿದ್ದಾನೆ.

ಇನ್ನು ದುರ್ಘಟನೆ ಕುರಿತು ಪತ್ರಿಕಾ ಗೋಷ್ಠಿ ನಡೆಸಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ರವರು ಗೋವಾ ಸರ್ಕಾರದಿಂದ ಮೃತರಿಗೆ ತಲಾ ಐದು ಲಕ್ಷ , ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ ತಲಾ ಎರಡು ಲಕ್ಷ , ಗಾಯಾಳುಗಳಿಗೆ ಗೋವಾ ಸರ್ಕಾರದಿಂದ 50 ಸಾವಿರ ಹಾಗೂ ಪ್ರಾಧಾನಿಗಳ ನಿಧಿಯಿಂದ 50 ಸಾವಿರ ಪರಿಹಾರ ಘೋಷಣೆ ಮಾಡಿದ್ದಾರೆ.ನೈಟ್ ಕ್ಲಬ್ ನಲ್ಲಿ ನಡೆದ ಕೆಲವರ ಗುರುತು ಮಾತ್ರ ಪತ್ತೆಯಾಗಿದ್ದು ,ಇವರ ಮೃತದೇಹವನ್ನು ಅವರ ಮನೆಗೆ ಕಳುಹಿಸುವ ಖರ್ಚನ್ನು ಸರ್ಕಾರವೇ ಬರಿಸಲಿದೆ. ಇದಕ್ಕಾಗಿ ಪೊಲೀಸ್  ಎಸ್.ಡಿ.ಎಂ ಸಮಿತಿ ಸ್ಥಾಪನೆ ಮಾಡಲಾಗಿದೆ.

ಈ ದುರ್ಘಟನೆ ಬಳಿಕ ಎಲ್ಲಾ ನೈಟ್ ಕ್ಲಬ್ ಗಳ ಆಡಿಟ್ ನಡೆಸಿ ಹೊಸ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಲಾಗುತ್ತದೆ, ಇದಕ್ಕಾಗಿ ಸಮಿತಿ ರಚನೆ ಮಾಡಲಾಗಿದೆ.ಇನ್ನು ಘಟನೆ ಸಂಬಂಧ ಹಣಜುಣ ಪೊಳಿಸರು ನಾಲ್ವರು ವ್ಯವಸ್ಥಾಪಕರನ್ನು ಬಂಧಿಸಿದ್ದಾರೆ,ಕ್ಲಬ್ ಮಾಲೀಕ ಸೌರಭ್ ಲುಥರಾ,ಗೌರವ್ ಲುಥರಾ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ,ಈಗಾಗಲೇ ಹಲವರನ್ನು ವಶಕ್ಕೆ ಪಡೆದು ತನಿಖೆ ಕೈಗೊಳ್ಳಲಾಗಿದೆ ಎಂದರು.

ಮೃತರಾದವರು ಯಾರು?

Goa night club tragedy
ಕ್ಲಬ್ ನ ಒಳಭಾಗದಲ್ಲಿ ಎಲ್ಲವೂ ನಾಶವಾಗಿರುವ ಚಿತ್ರ. ಸ್ಥಳ-ಗೋವಾ.

ದುರ್ಘಟನೆಯಲ್ಲಿ ಮೃತರಾದವರ ಗುರುತು ಪತ್ತೆಯಾಗಿದ್ದು ಜಾರ್ಖಂಡಿನ ಮೋಹಿತ ಎಟವಾ ಮುಂಡಾ (18), ಪ್ರದೀಪ್ ಮಹತೋ (22), ಬಿನೋದ್ ಮಹತೋ (19), ಅಸ್ಸಾಂ ನ ರಾಹುಲ್ ತಾಂತಿ (60) ಉತ್ತರಖಂಡ ನ ಸತೀಶ್‌ಸಿಂಗ್ ರಾಣಾ (26), ಅಸ್ಸಾಂ ನ ಮನೋಜಿತ್ ಮಲ್ (24), ಹರಿಯಾಣದ ಚೂರ್ಣ ಪುನ್ (33,), ಉತ್ತರ ಖಂಡ್ ನ ಸುರೇಂದ್ರ ಸಿಂಗ್ (38) ಪಶ್ಚಿಮ ಬಂಗಾಳದ  ಸುಭಾಷ್ ಛೆತ್ರಿ (22),ಉತ್ತರ ಖಂಡ್ ನ ಜಿತೇನ್ ಸಿಂಗ್ (21), ಸುಮೀತ್ ನೇಗಿ (44), ದೆಹಲಿಯ ಸರೋಜ್ ಜೋಶಿ (42). ಬೆಂಗಳೂರಿನ ಇಸಾಕ್ ಎಂದು ಗುರುತಿಸಲಾಗಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ