ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Panji : ಸಿಂಧಗಿ -ವಾಸ್ಕೋ ಬಸ್ ಓಡಾಟ ಪ್ರಾರಂಭಿಸದಿದ್ದರೇ ಉಗ್ರ ಹೋರಾಟ- ಕರವೇ

ಪಣಜಿ: ಸಿಂಧಗಿ ವಾಸ್ಕೊ ಬಸ್ ಓಡಾಟ ಇದೀಗ ಮತ್ತೆ ಸ್ಥಗಿತಗೊಳಿಸಲಾಗಿದೆ. ಕರ್ನಾಟಕದಿಂದ ಗೋವಾಕ್ಕೆ ಬರುವ ಹಲವು ಬಸ್ ಗಳನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಂದ್ ಮಾಡಿದೆ ಇದರಿಂದಾಗಿ ಗೋವಾ-ಕರ್ನಾಟಕ ಓಡಾಟ ನಡೆಸುವ ಕನ್ನಡಿಗರಿಗೆ ಹೆಚ್ಚು ತೊಂದರೆಯಾಗಿದೆ.
07:50 PM Feb 03, 2025 IST | ಶುಭಸಾಗರ್

Panji : ಸಿಂಧಗಿ -ವಾಸ್ಕೋ ಬಸ್ ಓಡಾಟ ಪ್ರಾರಂಭಿಸದಿದ್ದರೇ ಉಗ್ರ ಹೋರಾಟ- ಕರವೇ

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

ಪಣಜಿ: ಸಿಂಧಗಿ ವಾಸ್ಕೊ ಬಸ್ ಓಡಾಟ ಇದೀಗ ಮತ್ತೆ ಸ್ಥಗಿತಗೊಳಿಸಲಾಗಿದೆ. ಕರ್ನಾಟಕದಿಂದ ಗೋವಾಕ್ಕೆ ಬರುವ ಹಲವು ಬಸ್ ಗಳನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಂದ್ ಮಾಡಿದೆ ಇದರಿಂದಾಗಿ ಗೋವಾ-ಕರ್ನಾಟಕ ಓಡಾಟ ನಡೆಸುವ ಕನ್ನಡಿಗರಿಗೆ ಹೆಚ್ಚು ತೊಂದರೆಯಾಗಿದೆ.

ದಯವಿಟ್ಟು ಈ ಬಸ್ ಗಳ ಓಡಾಟ ಪುನರಾರಂಭಗೊಳಿಸಬೇಕು. ಇದಕ್ಕಾಗಿ 15 ದಿನ ಗಡುವು ನೀಡುತ್ತೇವೆ. ಬಸ್ ಪುನರಾರಂಭಗೊಳ್ಳದಿದ್ದರೆ ಕಲ್ಯಾಣ ಕರ್ನಾಟಕದಿಂದ ಬರುವ ಎಲ್ಲ ಬಸ್ ಗಳನ್ನು ಮೋಲೆಂ ಘಾಟ್ ನಲ್ಲಿ ತಡೆ ಹಿಡಿಯುವ ಮೂಲಕ ಉಘ್ರ ಹೋರಾಟ ನಡೆಸಲಿದ್ದೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಗೋವಾ ರಾಜ್ಯಾಧ್ಯಕ್ಷ ಮಂಜುನಾಥ ನಾಟೀಕರ್ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ:-Goa ದಿಂದ ಬೆಂಗಳೂರಿಗೆ ಬಸ್ ನಲ್ಲಿ ನಿರಂತರ ಅಕ್ರಮ ಮದ್ಯ ಸಾಗಾಟ !ಕೊನೆಗೂ ಸಿಕ್ತು ಲಕ್ಷ ಲಕ್ಷ ಮದ್ಯ.

Advertisement

ವಾಸ್ಕೊದಲ್ಲಿರು ಕರ್ನಾಟಕ ರಕ್ಷಣಾ ವೇದಿಕೆಯ ಕಛೇರಿಯಲ್ಲಿ ರಾಜ್ಯ ಪದಾಧಿಕಾರಿಗಳ ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ ಗೋವಾ ರಾಜ್ಯಾಧ್ಯಕ್ಷ ಮಂಜುನಾಥ ನಾಟೀಕರ್ ಮಾತನಾಡಿ ಕಳೆದ ಸುಮಾರು ಎರಡು ತಿಂಗಳ ಹಿಂದೆ ಕರವೇ ಗೋವಾ ರಾಜ್ಯ ಪದಾಧಿಕಾರಿಗಳು ನಾವು ಬೆಂಗಳೂರಿಗೆ ತೆರಳಿ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ರವರನ್ನು ನಮ್ಮ ರಾಷ್ಟ್ರೀಯ ಅಧ್ಯಕ್ಷರಾದ ಪ್ರವೀಣಕುಮಾರ್ ಶೆಟ್ಟಿ ರವರ ನೇತೃತ್ವದಲ್ಲಿ ಸಿಂಧಗಿ-ವಾಸ್ಕೊ ಬಸ್ ಓಡಾಟ ಪುನರಾರಂಭಿಸುವಂತೆ ಮನವಿ ಮಾಡಿದ್ದೆವು.

ಇದಕ್ಕೆ ಕೂಡಲೇ ಸ್ಫಂಧಿಸಿದ ಸಚಿವರು ನವೆಂಬರ್ ತಿಂಗಳಲ್ಲಿ ಈ ಬಸ್ ಓಡಾಟ ಪುನರಾರಂಭಿಸಿದ್ದರು. ಆದರೆ ಇದಾದ ಎರಡೇ ತಿಂಗಳಲ್ಲಿ ವಿಜಯಪುರ ಜಿಲ್ಲಾಧಿಕಾರಿಗಳು ಈ ಬಸ್ ಓಡಾಟ ಬಂದ್ ಮಾಡಿಸಿದ್ದಾರೆ. ಕಾರಣ ಕೇಳಿದರೆ ಸೂಕ್ತ ಆದಾಯ ಬರುತ್ತಿಲ್ಲ ಎಂದು ಹೇಳಿದ್ದಾರೆ. ಆದರೆ ಕೆಲವು ದಿನ ಹೆಚ್ಚು ಕಡಿಮೆ ಆಗಬಹುದು. ಈ ರೀತಿ ಮಾಡಿರುವುದರಿಂದ ದೇವರಹಿಪ್ಪರಗಿ, ಬಸನ ಬಾಗೇವಾಡಿ, ಸಿಂಧಗಿ ಈ ಮಾರ್ಗವಾಗಿ ಗೋವಾಕ್ಕೆ ಬಂದು ಹೋಗುವ ಕೂಲಿ ಕಾರ್ಮಿಕರಿಗೆ ಹೆಚ್ಚು ತೊಂದರೆಯಾಗಿದೆ. ಕೂಡಲೇ ಈ ಬಸ್ ಓಡಾಟ ಆರಂಭಿಸುವಂತೆ ಮನವಿ ಮಾಡುತ್ತೇವೆ ಎಂದು ಕರವೇ ರಾಜ್ಯಾಧ್ಯಕ್ಷ ಮಂಜುನಾಥ ನಾಟೀಕರ್ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕರವೇ ಗೋವಾ ರಾಜ್ಯ ಘಟಕದ ಖಜಾಂಚಿ ವೈ.ಎಸ್.ಬಿರಾದಾರ್, ಜುವಾರಿನಗರ ಘಟಕದ ಅಧ್ಯಕ್ಷ ಬಸವರಾಜ್ ಗೌಡರ್, ಸಡಾ ಘಟಕದ ಅಧ್ಯಕ್ಷ ಚಾಂದ್ ಸಾಬ್ ನದಾಫ್, ಕಾರ್ಯದರ್ಶಿ ಶಿವು ತಳವಾರ, ಜುವಾರಿನಗರ ಘಟಕದ ಮುಖಂಡ ಮಹೇಶ ಆಲೂರು, ಬಸವರಾಜ್ ಮುರಾಳ ಮತ್ತಿತರರು ಉಪಸ್ಥಿತರಿದ್ದರು.

Advertisement
Tags :
BusgiaKarnatakaPanjiಉತ್ತರ ಕರ್ನಾಟಕಕ.ರ.ವೇಕರ್ನಾಟಕ ರಕ್ಷಣಾ ವೇದಿಕೆಗೋವಾ
Advertisement
Next Article
Advertisement