Gokarna: ಗೋಕರ್ಣ ಗ್ರಹಣ ಸಂದರ್ಭದಲ್ಲಿ ಏನೇನು ಪೂಜೆ ವಿವರ ಇಲ್ಲಿದೆ
Gokarna: ಗೋಕರ್ಣ ಗ್ರಹಣ ಸಂದರ್ಭದಲ್ಲಿ ಏನೇನು ಪೂಜೆ ವಿವರ ಇಲ್ಲಿದೆ
ಮಿಲನ್ ನಲ್ಲಿ ಫೇಸ್ಟಿವಲ್ ಆಫರ್ |ಇಂದೇ ಭೇಟಿನೀಡಿ
ಕಾರವಾರ :- ನಾಳೆ ರಕ್ತ ಚಂದ್ರಗ್ರಹಣ ಸಂಭವಿಸುತಿದ್ದು ದಕ್ಷಿಣ ಕಾಶಿ ಎಂದೇ ಪ್ರಸಿದ್ದವಾದ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಚಂದ್ರ ಗ್ರಹಣದ ಪ್ರಯುಕ್ತ ಮಹಾಬಲೇಶ್ವರ ಮಂದಿರದಲ್ಲಿ ದೇವರ ದರ್ಶನದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.ಇದಲ್ಲದೇ
ಮಂದಿರದಿಂದ ನೀಡುವ ಎರಡು ಹೊತ್ತಿನ ಪ್ರಸಾದ ಭೋಜನದ ವ್ಯವಸ್ಥೆಯಲ್ಲಿ ಈ ದಿನದಂದು ಸಂಜೆ ಭೋಜನದ ವ್ಯವಸ್ಥೆ ಇರುವುದಿಲ್ಲ .ದೇವರ ದರ್ಶನಕ್ಕೆ ಬರುವ ಭಕ್ತರು ಬೆಳಗ್ಗೆ 10-45 ಗಂಟೆಯ ತನಕ ಮಾತ್ರ ದೇವರ ಸ್ಪರ್ಶ ದರ್ಶನಕ್ಕೆ ಅವಕಾಶವಿದ್ದು, ನಂತರ ಮಧ್ಯಾಹ್ನ 12.30 ಗಂಟೆಯ ಒಳಗೆ ಮಹಾಪೂಜೆ ನಡೆಯಲಿದೆ.
Karwar: ಹಬ್ಬದ ಖುಷಿಯನ್ನು ಉಡುಗೊರೆ ಜೊತೆ ಉಳಿತಾಯ ಮಾಡಿ ಆನಂದಿಸಿ ಜಿಲಾನಿ ಹೋಲ್ ಸೇಲ್ ಮಾರ್ಟ ನಲ್ಲಿ ಬಂಪರ್ ಆಫರ್
ಸಂಜೆ 4.00 ಗಂಟೆಯಿಂದ 5.30 ರವರೆಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶವಿರುತ್ತದೆ. ನಂತರ ಏಳು ಗಂಟೆಯ ಒಳಗೆ ಮಹಾಪೂಜೆ ನೆರವೇರಿಸಿ ದೇವಾಲಯ ಮುಚ್ಚಲಾಗುತ್ತೆ. ಗ್ರಹಣ ಕಾಲದ ರಾತ್ರಿ 9.45ರಿಂದ ಮಧ್ಯರಾತ್ರಿ 1-26ರರವರೆಗೆ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಗ್ರಹಣ ಮೋಕ್ಷದ ಬಳಿಕ ದೇವಾಲಯ ಶುಚಿಯಾಗಿಸಿ ವಿಶೇಷ ಪುಣ್ಯಾಹ ನೆರವೇರುವುದರೊಂದಿಗೆ ದೇವಾಲಯ ಮುಚ್ಚಲಾಗುತ್ತದೆ ಎಂದು ಆಡಳಿತ ಮಂಡಳಿ ತಿಳಿಸಿದೆ.