Pitru Paksha and Soul: ಗೋಕರ್ಣದಲ್ಲಿ ಪ್ರೇತ ಅನುಭವ| ನಟ ಮಾಸ್ಟರ್ ಆನಂದ್ ಹೇಳಿದ್ದೇನು ಗೊತ್ತಾ?
Pitru Paksha and Soul: ಗೋಕರ್ಣದಲ್ಲಿ ಪ್ರೇತ ಅನುಭವ| ನಟ ಮಾಸ್ಟರ್ ಆನಂದ್ ಹೇಳಿದ್ದೇನು ಗೊತ್ತಾ?
ಮಾಸ್ಟರ್ ಆನಂದ್ ಅವರು ಆಧ್ಯಾತ್ಮಿಕ ವಿಷಯದ ಬಗ್ಗೆ ಮಾಹಿತಿ ಕೊಡಲು ಒಂದು ಯುಟ್ಯೂಬ್ ಚಾನೆಲ್( YouTube channel )ಮಾಡಿದ್ದಾರೆ. ಅಲ್ಲಿ ಧಾರ್ಮಿಕ ವಿಚಾರದಬಗ್ಗೆ ಅವರು ಮಾತನಾಡುತ್ತಿರುತ್ತಾರೆ. ಈ ಸಂದರ್ಶನದಲ್ಲಿ ಮಾತನಾಡುವ ವೇಳೆ ಗೋಕರ್ಣದಲ್ಲಿ ನಡೆದ ಘಟನೆಯನ್ನು, ಅನುಭವವನ್ನು ಅವರು ತಮ್ಮ ಯೂಟ್ಯೂಬ್ ನಲ್ಲಿ ಹಂಚಿಕೊಂಡಿದ್ದಾರೆ. ಹಾಗಿದ್ರೆ ಗೋಕರ್ಣ (Gokarna) ದಲ್ಲಿ ಅವರಿಗೆ ಆದ ಅನುಭವ ಏನು? ಅಲ್ಲಿ ಏನಾಯ್ತು? ಅವರು ಹೇಳಿದ ವಿಷಯ ಇಲ್ಲಿದೆ ನೋಡಿ.
ಮಾಂಧಿ ಶಾಂತಿ ಮಾಡಬೇಕು
ಜಾತಕದಲ್ಲಿ ಮಾಂಧಿ ಇದ್ದರೆ, ಮಾಂಧಿ ಶಾಂತಿ ಮಾಡಬೇಕು ಎಂದು ಹೇಳುತ್ತಾರೆ. ಗೋಕರ್ಣದಲ್ಲಿ ಮಾಂಧಿ ಶಾಂತಿ ಮಾಡಿ ಎಂದು ಹೇಳಿದ್ದರು. ಇಡೀ ವಂಶದಲ್ಲಿ ತೀರಿಕೊಂಡವರ ಹೆಸರನ್ನು ತಗೊಂಡು ಇವನ್ನೆಲ್ಲ ಮಾಡಲಾಗುತ್ತದೆ. ನಾವು ಕೂಡ ಗೋಕರ್ಣಕ್ಕೆ ಹೋದೆವು. ನಾರಾಯಣಬಲಿ, ಪ್ರೇತ ಶಾಂತಿ, ಕುಷ್ಮಾಂಡು ಹೋಮ ಮಾಡಲಾಯ್ತು ಎಂದಿದ್ದಾರೆ.
ಮಾಂಧಿ ಶಾಂತಿ ಯಾಕೆ ಮಾಡಬೇಕು?
ನಮ್ಮ ವಂಶಸ್ಥರು ಯಾರು ಹೇಗೆ ಸತ್ತಿರುತ್ತಾರೆ ಎನ್ನೋದು ಗೊತ್ತಿಲ್ಲ. ಅವರಿಗೆ ಮೋಕ್ಷ ಸಿಕ್ಕಿರೋದಿಲ್ಲ, ತ್ರಿಶಂಕು ಸ್ವರ್ಗದಲ್ಲಿ ಇರುತ್ತಾರೆ. ಇವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮಾಡಲಾಗುತ್ತದೆ ಎಂದಿದ್ದಾರೆ ಆನಂದ್.
ನೀರಿನ ಹತ್ತಿರ ಹೋಗಬೇಡಿ
ನಾವು ಮೂರು ದಿನ ಅಲ್ಲಿ ಇರಬೇಕಿತ್ತು. ಆಗ ಅವರು ಟ್ರಿಪ್‌ಗೆ ಬಂದಿದ್ದೇವೆ ಎಂದು ನೀರಿನ ಹತ್ತಿರ ಹೋಗಬೇಡಿ, ಬೇಕಿದ್ರೆ ಸಿಟಿ ತಿರುಗಾಡಿ ಎಂದು ಹೇಳಿದ್ದಾರೆ. ಇದರ ಹಿಂದಿನ ಕಾರಣ ಏನೆಂದು ನಾನು ಆಮೇಲೆ ತಿಳಿದುಕೊಂಡೆ ಎಂದು ಆನಂದ್ ಹೇಳಿದ್ದಾರೆ.
ನಾರಾಯಣ ಬಲಿ ಮಾಡಬೇಕಿತ್ತು
ಒಂದು ದಂಪತಿಯು ಹೀಗೆ ನಾರಾಯಣ ಬಲಿ ಮಾಡಲು ಬಂದಿದೆ. ಆಗ ಆತ್ಮವು ಬಂದು, ನನಗೆ ನಾರಾಯಣ ಬಲಿ ಮಾಡಸ್ತೀರಾ? ನಾನು ನಿಮ್ಮ ವಂಶವನ್ನು ನಿರ್ವಂಶ ಮಾಡ್ತೀನಿ ಎಂದು ಹೇಳಿದೆ. ಹೀಗಾಗಿ ನೀವು ಮೂರು ದಿನ ಹೊರಗಡೆ ಹೋಗಬೇಡಿ ಎಂದು ಹೇಳಲಾಗಿತ್ತು.
ಆ ಪ್ರೇತ ಹೇಳಿದಂತೆ ಆಯ್ತು !
ಮುಂದುವರೆದು ಮಾತನಾಡಿದ ಆನಂದ್ ರೂಮ್‌ನಲ್ಲಿದ್ದ ಮಗುವೊಂದು ಸಮುದ್ರದ ಬಳಿ ಹೋಗಿದೆ, ಆ ಮಗುವನ್ನು ತಂದೆ ಫಾಲೋ ಮಾಡಿಕೊಂಡು ಹೋಗಿದ್ದಾನೆ. ದೊಡ್ಡ ಅಲೆಗೆ ಮಗ-ಮೊಮ್ಮಗ ಕೊಚ್ಚಿಕೊಂಡು ಹೋದರು. ಮಗ, ಮೊಮ್ಮಗನನ್ನು ಹುಡುಕಿಕೊಂಡು ತಂದೆಯೂ ಬಂದಿದ್ದರು. ಅವರ ಮುಂದೆ ಆ ಪ್ರೇತ ಹೇಳಿದಂತೆ ಇಡೀ ವಂಶ ನಿರ್ವಂಶವಾಯ್ತು. ಹೀಗೆ ಸಾಕಷ್ಟು ಕಥೆಗಳು ಇವೆಯಂತೆ.
ನನ್ನ ತಂದೆ 24 ಇಡ್ಲಿ ತಿಂದರು.!
ಅಂದು ನಾರಾಯಣ ಬಲಿ ಶಾಂತಿ ಆಗುತ್ತಿದೆ. ನಿಮ್ಮ ವಂಶಸ್ಥರು ಯಾರೋ ಬಂದು, ಊಟ ಮಾಡಿಕೊಂಡು ಹೋಗ್ತಾರೆ ಎಂದು ಹೇಳಲಾಗಿತ್ತು. ನನ್ನ ತಂದೆ 24 ಇಡ್ಲಿ ತಿಂದರು. ನಾನು ಆ ಬಗ್ಗೆ ಪ್ರಶ್ನೆ ಮಾಡಿದಾಗ, ಎಲ್ಲರೂ ಸುಮ್ಮಿನಿರು ಎಂದರು. ಆಮೇಲೆ ಇದರ ಬಗ್ಗೆ ಪ್ರಶ್ನೆ ತಂದೆಗೆ ಪ್ರಶ್ನೆ ಮಾಡಿದಾಗ ಅವರು, ನನಗೆ ಏನೂ ಗೊತ್ತಾಗಲಿಲ್ಲ ಎಂದರು.
ಅಮಾವಾಸ್ಯೆ, ಹುಣ್ಣಿಮೆಗೆ ನೀರಿಗೆ ಹೋಗಬಾರದು
ಈ ರೀತಿ ಘಟನೆಗಳಿಗೆ ಲಾಜಿಕ್ ಆಗಿ ಹೇಳೋಕೆ ಹೋದರೆ ಆಗೋದಿಲ್ಲ. ತುಂಬ ಡೀಪ್ ಆಗಿ ಹೋದಾಗ ಗೊತ್ತಾಗುವುದು. ಅಮವಾಸ್ಯೆ, ಹುಣ್ಣಿಮೆಯಲ್ಲಿ ಸಮುದ್ರ, ನೀರಿನ ಬಳಿ ಹೋಗಬಾರದು ಎಂದು ಈ ಕಾರಣಕ್ಕೆ ಹೇಳುತ್ತಾರಂತೆ. ಹೀಗಂತ ಮಾಸ್ಟರ್ ಆನಂದ್ ತಮಗಾದ ಕೆಲವು ಅನುಭವವನ್ನು ಹಂಚಿಕೊಂಡಿದ್ದಾರೆ.