For the best experience, open
https://m.kannadavani.news
on your mobile browser.
Advertisement

Gruha ArogyaYojana ಮಾರ್ಚ ನಿಂದ ಜಾರಿ ಏನಿದರ ಉಪಯೋಗ? ವಿವರ ಇಲ್ಲಿದೆ.

Gruha Arogya Yojana:ಕರ್ನಾಟಕ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ಜಾರಿ ಮಾಡುವ ಮೂಲಕ ರಾಜ್ಯದ ಜನತೆಗೆ ಗುಡ್ ನ್ಯೂಸ್ ನೀಡಿತ್ತು. ಆದರೇ ಇದೀಗ ಕೇವಲ ಕೋಲಾರಕ್ಕೆ ಸೀಮಿತವಾಗಿದ್ದ ಗೃಹ ಆರೋಗ್ಯ ಯೋಜನೆ ಮಾರ್ಚ ನಿಂದ ಇಡೀ ರಾಜ್ಯಾಧ್ಯಂತ ವಿಸ್ತರಣೆ ಮಾಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಹೇಳಿದ್ದಾರೆ.
01:00 PM Feb 02, 2025 IST | ಶುಭಸಾಗರ್
gruha arogyayojana ಮಾರ್ಚ ನಿಂದ ಜಾರಿ ಏನಿದರ ಉಪಯೋಗ  ವಿವರ ಇಲ್ಲಿದೆ
Gruha Arogya Yojana

Gruha ArogyaYojana ಮಾರ್ಚ ನಿಂದ ಜಾರಿ ಏನಿದರ ಉಪಯೋಗ? ವಿವರ ಇಲ್ಲಿದೆ.

ಪ್ರಕೃತಿ ಮೆಡಿಕಲ್ ,ಕಾರವಾರ.

Gruha Arogya Yojana:ಕರ್ನಾಟಕ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ಜಾರಿ ಮಾಡುವ ಮೂಲಕ ರಾಜ್ಯದ ಜನತೆಗೆ ಗುಡ್ ನ್ಯೂಸ್ ನೀಡಿತ್ತು. ಆದರೇ ಇದೀಗ ಕೇವಲ ಕೋಲಾರಕ್ಕೆ ಸೀಮಿತವಾಗಿದ್ದ ಗೃಹ ಆರೋಗ್ಯ ಯೋಜನೆ ಮಾರ್ಚ ನಿಂದ ಇಡೀ ರಾಜ್ಯಾಧ್ಯಂತ ವಿಸ್ತರಣೆ ಮಾಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಹೇಳಿದ್ದಾರೆ.

Advertisement

ಏನಿದು ಗೃಹ ಆರೋಗ್ಯ ಯೋಜನೆ?.

Gruha ArogyaYojana ಮಾರ್ಚ ನಿಂದ ಜಾರಿ ಏನಿದರ ಉಪಯೋಗ? ವಿವರ ಇಲ್ಲಿದೆ.
Gruha ArogyaYojana photo 

30 ವರ್ಷ ಮೇಲ್ಪಟ್ಟ ಎಲ್ಲಾ ನಾಗರಿಕರಿಗೂ ಸಕ್ಕರೆ ಕಾಯಿಲೆ, ರಕ್ತದೊತ್ತಡ (ಬಿಪಿ), ಬಾಯಿ, ಸ್ತನ, ಗರ್ಭಕಂಠದ ಕ್ಯಾನ್ಸ‌ರ್ ಹಾಗೂ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಪ್ರಾಥಮಿಕ ಹಂತದ ತಪಾಸಣೆಗಳು ಮನೆ ಬಾಗಿಲಲ್ಲಿ ದೊರೆಯುವಂತ ಯೋಜನೆಯೇ ಗೃಹ ಆರೋಗ್ಯ ಯೋಜನೆ.

 ಮನೆ ಬಾಗಿಲಿಗೆ ಆರೋಗ್ಯ ಸೇವೆಗಳನ್ನು ನೀಡಲು ಆರೋಗ್ಯ ಇಲಾಖೆಯು 'ಗೃಹ ಆರೋಗ್ಯ' ಯೋಜನೆಯನ್ನು ಜಾರಿಗೆ ತರುತ್ತಿದೆ. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಯೋಜನೆಗೆ ಚಾಲನೆ ನೀಡಲಿದ್ದಾರೆ. ಪ್ರಾರಂಭಿಕವಾಗಿ ಕೋಲಾರ ಜಿಲ್ಲೆಯಲ್ಲಿ ಜಾರಿ ಮಾಡಲಾಗಿತ್ತು. ಈಗ ಮಾರ್ಚ್‌ ನಿಂದ ರಾಜ್ಯಾದ್ಯಂತ ವಿಸ್ತರಣೆ ಮಾಡಲಾಗುತ್ತಿದೆ.

ಗೃಹ ಆರೋಗ್ಯ ಯೋಜನೆಯಡಿ ಮನೆ ಬಾಗಿಲಲ್ಲೇ ಸಿಗಲಿವೆ ಈ ಎಲ್ಲಾ ಸೇವೆಗಳು.

ಇದನ್ನೂ ಓದಿ:-GOKARNA: ಕೋಟಿ ತೀರ್ಥದಲ್ಲಿ ಬೆಳಗಿದ ಸಹಸ್ರ ದೀಪ video ನೋಡಿ

ಮಧುಮೇಹ,ಅಧಿಕ ರಕ್ತದೊತ್ತಡ ಸಂಬಂಧಿಸಿದ ಪರೀಕ್ಷೆ.ಬಾಯಿ, ಸ್ತನ, ಗರ್ಭಕಂಠದ ಕ್ಯಾನ್ಸರ್ ಹಾಗೂ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಹಂತದ ತಪಾಸಣೆ.

ಆರೋಗ್ಯ ಕಾರ್ಯಕರ್ತರ ತಂಡದಿಂದ ಗ್ರಾಮೀಣ ಭಾಗದ 30 ವರ್ಷ ಮೇಲ್ಪಟ್ಟ ಎಲ್ಲಾ ನಾಗರಿಕರ ಮನೆಗಳಿಗೆ ಭೇಟಿ ನೀಡಿ ತಪಾಸಣೆ.ಸಾರ್ವಜನಿಕರ ಆರೋಗ್ಯ ತಪಾಸಣೆ ಮತ್ತು ದಾಖಲಾತಿ ಹಾಗೂ ಅವಶ್ಯಕತೆ ಇರುವವರಿಗೆ ಉಚಿತ ಔಷಧ ಕಿಟ್ ವಿತರಣೆ.

ಇದನ್ನೂ ಓದಿ'-Winter Health : ಚಳಿಗಾಲದ ಗಂಟಲು ನೋವಿಗೆ ಇಲ್ಲಿದೆ ಪರಿಹಾರ.

ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಕಾಯಿಲೆಗಳಿಗೆ ವೈದ್ಯರ ಸಲಹೆಯಂತೆ ನಿರಂತರ ಉಚಿತ ಔಷಧಿಗಳ ವಿತರಣೆ ಸೇವೆ ಗ್ರಾಮೀಣ ಭಾಗಕ್ಕೆ ದೊರೆಯಲಿದೆ.

ವಿವಿಧ ರೋಗಗಳನ್ನು ಪ್ರಾಥಮಿಕ ಹಂತದಲ್ಲೇ ಪತ್ತೆಹಚ್ಚಿ ಅವುಗಳಿಗೆ ಚಿಕಿತ್ಸೆ ನೀಡುವ ಉದ್ದೇಶ ಇದರದ್ದಾಗಿದ್ದು ಆಯುಷ್ಮಾನ್ ಆರೋಗ್ಯ ಕೇಂದ್ರ ದಲ್ಲಿ ಸಹ ಹೆಚ್ಚಿನ ಚಿಕಿತ್ಸೆಗೆ ಅವಕಾಶ ಮಾಡಿಕೊಡಲಾಗುತ್ತದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ