Haliyal| ಟ್ರಾಕ್ಟರ್ ಮತ್ತು ಟ್ರೇಲರ್ ಕಳ್ಳತನ ಪ್ರಕರಣ: ಆರೋಪಿ ಬಂಧನ
Haliyal| ಟ್ರಾಕ್ಟರ್ ಮತ್ತು ಟ್ರೇಲರ್ ಕಳ್ಳತನ ಪ್ರಕರಣ: ಆರೋಪಿ ಬಂಧನ
Haliyal news:-ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಮುರ್ಕವಾಡ ಗ್ರಾಮದಲ್ಲಿ ನಡೆದ ಟ್ರಾಕ್ಟರ್ ಹಾಗೂ ಟ್ರೇಲರ್ ಕಳ್ಳತನ ಪ್ರಕರಣವನ್ನು ಹಳಿಯಾಳ ಪೊಲೀಸರು ಪತ್ತೆಪಚ್ಚಿ ಆರೋಪಿಯನ್ನು ಬಂಧಿಸಿದ್ದಾರೆ.
ತಾಲ್ಲೂಕಿನ ಮುರ್ಕವಾಡ ಗ್ರಾಮದ ಶಾಮಿಯಾನ ಕೆಲಸ ಮಾಡುವ ಸಂಜು ಯಲ್ಲಾರಿ ಪಿಂಪಳಕರ ಎಂಬುವವರು, ಆಗಸ್ಟ್ 16 ರಂದು ರಾತ್ರಿ 10.30 ರಿಂದ ಆಗಸ್ಟ್ 17ರ ಬೆಳಗ್ಗೆ 7.30ರ ವೇಳೆಗೆ ಹಳಿಯಾಳ–ಕಲಘಟಗಿ ರಸ್ತೆ ಪಕ್ಕದ ಸತ್ಯಪುರುಷ ಸ್ಟೋರ್ ಬಳಿ ನಿಲ್ಲಿಸಿದ್ದ ಮ್ಯಾಕ್ಸಿ ಕಂಪನಿಯ ಕೆಂಪು ಬಣ್ಣದ ಟ್ರಾಕ್ಟರ್ ಮತ್ತು ಕೇಸರಿ ಬಣ್ಣದ ಟ್ರೇಲರ್ ಅಂದಾಜು ಮೌಲ್ಯ ರೂ. 4.80 ಲಕ್ಷ ಮೌಲದ ಟ್ರಾಕ್ಟರ್ ಕಳ್ಳತನವಾಗಿದೆ ಎಂದು ದೂರು ದಾಖಲಿಸಿದ್ದರು. ಈ ಕುರಿತು ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿತ್ತು.
ತನಿಖೆಗಾಗಿ ವಿಶೇಷ ಪತ್ತೆದಳವನ್ನು ರಚಿಸಿದ ಹಳಿಯಾಳ ಪೊಲೀಸರು, ಸಿಸಿಟಿವಿ ದೃಶ್ಯಾವಳಿ ಮತ್ತು ಖಚಿತ ಬಾತ್ಮಿಯ ಆಧಾರದ ಮೇಲೆ ಸೆ.23ರಂದು ಮಹಾರಾಷ್ಟ್ರದ ಅಹಲ್ಯ ನಗರ ಜಿಲ್ಲೆಯ ಶೇಗಾಂವ ತಾಲೂಕಿನ ಚಿಕಣಿ ತಾಂಡಾದಲ್ಲಿ ಆರೋಪಿ ರಾಹುಲ್ ಅಶೋಕ ಜಾಧವ(30) ಅವರನ್ನು ಬಂಧಿಸಿದರು. ವಿಚಾರಣೆಯಲ್ಲಿ ಆರೋಪಿಯು ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದು, ಕಳುವಾದ ಟ್ರಾಕ್ಟರ್ ಹಾಗೂ ಟ್ರೇಲರ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
Karnataka| ಹವಾಮಾನ ಇಲಾಖೆಯಿಂದ ಮಳೆ ಎಚ್ಚರಿಕೆ |ಎಷ್ಟು ದಿನ ಮಳೆ ಗೊತ್ತಾ?
ಈ ಕಾರ್ಯಾಚರಣೆ ಉತ್ತರಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್. ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಕೃಷ್ಣಮೂರ್ತಿ ಹಾಗೂ ಜಗದೀಶ ನಾಯ್ಕ, ದಾಂಡೇಲಿಯ ಉಪಾಧೀಕ್ಷಕ ಶಿವಾನಂದ ಮದರಕಂಡಿ ಮತ್ತು ಹಳಿಯಾಳ ವೃತ್ತ ನಿರೀಕ್ಷಕ ಜಯಪಾಲ್ ಪಾಟೀಲ ಅವರ ಮೇಲ್ವಿಚಾರಣೆಯಲ್ಲಿ ನಡೆಯಿತು.
Haliyal news| ಪೊಲೀಸ್ ಠಾಣೆ ಎದುರಿಗಿರುವ ಗಣಪತಿ ದೇವಸ್ಥಾನಕ್ಕೆ ಕನ್ನ ಹಾಕಿದ ಕಳ್ಳರು |ವಿಡಿಯೋ ನೋಡಿ
ಪಿಎಸ್‌ಐ ಬಸವರಾಜ ಮಬನೂರ (ಕಾ&ಸು), ಪಿಎಸ್‌ಐ ಕೃಷ್ಣಾ ಅರಕೇರಿ (ತನಿಖೆ) ಅವರ ನೇತೃತ್ವದಲ್ಲಿ ಸಿಪಿಸಿ ಲಕ್ಷ್ಮಣ ಪೂಜಾರಿ, ಶ್ರೀಶೈಲ ಜಿ.ಎಂ., ವಿನೋದ್ ಜಿ.ಬಿ., ಮಂಜುನಾಥ ಬಾಲಿ, ಮಲ್ಲಿಕಾರ್ಜುನ್ ಕುದರಿ ಮತ್ತು ಕಾಶಿನಾಥ ಬಿಳ್ಳೂರ ಎಂಬ ಸಿಬ್ಬಂದಿ ಬಂಧನ ಕಾರ್ಯಾಚರಣೆಯಲ್ಲಿ ಸಕ್ರಿಯ ಪಾತ್ರವಹಿಸಿದರು.
ಪ್ರಕರಣ ಪತ್ತೆ ಕಾರ್ಯದಲ್ಲಿ ಭಾಗಿಯಾದ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಕರ್ತವ್ಯನಿಷ್ಠೆಯನ್ನು ಮೆಚ್ಚಿ, ಅವರನ್ನು ಅಭಿನಂದಿಸಲಾಗಿದೆ.