Honnavar | ಅರಬ್ಬಿ ಸಮುದ್ರದಲ್ಲಿ ಗೋವಾದ 31 ಮೀನುಗಾರರ ರಕ್ಷಣೆ - ಹೊನ್ನಾವರ ಬಂದರಿಗೆ ರವಾನೆ
Honnavar | ಅರಬ್ಬಿ ಸಮುದ್ರದಲ್ಲಿ ಗೋವಾದ 31 ಮೀನುಗಾರರ ರಕ್ಷಣೆ - ಹೊನ್ನಾವರ ಬಂದರಿಗೆ ರವಾನೆ.
ಕಾರವಾರ (26 october 2025) :- ಅಬ್ಬರದ ಗಾಳಿ ಮಳೆಗೆ ಅರಬ್ಬಿ ಸಮುದ್ರದಲ್ಲಿ ಕಾಣೆಯಾಗಿದ್ದ ಗೋವಾ ಮೂಲದ ಬೋಟ್ ನನ್ನು ಭಾರತೀಯ ತಟ ರಕ್ಷಣಾ ಪಡೆ ಪತ್ತೆ ಹಚ್ಚಿ 31 ಮೀನುಗಾರರ ರಕ್ಷಣೆ ಮಾಡಿದ ಘಟನೆ ನಡೆದಿದೆ.
ಗೋವಾ (goa) ದಿಂದ ಮೀನುಗಾರಿಕೆಗೆ ಹೊರಟಿದ್ದ IFB ಸಂತ ಆಂಟನಿ ಹೆಸರಿನ ಬೋಟ್ ,ಅಕ್ಟೋಬರ್ 24 ರಂದು ಗಾಳಿ, ಮಳೆಗೆ ಸಂಪರ್ಕಕ್ಕೆ ಸಿಗದೆ ಕಾಣೆಯಾಗಿದ್ದು,ಆಳ ಸಮುದ್ರದಲ್ಲಿ ಸ್ಟೆರಿಂಗ್ ಹಾಗೂ ಗೇರ್‌ನ ವೈಫಲ್ಯದಿಂದಾಗಿ ಅಪಾಯಕ್ಕೆ ಸಿಲಿಕಿತ್ತು .ಈ ಬೋಟ್ ನಲ್ಲಿ 31 ಮೀನುಗಾರರು ಇದ್ದರು.
Rain| ಮುಂದು ವರೆಯಲಿರುವ ಮಳೆ |ಹೇಗಿರಲಿದೆ ವಾತಾವರಣ ವಿವರ ಇಲ್ಲಿದೆ
ತುರ್ತು ಮಾಹಿತಿ ಪಡೆದು ಡೋನಿಯರ್ ಗಸ್ತು ವಿಮಾನ ಮೂಲಕ ಮಾಹಿತಿ ಪಡೆದು ಪತ್ತೆ ಹಚ್ಚಿ ,ಕೋಸ್ಟ್ ಗಾರ್ಡ್ ನ ICGS ಕಸ್ತೂರ್ಬಾ ಗಾಂಧಿ ಹಡಗು 100 ನಾಟಿಕನ್ ಮೈಲುದೂರದಲ್ಲಿ ಇದ್ದ ಮೀನುಗಾರಿಕಾ ಬೋಟ್ ಬಳಿಗೆ ಪ್ರತಿಕೂಲ ಹವಾಮಾನದ ನಡುವೆಯೇ ತೆರಳಿ,ಅದರಲ್ಲಿದ್ದ 31 ಮೀನುಗಾರರನ್ನು ರಕ್ಷಣೆ ಮಾಡಿದೆ.
Rain news| ಅಬ್ಬರದ ಗಾಳಿ ಮಳೆ,ಮುಳುಗಿದ ರಸ್ತೆ ,ಕುಸಿದ ಗುಡ್ಡ ಎಲ್ಲಿ ಏನಾಯ್ತು ವಿವರ ಇಲ್ಲಿದೆ.
ಹಾನಿಗೊಂಡಿದ್ದ ಮೀನುಗಾರಿಕಾ ಬೋಟ್ ನ್ನು ಹೊನ್ನಾವರ ಮೀನುಗಾರಿಕಾ ಬಂದರಿಗೆ ಎಳೆ ತಂದು ಲಂಗುರು ಹಾಕಲಾಗಿದ್ದು ರಕ್ಷಿತ ಮೀನುಗಾರರನ್ನು ಗೋವಾಕ್ಕೆ ಕರೆದೊಯ್ಯಲಾಗಿದೆ.