Honnavar :ವಿದ್ಯುತ್ ಷಾರ್ಟ ಸೆರ್ಕ್ಯೂಟ್ ಲಾರಿ ಜೊತೆ ಹೊತ್ತಿ ಉರಿದ ಗುಜರಿ ಸಾಮಾನು|ವಿಡಿಯೋ ನೋಡಿ
Honnavar :ವಿದ್ಯುತ್ ಷಾರ್ಟ ಸೆರ್ಕ್ಯೂಟ್ ಲಾರಿ ಜೊತೆ ಹೊತ್ತಿ ಉರಿದ ಗುಜರಿ ಸಾಮಾನು|ವಿಡಿಯೋ ನೋಡಿ

ಕಾರವಾರ :-ವಿದ್ಯುತ್ ಷಾರ್ಟ ಸರ್ಕ್ಯೂಟ್ ನಿಂದ ಗುಜುರಿ ಸಾಮಾನಿಗೆ ಬೆಂಕಿ ಹತ್ತಿಕೊಂಡು ಪಕ್ಕದಲ್ಲೇ ಇದ್ದ ಲಾರಿ ಸಹಿತ ಗುಜುರಿ ಮಸ್ತುಗಳು ಬೆಂಕಿಗಾಹುತಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ದ ರಾಷ್ಟ್ರೀಯ ಹೆದ್ದಾರಿ 66 ರ ಗುಣವಂತೆ ಬಳಿ ಮಧ್ಯಹ್ನ ನಡೆದಿದೆ. ಗುಣವಂತೆ ಯಲ್ಲಿ ಕಾಲಿ ಜಾಗದಲ್ಲಿ ಗುಜರಿ ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಿಸಿಡಲಾಗಿತ್ತು.
ವಿಡಿಯೋ ನೋಡಿ:-
ಪಕ್ಕದಲ್ಲೇ ವಿದ್ಯುತ್ ಟ್ರಾನ್ಸ್ ಫಾರಮ್ ಇದ್ದು ಇದರಲ್ಲಿನ ವಿದ್ಯುತ್ ಕಿಡಿ ಗುಜರಿ ಪ್ಲಾಸ್ಟಿಕ್ ವಸ್ತುಗಳ ಮೇಲೆ ಬಿದ್ದಿದೆ. ಅದಿಕ ತಾಪಮಾನದಿಂದ ಬಿಸಿಲು ಹೆಚ್ಚಾಗಿದ್ದು ಪ್ಲಾಸ್ಟಿಕ್ ಗಳು ಉರಿದು ಪಕ್ಕದಲ್ಲೇ ನಿಲ್ಲಿಸಿಟ್ಟಿದ್ದ ಲಾರಿಗೂ ಬೆಂಕಿ ಹೊತ್ತಿಕೊಂಡಿದೆ.
ಇದನ್ನೂ ಓದಿ:-Honnavara ಬಂದರು ಪ್ರತಿಭಟನೆ – 50 ಮೀನುಗಾರರ ಬಂಧನ
ಇದಲ್ಲದೇ ದಟ್ಟ ಹೊಗೆ ಇಡೀ ಪ್ರದೇಶವನ್ನು ಆವರಿಸಿದ್ದು ಹೆದ್ದಾರಿಯೇ ಕಾಣದ ಸ್ಥಿತಿ ನಿರ್ಮಾಣವಾಗಿದೆ. ಸ್ಥಳಕ್ಕೆ ಬಂದ ಹೊನ್ನಾವರ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟರೂ ಬೆಂಕಿ ನಂದಿಸಲು ಆಗಿಲ್ಲ. ಈ ಹಿನ್ನಲೆಯಲ್ಲಿ ಭಟ್ಕಳದ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು ಬೆಂಕಿ ನಂದಿಸುವ ಪ್ರಯತ್ನ ಸಾಗಿದೆ. ಸದ್ಯ ಹೆದ್ದಾರಿ ಭಾಗದಲ್ಲಿ ವಾಹನ ಸಂಚಾರಕ್ಕೂ ಹೊಗೆಯಿಂದಾಗಿ ಅಡ್ಡಿಯಾಗಿದ್ದು ,ಬೆಂಕಿಯಿಂದ ಲಕ್ಷಾಂತರ ರುಪಾಯಿ ವಸ್ತುಗಳು ಬೆಂಕಿಗಾಹುತಿಯಾಗಿದೆ.
ಇನ್ನು ಆ ಭಾಗದಲ್ಲಿ ಯಾರು ಗುಜರಿ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದರು ಎಂಬ ಬಗ್ಗೆ ತಿಳಿಯಬೇಕಿದ್ದು ಸದ್ಯ ಆ ಭಾಗದಲ್ಲಿ ದಟ್ಟ ಹೊಗೆ ಆವರಿಸಿ ವಾತಾವರಣ ಕಲುಷಿತಗೊಂಡಿದೆ.