For the best experience, open
https://m.kannadavani.news
on your mobile browser.
Advertisement

ONLINE TRADING FRAUD:ಕೋಟಿ ಆಸೆಗೆ 41 ಲಕ್ಷ ಕಳೆದುಕೊಂಡ ಹೊನ್ನಾವರ ವ್ಯಾಪಾರಿ

ONLINE TRADING FRAUD NEWS 27 October 2014 :- ಲೈನ್ ಟ್ರೇಡಿಂಗ್ ವಂಚನೆಗಳ ಬಗ್ಗೆ ಎಷ್ಟೇ ಜನರಿಗೆ ಜಾಗೃತಿ ಮೂಡಿಸಿದರೂ ದುಪ್ಪಟ್ಟು ಹಣದ ಆಸೆಗೆ ಹಣ ಕಳೆದುಕೊಳ್ಳುವವರ ಸಂಖ್ಯೆ ಏರುತ್ತಲೇ ಇದೆ
11:06 PM Oct 27, 2024 IST | ಶುಭಸಾಗರ್
online trading fraud ಕೋಟಿ ಆಸೆಗೆ 41 ಲಕ್ಷ ಕಳೆದುಕೊಂಡ ಹೊನ್ನಾವರ ವ್ಯಾಪಾರಿ

ONLINE TRADING FRAUD NEWS 27 October 2014 :- ಲೈನ್ ಟ್ರೇಡಿಂಗ್ ವಂಚನೆಗಳ ಬಗ್ಗೆ ಎಷ್ಟೇ ಜನರಿಗೆ ಜಾಗೃತಿ ಮೂಡಿಸಿದರೂ ದುಪ್ಪಟ್ಟು ಹಣದ ಆಸೆಗೆ ಹಣ ಕಳೆದುಕೊಳ್ಳುವವರ ಸಂಖ್ಯೆ ಏರುತ್ತಲೇ ಇದೆ.

Advertisement

ಹೌದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕರ್ಕಿ ಯ ಕೃಷ್ಣಕಾಂತ್ ಎಂಬುವವರು ತಮ್ಮ ಮೊಬೈಲ್ ಗೆ ವಾಟ್ಸ್ ಅಪ್ ನಲ್ಲಿ Online Trading ಮಾಡುವ ಮೂಲಕ ಅತೀ ಹೆಚ್ಚು ಹಣ ಗಳಿಸಬಹುದೆಂಬ ಜಾಹಿರಾತನ್ನು ( advertisement) ಕಳುಹಿಸಿದ್ದನ್ನು ನೋಡಿ ಲಕ್ಷಾಂತರ ಹಣ ಕಳೆದುಕೊಂಡಿದ್ದಾರೆ.

ಹೇಗೆ ವಂಚನೆಯಾಗಿದ್ದು?

ತಮ್ಮ ಮೊಬೈಲ್ ಗೆ ಬಂದ ಮೆಸೇಜ್ ನ ನಮೂದಿರುವ ಸಂಖ್ಯೆಯನ್ನು ಕ್ಲಿಕ್ ಮಾಡಿದಾಗ ಅವರು 'PIN GROWTH HUB 1412' ಎಂಬ ಹೆಸರಿನ ವಾಟ್ಸಪ್ ಗ್ರೂಪ್ ಗೆ ಸೇರಿಕೊಂಡಿದ್ದಾರೆ.

ಇವರ ಟ್ರೇಡಿಂಗ್ ವ್ಯಾಲೆಟ್ ನಲ್ಲಿ ಹೆಚ್ಚು ಹಣ ಸಂಗ್ರಹವಾಗಿದ್ದು ತೋರಿಸಿದ್ದು, ಇದರ ಲಾಭ ಪಡೆದ ಸೈಬರ್ ವಂಚಕ ಹೆಚ್ಚಿನ ಹಣ ಹೂಡುವಂತೆ ನಂಬಿಸಿದ್ದಾರೆ.

ಇದನ್ನೂ ಓದಿ:-Honnavara| ಚಿರತೆ ದಾಳಿ ಬೋನು ಕಾಲಿ!

ಅಧಿಕ ಲಾಭ ಹೊಂದಿವ ಆಸಗೆ ಸೈಬರ್ ವಂಚಕ ಹೇಳಿದಂತೆ ಲಾಭಾಂಶದ ಹಣವನ್ನು 30 ದಿವಸದ ನಂತರ ನಗದೀಕರಣ ಮಾಡಿಕೊಂಡರೆ ಇನ್ನೂ ಹೆಚ್ಚಿನ ಲಾಭಾಂಶ ಕೊಡುವುದಾಗಿ ಆಮಿಶಕ್ಕೆ ಒಳಗಾಗಿ ಕೃಷ್ಣಕಾಂತ್ ವಂಚಕರು ಹೇಳಿದ ವಿವಿಧ ಬ್ಯಾಂಕ ಖಾತೆಗಳಿಗೆ ದಿನಾಂಕ: 08-09-2024 ರಿಂದ ದಿನಾಂಕ: 25-10-2024 ರವರೆಗೆ ಒಟ್ಟೂ ರೂ. 41,27,000-00 ಹಣವನ್ನು ಡಿಪಾಸಿಟ್ ಮಾಡಿದ್ದಾರೆ.

ನಂತರದಲ್ಲಿ ಕೃಷ್ಣ ರವರ ಟ್ರೇಡಿಂಗ್ ವ್ಯಾಲೇಟ್ ನಲ್ಲಿ ಒಟ್ಟೂ ರೂ. 1,60,00,000-00 ಹಣವು ಇರುವ ಬಗ್ಗೆ ಕಂಡು ಬಂದಿದ್ದು, ಈ ಹಣವನ್ನು ವಿತ್ ಡ್ರಾ ಮಾಡಲು ವಾಟ್ಸಪ್ ಗ್ರೂಪ್‌ನ ಅಡ್ಮಿನ್ ರವರಿಗೆ ಕೇಳಿದ್ದಾರೆ.

ಆದರೇ ಗ್ರೂಪ್ ಅಡ್ಮಿನ್ ಮಾಹಿತಿ ನೀಡದೇ ಸದರಿ ಗ್ರೂಪ್ ನಿಂದ ಕೃಷ್ಣಕಾಂತ್ ರನ್ನು ಬ್ಲಾಕ್ ಮಾಡಿದ್ದಲ್ಲದೇ , ವಾಟ್ಸಪ್ ಗ್ರೂಪ್ ನ್ನೂ ಸಹಾ ಡಿಲೀಟ್ ಮಾಡಿ ಹೂಡಿಕೆ ಮಾಡಿದ ರೂ. 41,27,000-00 ಹಣವನ್ನ ಎಗರಿಸಿ ವಂಚಿಸಿದ್ದಾರೆ.

ಈ ಕುರಿತು ಕಾರವಾರದ ಸೈಬರ್ ಕ್ರೈಂ ವಿಭಾಗದಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ