Honnavar ಹೊನ್ನಾವರ ಯುವಕನಿಗೆ ಚಾಕು ಇರಿತ ಪ್ರಕರಣ-ಇಬ್ಬರ ಬಂಧನ
Honnavar ಹೊನ್ನಾವರ ಯುವಕನಿಗೆ ಚಾಕು ಇರಿತ ಪ್ರಕರಣ-ಇಬ್ಬರ ಬಂಧನ
ಕಾರವಾರ /Honnavar news:- ಉತ್ತರ ಕನ್ನಡ (uttara kannada) ಜಿಲ್ಲೆಯ ಹೊನ್ನಾವರ ತಾಲ್ಲೂಕಿನಲ್ಲಿ ಬೈಕ್ ಓವರ್‌ಟೇಕ್ ಮಾಡಿದ ವಿಚಾರಕ್ಕೆ ಸಂಬಂಧಿಸಿದ ಗಲಾಟೆ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿತರನ್ನು ಪೊಲೀಸರು ಬಂಧಿಸಿದ್ದಾರೆ.
Honnavar| ಬೈಕ್ ಓವರ್ ಟೇಕ್ ವಿಚಾರ -ಹಿಂದೂ ಯುವಕನಿಗೆ ಮುಸ್ಲಿಂ ಯುವಕನಿಂದ ಮಾರಕಾಸ್ತ್ರದಿಂದ ಇರಿತ
ಗುರುವಾರ ಮಧ್ಯಾಹ್ನ 1.45ರ ಸುಮಾರಿಗೆ ಸಂಶಿ, ಕುದ್ರಗಿಯ ನಿವಾಸಿ ವಿವೇಕ ಸುರೇಶ್ ನಾಯ್ಕ ಹಾಗೂ ಸುದೀಪ ನಾಯ್ಕ ಅವರು ಮೋಟಾರ್ ಸೈಕಲ್‌ನಲ್ಲಿ ಗೇರುಸೊಪ್ಪಾದಿಂದ ಉಪ್ಪೋಣಿ ಕಡೆಗೆ ತೆರಳುತ್ತಿದ್ದ ವೇಳೆ ಘಟನೆ ನಡೆದಿತ್ತು.
ಮಾವಿನಹೊಳೆ ಬಸ್‌ಸ್ಟಾಪ್ ಹತ್ತಿರ ವಿವೇಕ ನಾಯ್ಕ ಅವರು ಮುಂಭಾಗದಿಂದ ಸಾಗುತ್ತಿದ್ದ ಮತ್ತೊಂದು ಮೋಟಾರ್‌ಸೈಕಲ್‌ನ್ನು ಓವರ್‌ಟೇಕ್ ಮಾಡುವಾಗ, ಆ ಬೈಕ್ ಸವಾರರಾದ ಮುಸ್ಲಿಂಕೇರಿ, ಸಂಶಿಯ ನಿವಾಸಿ ಮೊಹಮ್ಮದ್ ಅಸ್ನಾನ್(26) ಹಾಗೂ ಮಾವಿನಹೊಳೆ ಮೂಲದ ಚಾಲಕ ಪ್ರದೀಪ ವಿಷ್ಣು ಅಂಬಿಗ(26) ಅವರೊಂದಿಗೆ ವಾಗ್ವಾದಕ್ಕೆ ತಿರುಗಿತ್ತು.
Gokarna|ಗೋಕರ್ಣ ಕಡಲ ಅಲೆಯಲ್ಲಿ ನೀಲಿ ಬೆಳಕಿನ ವಿಸ್ಮಯ-ಕಡಲಿನಲ್ಲಿ ರಾತ್ರಿ ಸೂಸಿದ ನೀಲಿ ಬೆಳಕು
ಘಟನೆಯ ವೇಳೆ ಆರೋಪಿಯಾದ ಮೊಹಮ್ಮದ್ ಅಸ್ನಾನ್ ಅಸಭ್ಯವಾಗಿ ಕೈಸನ್ನೆ ಮಾಡಿದ್ದು, ಬಳಿಕ ವಿವೇಕ ನಾಯ್ಕ ಬೈಕ್ ನಿಲ್ಲಿಸಿ ವಿಚಾರಿಸಿದಾಗ ಮಾತಿನ ಚಕಮಕಿ ಉಂಟಾಯಿತು. ಈ ವೇಳೆ ಅಸ್ನಾನ್ ತನ್ನ ಕಿಸೆಯಿಂದ ಚಾಕುವನ್ನು ತೆಗೆದು ವಿವೇಕ ನಾಯ್ಕರ ಮೇಲೆ ದಾಳಿ ನಡೆಸಿದ್ದು, ಅವರಿಗೆ ಗಾಯಗಳಾಗಿವೆ. ಗಾಯಾಳು ವಿವೇಕ ನಾಯ್ಕರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ. ಗಂಭೀರ ಸ್ವರೂಪದ ಈ ಪ್ರಕರಣದಲ್ಲಿ ಆರೋಪಿಗಳಾದ ಮೊಹಮ್ಮದ್ ಅಸ್ನಾನ್ ಹಾಗೂ ಪ್ರದೀಪ ಅಂಬಿಗರನ್ನು ವಶಕ್ಕೆ ಪಡೆದು ದಸ್ತಗಿರಿ ಮಾಡಲಾಗಿದ್ದು, ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
Karwar |ಪತ್ನಿಗೆ ವಿಷವಿಟ್ಟು ಅಣಶಿ ಘಟ್ಟದ ಅರಣ್ಯದಲ್ಲಿ ಶವ ಎಸೆದುಹೋದ ಪತಿ!
ತನಿಖೆಯಿಂದ ಈ ಘಟನೆ ಯಾವುದೇ ಕೋಮು ದ್ವೇಷ ಅಥವಾ ಹಳೆಯ ವೈಷಮ್ಯದಿಂದ ನಡೆದದ್ದಲ್ಲ, ಬದಲಿಗೆ ಕ್ಷಣಿಕ ಆಕ್ರೋಶದಿಂದ ಸಂಭವಿಸಿದೆ ಎಂಬುದು ಬೆಳಕಿಗೆ ಬಂದಿದೆ. ಇದೇ ವೇಳೆ, ಘಟನೆಯ ಬಗ್ಗೆ ಸುಳ್ಳು ಸುದ್ದಿ ಹಾಗೂ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.