India: 24 ವಿಮಾನ ನಿಲ್ದಾಣಗಳು ಮೇ 15ರವರೆಗೆ ಬಂದ್
India: 24 ವಿಮಾನ ನಿಲ್ದಾಣಗಳು ಮೇ 15ರವರೆಗೆ ಬಂದ್
ಶ್ರೀನಗರ: ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಘರ್ಷ ಹೆಚ್ಚಾಗುತ್ತಿರುವ ಬೆನ್ನಲ್ಲೇ ಭಾರತ ಮತ್ತು ಪಾಕ್ ಗಡಿಯ ಬಳಿಯ 24 ವಿಮಾನ ನಿಲ್ದಾಣಗಳು (Airport) ಮೇ 15ರವರೆಗೆ ಬಂದಾಗಲಿವೆ.
ಭಾರತ -ಪಾಕ್ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆ ಬಂದ್ ವಿಸ್ತರಣೆ ಮಾಡಲಾಗಿದೆ. ಮೇ 15ರ ಬೆಳಗ್ಗೆ 5:30 ರವರೆಗೂ ಬಂದ್ ವಿಸ್ತರಿಸಲಾಗಿದೆ.
ವಿಮಾನಯಾನ ಸಂಸ್ಥೆಗಳಿಗೆ ಹಾಗೂ ವಿಮಾನ ನಿಲ್ದಾಣ ಅಧಿಕಾರಿಗಳಿಗೆ ಇದರ ಬಗ್ಗೆ ಮಾಹಿತಿ ನೀಡಲಾಗಿದೆ.
ಶ್ರೀನಗರ, ಜಮ್ಮು, ಅಮೃತಸರ, ಲೇಹ್, ಚಂಡೀಗಢ, ಧರ್ಮಶಾಲಾ, ಬಿಕಾನೇರ್, ರಾಜ್‌ಕೋಟ್, ಜೋಧ್‌ಪುರ ಮತ್ತು ಕಿಶನ್‌ಗಢ ವಿಮಾನ ನಿಲ್ದಾಣಗಳನ್ನು ಮೇ 15ರವರೆಗೆ ತಾತ್ಕಾಲಿಕವಾಗಿ ಮುಚ್ಚಲಾಗುತ್ತದೆ.
ಇದನ್ನೂ ಓದಿ:-Pakistan:ಪಾಕ್‌ನಿಂದ ಜಮ್ಮು & ಕಾಶ್ಮೀರ, ಪೂಂಚ್, ಉರಿ ಮೇಲೆ ಶೆಲ್ ದಾಳಿ
ತಾತ್ಕಾಲಿಕ ವಿಮಾನ ನಿಲ್ದಾಣ ಮುಚ್ಚುವಿಕೆಯಿಂದಾಗಿ ಈ ಸ್ಥಳಗಳಿಗೆ ಮತ್ತು ಅಲ್ಲಿಂದ ಹೊರಡುವ ಎಲ್ಲಾ ವಿಮಾನಗಳನ್ನು ಮೇ 15ರಂದು ಬೆಳಿಗ್ಗೆ 5.29 ರವರೆಗೆ ರದ್ದುಗೊಳಿಸಲಾಗುತ್ತದೆ ಎಂದು ಇಂಡಿಗೊ ಏರ್‌ಲೈನ್ಸ್ (Indigo Airlines) ಪ್ರಕಟಣೆ ನೀಡಿದೆ.
ಇದಲ್ಲದೇ ಟಿಕೆಟ್ ಬುಕ್ ಮಾಡಿರುವ ಪ್ರಯಾಣಿಕರು ಟಿಕೆಟ್ ರದ್ದುಗೊಳಿಸಿದರೆ ಪೂರ್ಣ ರೀತಿಯಲ್ಲಿ ಹಣ ಮರುಪಾವತಿ ಮಾಡಲಾಗುವುದು ಎಂದು ಇಂಡಿಗೊ ತಿಳಿಸಿದೆ.