ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Karwar: ಕದಂಬ ನೌಕಾನೆಲೆಯಲ್ಲಿ  ಪಾಕಿಸ್ತಾನಿ ಏಜೆಂಟರ ಬೇಹುಗಾರಿಕೆ-ಇಬ್ಬರು ನೌಕಾ ಸಿಬ್ಬಂದಿಗೆ ಕರೆ

Pakistani agents spying at Kadamba naval base - two naval personnel summoned
02:57 PM May 03, 2025 IST | ಶುಭಸಾಗರ್

Karwar: ಕದಂಬ ನೌಕಾನೆಲೆಯಲ್ಲಿ  ಪಾಕಿಸ್ತಾನಿ ಏಜೆಂಟರ ಬೇಹುಗಾರಿಕೆ-ಇಬ್ಬರು ನೌಕಾ ಸಿಬ್ಬಂದಿಗೆ ಕರೆ.

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

ಕಾರವಾರ :- ಪಹಲ್ಗಾವ್  (pahalgaw)ದಾಳಿಯ ಬಳಿಕ ಕೇಂದ್ರ ಸರ್ಕಾರ  ತೆಗೆದುಕೊಂಡ ನಿರ್ಧಾರಗಳು ಪಾಕಿಸ್ತಾನವನ್ನು ನಡುಗಿಸುವಂತೆ ಮಾಡಿದೆ.

ಆದ್ರೆ ಇದೀಗ ಕುತಂತ್ರಿ ಪಾಕಿಸ್ತಾನ (pakisthan) ತನ್ನ ಬೇಹುಗಾರಿಕಾ ಏಜಂಟರನ್ನು ಬಳಸಿ ಕಾರವಾರದ ಕದಂಬ ನೌಕಾನೆಯ ನೌಕೆಗಳು ಹಾಗೂ ವಿಶಾಕಪಟ್ಟಣಂ ನಲ್ಲಿರಿವ ನೌಕೆಗಳ ಮಾಹಿತಿ ಪಡೆಯಲು ಭಾರತೀಯ ನೌಕಾದಳದ ಅಧಿಕಾರಿಗಳ ಹೆಸರು ಬಳಸಿ ಕರೆ ಮಾಡುವ ಮೂಲಕ ಐಎನ್‌ಎಸ್ ವಿಕ್ರಾಂತ್ ಹಾಗೂ ಇತರ ಯುದ್ಧನೌಕೆಯ ಮಾಹಿತಿ ಪಡೆಯಲು ಯತ್ನ ನಡೆಸುತ್ತಿರುವುದು ಇದೀಗ ಬೆಳಕಿಗೆ ಬಂದಿದೆ.

ಇದನ್ನೂ ಓದಿ:-Navy :ಹಿಂದು ಮಹಾಸಾಗರ ದಲ್ಲಿ 9 ಮಿತ್ರ ರಾಷ್ಟ್ರದೊಂದಿಗೆ IOS ಸಾಗರ ಹೆಸರಿನ ಕಾರ್ಯಾಚರಣೆಗೆ ಕಾರವಾರ ದಲ್ಲಿ ಚಾಲನೆ

Advertisement

ಕಾರವಾರ ಹಾಗೂ ವಿಶಾಕ ಪಟ್ಟಣಮ್ ನಲ್ಲಿ ಕೆಲಸ ಮಾಡುವ ಇಬ್ಬರು ನೌಕಾದಳದ ಸಿಬ್ಬಂದಿಗೆ ಪಾಕಿಸ್ತಾನದ ಏಜೆಂಟರು ಕರೆ ಮಾಡಿ ತಾವು ನೌಕಾದಳದ ಅಧಿಕಾರಿಗಳು ಎಂದು ಹೇಳಿ  ಐಎನ್‌ಎಸ್ ವಿಕ್ರಾಂತ್, ಐಎನ್‌ಎಸ್ ವಿಕ್ರಮಾದಿತ್ಯ, ಐಎನ್‌ಎಸ್ ಸುಭದ್ರ ಮುಂತಾದವುಗಳ ಮಾಹಿತಿ ಪಡೆಯಲು ಯತ್ನ ಮಾಡಿದ್ದು ಈ ಬಗ್ಗೆ  ನೌಕಾದಳದ ಸಿಬ್ಬಂದಿಗಳು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

 ಇನ್ನು ಕೆಲವು ಅಧಿಕಾರಿಗಳನ್ನು ಹನಿಟ್ರಾಪ್ ಮಾಡಲು ಸಹ ಪ್ರಯತ್ನ ಪಟ್ಟಿರುವುದು ಬೆಳಕಿಗೆ ಬಂದಿದ್ದು ಎಚ್ಚೆತ್ತ  ಅಧಿಕಾರಿಗಳು ನೌಕಾದಳದ ಯಾವ ಮಾಹಿತಿಯನ್ನು ನೀಡದಂತೆ ಸಂಬಂಧಪಟ್ಟ ನೌಕಾ ಸಿಬ್ಬಂದಿಗಳಿಗೆ ತಿಳಿಸಿದ್ದಾರೆ.

ಇದಲ್ಲದೇ ಈ ಬಗ್ಗೆ ಕಾರವಾರದ(karwar) ನೌಕಾದಳದ ಅಧಿಕಾರಿಗಳ ಗ್ರೂಪ್ ನಲ್ಲಿ ಸಂದೇಶ ಹಾಕಿದ್ದು ಎಚ್ಚರಿಕೆಯಿಂದ ಇರಲು ತಿಳಿಸಲಾಗಿದೆ. 2024 ರ ಆಗಷ್ಟ್ ನಲ್ಲಿ ಹಣಕ್ಕಾಗಿ ಕದಂಬ ನೌಕಾನೆಲೆಯ ಹಾಗೂ ವಿಕ್ರಮಾಧಿತ್ಯ ಹಡಗಿನ ಮಾಹಿತಿ ಹಾಗೂ ಫೋಟೋ ಹಂಚಿಕೊಂಡಿದ್ದ ಕಾರವಾರ ತಾಲೂಕಿನ ತೋಡೂರು ಗ್ರಾಮದ ಸುನೀಲ್ ನಾಯ್ಕ್, ಮುದ್ಗಾ ಗ್ರಾಮದ ವೇತನ್ ತಾಂಡೇಲ್ ಮತ್ತು ಹಳವಳ್ಳಿ ಗ್ರಾಮದ ಅಕ್ಷಯ್ ರವಿ ನಾಯ್ಕ್ ಎಂಬ ಮೂರು ಜನರನ್ನು ಎನ್.ಐ.ಎ ಬಂಧಿಸಿತ್ತು. ಈ ಘಟನೆ ನಂತರ ಕದಂಬ ನೌಕಾನೆಲೆಯ ವ್ಯಾಪ್ತಿಯೊಳಗೆ ಮೊಬೈಲ್ ನನ್ನು ಸಂಪೂರ್ಣ ನಿಷೇಧ ಮಾಡಲಾಗಿತ್ತು.

Advertisement
Tags :
callingKadamba naval baseKarnatakaKasmirNavypahalgamPakisthan spyನೌಕಾದಳಪೆಹಲ್ಗಾಮ್
Advertisement
Next Article
Advertisement