Joida| ಅನಾರೋಗ್ಯದಿಂದ ಜೀವ ಚಲ್ಲಿದ ಪಣಸೋಲಿಯ ಗೌರಿ ಆನೆ
Joida| ಅನಾರೋಗ್ಯದಿಂದ ಜೀವ ಚಲ್ಲಿದ ಪಣಸೋಲಿಯ ಗೌರಿ ಆನೆ.
Jonida news:- ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದ ಕಾಳಿ ಹುಲಿಸಂರಕ್ಷಿತ ಪ್ರದೇಶದ ಆನೆ ಶಿಬಿರದಲ್ಲಿ ರಕ್ಷಣೆಯಲ್ಲಿದ್ದ ಎರಡು ವರ್ಷದ ಹೆಣ್ಣಾನೆ ಗೌರಿ ಇಂದು ಅನಾರೋಗ್ಯದ ಕಾರಣ ಅಸುನೀಗಿದೆ.
ಎರಡು ತಿಂಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದ ಗೌರಿ ಆನೆ ಮರಿಗೆ ಚಿಕಿತ್ಸೆ ನೀಡಲಾಗುತಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೇ ಗೌರಿ ಮರಿಆನೆ ಅಸುನೀಗಿದೆ.
Joida| ಪೊಲೀಸ್ ಅಧಿಕಾರಿಗೆ ಮೆಸೇಜ್ ಮಾಡಿ ***ಗೆ ಕರೆದು ಠಾಣೆಯಲ್ಲೇ ಹೊಡೆದಾಡಿಕೊಂಡ ಕಾಸ್ಟೆಬಲ್ ಸಸ್ಪೆಂಡ್!
ಪ್ರವಾಸಿಗರ ಆಕರ್ಷಣೆಗೆ ಪಾತ್ರವಾಗಿದ್ದ ಈ ಆನೆ ಮರಿ ಆನೆ ಬಿಡಾರದ ರಂಗು ಹೆಚ್ಚಿಸಿತ್ತು. ಪ್ರವಾಸಿಗರ ಆಕರ್ಷಣೀಯ ಕೇಂದ್ರ ಬಿಂದುವಾಗಿದ್ದ ಈ ಆನೆ ಇದೀಗ ಅನಾರೋಗ್ಯ ಕಾರಣ ಸಾವು ಕಂಡಿದೆ.
ಕಳೆದ ಮೂರು ತಿಂಗಳ ಹಿಂದೆ ಇದೇ ಭಾಗದಲ್ಲಿ ವಿದ್ಯುತ್ ತಂತಿ ಸ್ಪರ್ಷಿಸಿ ಆನೆಯೊಂದು ಮೃತಪಟ್ಟಿತ್ತು. ಆದರೇ ಇದೀಗ ಈ ಆನೆ ಮರಿ ಸಹ ಮೃತಪಟ್ಟಿದ್ದು ಹೊಸದಾಗಿ ನಿರ್ಮಾಣಗೊಂಡಿರುವ ಆನೆ ಬಿಡಾರಕ್ಕೆ ಹಿನ್ನಡೆಯಾಗುವಂತೆ ಮಾಡಿದೆ.
ಸಧ್ಯ ಯಾವ ಕಾರಣಕ್ಕಾಗಿ ಆನೆಯು ಅನಾರೋಗ್ಯ ಪೀಡಿತವಾಗಿತ್ತು ಎಂಬ ಬಗ್ಗೆ ಅರಣ್ಯ ಇಲಾಖೆ ಮಾಹಿತಿ ಗೌಪ್ಯವಾಗಿಟ್ಟಿದೆ. ಮರಣೋತ್ತರ ಪರೀಕ್ಷೆ ನಡೆಸಿದ್ದು ನಂತರ ಯಾಕಾಗಿ ಸಾವಾಗಿದೆ ಎಂಬ ಬಗ್ಗೆ ಮಾಹಿತಿ ತಿಳಿಯಬೇಕಿದೆ.